ಕೊಪ್ಪಳದಲ್ಲಿ ಸಮರ್ಪಕ ಬಸ್​ ಸೌಲಭ್ಯಕ್ಕೆ ಆಗ್ರಹಿಸಿ ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 24, 2022 | 2:00 PM

ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಚಾಲಕ ನಿರ್ವಾಹಕರ ಮಾತಿಗೂ ವಿದ್ಯಾರ್ಥಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. 

ಕೊಪ್ಪಳದಲ್ಲಿ ಸಮರ್ಪಕ ಬಸ್​ ಸೌಲಭ್ಯಕ್ಕೆ ಆಗ್ರಹಿಸಿ ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳು.
Follow us on

ಕೊಪ್ಪಳ: ಸಮಯಕ್ಕೆ ಸರಿಯಾಗಿ‌ ಬಸ್​ ಬಾರದ ಹಿನ್ನೆಲೆ ವಿದ್ಯಾರ್ಥಿಗಳು (students) ಪ್ರತಿಭಟನೆ ಮಾಡಿದ್ದು, ರಸ್ತೆಯಲ್ಲೇ ಓದಲು ಕುಳಿತು ರಸ್ತೆ ತಡೆ ಹಿಡಿದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕು ಬಾದಿಮನಾಳ ಕ್ರಾಸ್ ಬಳಿ ನಡೆದಿದೆ. ಪ್ರತಿದಿನ 3 ಕಿ.ಮೀ. ನಡೆದು  ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿರುವ ಪರಿಸ್ಥತಿ ನಿರ್ಮಾಣವಾಗಿದ್ದು, ಸಮಯಕ್ಕೆ ಸರಿಯಾಗಿ ಬಸ್​ ಕೂಡ ಬರುವುದಿಲ್ಲ ಎಂದು ಆರೋಪಿಸಿದರು. ಕುಷ್ಟಗಿ ತಾಲೂಕು ಕೋನಾಪೂರ ಗ್ರಾಮದ ವಿದ್ಯಾರ್ಥಿಗಳಿಂದ ಏಕಾಏಕಿ ಬಸ್ ತಡೆದು ಪ್ರತಿಭಟನೆ ಮಾಡಲಾಗಿದೆ. ಕೊನಾಪೂರ, ಪರಮನಟ್ಟಿ ಗ್ರಾಮದಿಂದ ಬಾದಿಮನಾಳ ಗ್ರಾಮದ ಶಾಲೆ ಬರುವ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಚಾಲಕ ನಿರ್ವಾಹಕರ ಮಾತಿಗೂ ವಿದ್ಯಾರ್ಥಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ವಾಹನಗಳು ಕ್ರ್ಯಾಶ್ ಟೆಸ್ಟ್ ಆಧಾರದ ಮೇಲೆ ಸ್ಟಾರ್ ರೇಟಿಂಗ್ ಪಡೆಯುತ್ತವೆ: ನಿತಿನ್ ಗಡ್ಕರಿ

ಈ ಕುರಿತಾಗಿ ವಿದ್ಯಾರ್ಥಿಯೊಬ್ಬಳು ಮಾತನಾಡಿದ್ದು, ಮಾರ್ಗ ಮಧ್ಯೆ ಸಾಕಷ್ಟು ಮರಗಳ ಕೊಂಬೆಗಳಿದ್ದು, ಅದರಿಂದ ಬಸ್ಸಿನ ಗಾಜು ಒಡೆಯುವ ಸಾಧ್ಯತೆ ಇದೆ ಹಾಗಾಗಿ ನಾವು ಬರಲ್ಲ ಎಂದು ಬಸ್ ಚಾಲಕ ನಿರ್ವಾಹಕರು ಹೇಳುತ್ತಾರೆಂದು ವಿದ್ಯಾರ್ಥಿನಿ ಹೇಳಿದಳು. ಪ್ರತಿ ಭಾರಿಯೂ ಸಂಬಂಧಪಟ್ಟವರಿಗೆ ಹೇಳಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿದಿನ 3 ಕಿ.ಮೀ. ನಡೆದುಕೊಂಡು ಹೋಗಬೇಕು. ನಡೆದುಕೊಂಡು ಹೋದರು ಸಹ ಶಾಲೆಗೆ ಸರಿಯಾದ ಸಮಕ್ಕೆ ತಲುಪಲಾಗುತ್ತಿಲ್ಲ. ಶಿಕ್ಷಕರು ಪ್ರತಿನಿತ್ಯ ನಮ್ಮನ್ನ ಬೈಯುತ್ತಾರೆ. ಹಾಗಾಗಿ ಈ ಸಲ ಎರಡು ಹೊತ್ತು ಬಸ್​ ಬಿಡುವವರೆಗೂ ನಾವು ಪ್ರತಿಭಟಿಸುತ್ತೇವೆ ಎಂದು ವಿದ್ಯಾರ್ಥಿನಿ ಹೇಳಿದಳು.

ಇದನ್ನೂ ಓದಿ: ENG vs NZ: ಆಂಗ್ಲರ ಕೈ ಹಿಡಿದ ಅದೃಷ್ಟ; ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದ ಕಿವೀಸ್ ಬ್ಯಾಟರ್! ವಿಡಿಯೋ ನೋಡಿ