ಕೊಪ್ಪಳದಲ್ಲಿ ಡೆಂಗ್ಯೂ ರುದ್ರ ನರ್ತನ: ಅ.3ರವರೆಗೆ ಜಿಲ್ಲೆಯಲ್ಲಿ 2,568 ಶಂಕಿತ ಡೆಂಗ್ಯೂ ಪ್ರಕರಣ ದಾಖಲು

| Updated By: ಆಯೇಷಾ ಬಾನು

Updated on: Oct 12, 2023 | 12:27 PM

ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ 50 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್, ಸೆಪ್ಟೆಂಬರ್ ಎರಡೇ ತಿಂಗಳಲ್ಲಿ 61 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಪ್ರತಿದಿನ ಒಂದೊಂದು ಹೊಸ ಡೆಂಗ್ಯೂ ಪ್ರಕರಣಗಳು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುತ್ತಿವೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ಕೊಪ್ಪಳದಲ್ಲಿ ಡೆಂಗ್ಯೂ ರುದ್ರ ನರ್ತನ: ಅ.3ರವರೆಗೆ ಜಿಲ್ಲೆಯಲ್ಲಿ 2,568 ಶಂಕಿತ ಡೆಂಗ್ಯೂ ಪ್ರಕರಣ ದಾಖಲು
ಕೊಪ್ಪಳ ಜಿಲ್ಲಾಸ್ಪತ್ರೆ
Follow us on

ಕೊಪ್ಪಳ, ಅ.12: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ (Dengue)  ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಪ್ಪಳ (Koppal) ತಾಲೂಕಿನಲ್ಲೇ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ 50 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್, ಸೆಪ್ಟೆಂಬರ್ ಎರಡೇ ತಿಂಗಳಲ್ಲಿ 61 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಪ್ರತಿದಿನ ಒಂದೊಂದು ಹೊಸ ಡೆಂಗ್ಯೂ ಪ್ರಕರಣಗಳು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುತ್ತಿವೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕಳೆದ 3 ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ತಾಪದಿಂದ ಜ್ವರ, ಮೈ ಕೈ ನೋವು, ಕೆಮ್ಮು, ನಗಡಿ ಹೆಚ್ಚಳವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳವಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಜ್ವರ ಕಾಣಿಸಿಕೊಂಡವರಿಗೆ ಕಡ್ಡಾಯವಾಗಿ ಡೆಂಗ್ಯೂ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಅ.3ರವರೆಗೆ ಜಿಲ್ಲೆಯಲ್ಲಿ 2,568 ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕೊಪ್ಪಳದಲ್ಲಿ 44, ಗಂಗಾವತಿಯಲ್ಲಿ 18, ಕುಷ್ಟಗಿಯಲ್ಲಿ 20 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 29 ಡೆಂಘೀ ಪ್ರಕರಣಗಳು ಧೃಡಪಟ್ಟಿವೆ ಎಂದು ಡೆಂಗ್ಯೂ ಜ್ವರದ ಬಗ್ಗೆ ಕೊಪ್ಪಳ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಡೆಂಗ್ಯೂ, ಚಿಕೂನ್​ಗುನ್ಯಾ ಉಲ್ಭಣ; ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು

ಡೆಂಗ್ಯೂ ಲಕ್ಷಣಗಳು

ಈಡಿಸ್​ ಈಜಿಪ್ಟಿ ಎಂಬ ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತದೆ. ಈ ರೋಗದ ಲಕ್ಷಣ ನಾಲ್ಕರಿಂದ ಏಳು ದಿನವರೆಗೆ ಕಂಡುಬರುತ್ತದೆ. ಸಾಮಾನ್ಯ ಜ್ವರ, ಸ್ನಾಯು ಮತ್ತು ಬೆನ್ನು ನೋವು ಕಂಡು ಬರುತ್ತದೆ. ತೀವ್ರತರ ರೋಗ ಹೊಂದಿರುವವರಲ್ಲಿ ಡೆಂಗ್ಯೂ ಹೆಮರಾಜಿಕ್​ ಅಥವಾ ಆಘಾತ ಸಿಂಡ್ರೋಮ್​ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಡೆಂಗ್ಯೂ ಪತ್ತೆಯ ಪರೀಕ್ಷೆ ಎನ್​ಎಸ್​1 ಅನ್ನು ಪಡೆಯಬಹುದು.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:27 pm, Thu, 12 October 23