ಅಂಜನಾದ್ರಿ ಬೆಟ್ಟದ ವಾಯುಪುತ್ರನ ದೇಗುಲದ ಹುಂಡಿ ಕಾಣಿಕೆ ಎಣಿಕೆ: 75 ದಿನದಲ್ಲಿ 24 ಲಕ್ಷ ರೂಪಾಯಿ ಸಂಗ್ರಹ

| Updated By: ಆಯೇಷಾ ಬಾನು

Updated on: Dec 01, 2021 | 12:31 PM

ಆನೆಗೊಂದಿ ಚಿಕ್ಕರಾಂಪುರ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟದಲ್ಲಿ ನವೆಂಬರ್ 30 ರಂದು ಗಂಗಾವತಿ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಯು. ನಾಗರಾಜ ಅವರ ನೇತೃತ್ವದಲ್ಲಿ ಹುಂಡಿ ಕಾಣಿಕೆ ಕಾರ್ಯ ನೆರವೇರಿದೆ.

ಅಂಜನಾದ್ರಿ ಬೆಟ್ಟದ ವಾಯುಪುತ್ರನ ದೇಗುಲದ ಹುಂಡಿ ಕಾಣಿಕೆ ಎಣಿಕೆ: 75 ದಿನದಲ್ಲಿ 24 ಲಕ್ಷ ರೂಪಾಯಿ ಸಂಗ್ರಹ
ಆಂಜನೇಯ ಸ್ವಾಮಿ ದೇಗುಲದ ಹುಂಡಿ ಕಾಣಿಕೆ ಎಣಿಕೆ
Follow us on

ಕೊಪ್ಪಳ: ಜಿಲ್ಲೆಯ ಆಂಜನೇಯ ಸ್ವಾಮಿ ದೇಗುಲದ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆದಿದ್ದು 75 ದಿನದಲ್ಲಿ 23.48 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಸೆಪ್ಟೆಂಬರ್ 6 ರಿಂದ ನವಂಬರ್ 30 ರವರೆಗೆ 23.48 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಅದರಲ್ಲಿ ಮೊದಲು ಒಂದು ತಿಂಗಳು ವೀಕೆಂಡ್ ಹಾಗೂ ಅಮವಾಸ್ಯೆಯೆಂದು ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.

ಆನೆಗೊಂದಿ ಚಿಕ್ಕರಾಂಪುರ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟದಲ್ಲಿ ನವೆಂಬರ್ 30 ರಂದು ಗಂಗಾವತಿ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಯು. ನಾಗರಾಜ ಅವರ ನೇತೃತ್ವದಲ್ಲಿ ಹುಂಡಿ ಕಾಣಿಕೆ ಕಾರ್ಯ ನೆರವೇರಿದೆ. 2021 ಸೆಪ್ಟೆಂಬರ್ 6ರಿಂದ 4 ಶನಿವಾರ, 4 ರವಿವಾರ, 1 ಅಮಾವಾಸ್ಯೆ ಹೊರತುಪಡಿಸಿ ನವೆಂಬರ್ 30 ರವರೆಗೆ ಒಟ್ಟು 75 ದಿನಗಳ ಅವಧಿಯಲ್ಲಿ ಒಟ್ಟು 23,48,065/- ರೂ ಗಳು ಸಂಗ್ರಹವಾಗಿದೆ.

ಹುಂಡಿ ಕಾಣಿಕೆ ಎಣಿಕೆ

ಈ ಸಂದರ್ಭದಲ್ಲಿ ವಿ.ಹೆಚ್ ಹೊರಪೇಟಿ ಗ್ರೇಡ್ 2 ಗಂಗಾವತಿ ತಹಶೀಲ್ದಾರರು ಹಾಗೂ ಅನಂತ ಜೋಶಿ ಕೃಷ್ಣವೇಣಿ ಶಿರಸ್ತೇದಾರರು, ಕಂ.ನಿ.ಗಂಗಾವತಿ ಕಾರ್ಯದರ್ಶೀ ಅಂಜನಾದ್ರಿ ಬೆಟ್ಟ ಮಂಜುನಾಥ ಹಿರೇಮಠ ಹಾಗೂ ಶ್ರೀಕಂಠ ಅನಿತಾ ಇಂದಿರಾ ಅನ್ನಪೂರ್ಣ ಪ್ರ.ದ.ಸ. ಪೂಜಾ ಗ್ರಾಲೆ ಹಾಗೂ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಅಮರೇಶ ಕವಿತಾ ಇತರರು ಹಾಗೂ ಪಿ.ಕೆ.ಜಿ.ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ರಾಜಶೇಖರ, ಸುನಿಲ್ ಪೋಲಿಸ್ ಸಿಬ್ಬಂದಿ ತಿಮ್ಮಾರೆಡ್ಡಿ, ವೆಂಕಟೇಶ ವ್ಯವಸ್ಥಾಪಕ ಹಾಗೂ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು.

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು. ಕಳೆದ ಬಾರಿ ದಿ 11-09-2021 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ 10,14,888 /- ಸಂಗ್ರಹವಾಗಿತ್ತು ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ ಮೇಳೈಸಿದೆ ರಾಮ ಮಂದಿರದ ಭೂಮಿ ಪೂಜೆಯ ಸಂಭ್ರಮ