ಶೀಘ್ರದಲ್ಲೇ ನಿಮ್ಮ ವಾಹನಗಳು ಸ್ಟಾರ್ ರೇಟಿಂಗ್ ಪಡೆಯುತ್ತವೆ ! ಅದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ಶೀಘ್ರದಲ್ಲೇ ವಾಹನಗಳು ಕ್ರ್ಯಾಶ್ ಟೆಸ್ಟ್ ಆಧಾರದ ಮೇಲೆ ಸ್ಟಾರ್ ರೇಟಿಂಗ್ ಪಡೆಯುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಬಗ್ಗೆ ಸಚಿವರು ಸರಣಿ ಟ್ವೀಟ್ ಮಾಡಿದ್ದಾರೆ.
ಹೊಸದಿಲ್ಲಿ: ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ (New Car Assessment Program) ಭಾರತ್ ಎನ್‌ಸಿಎಪಿ (Bharath NCAP), ಭಾರತದಲ್ಲಿ ವಾಹನಗಳಿಗೆ ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ‘ಸ್ಟಾರ್ ರೇಟಿಂಗ್’ಗಳು ನೀಡಲಾಗುವ ಕಾರ್ಯವಿಧಾನವನ್ನು ಪ್ರಸ್ತಾಪಿಸುತ್ತದೆ ಮತ್ತು ಶೀಘ್ರದಲ್ಲೇ ವಾಹನಗಳು ಕ್ರ್ಯಾಶ್ ಟೆಸ್ಟ್ ಆಧಾರದ ಮೇಲೆ ಸ್ಟಾರ್ ರೇಟಿಂಗ್ ಪಡೆಯುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಅವರ ಪ್ರಕಾರ, ಭಾರತ್ ಎನ್‌ಸಿಎಪಿ ನಮ್ಮ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತವನ್ನು ವಿಶ್ವದ ಅಗ್ರ ಆಟೋಮೊಬೈಲ್ ಹಬ್ ಮಾಡುವ ಉದ್ದೇಶದೊಂದಿಗೆ ನಿರ್ಣಾಯಕ ಸಾಧನವಾಗಿದೆ ಎಂದು ಸಾಬೀತುಪಡಿಸುತ್ತದೆ.
ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ ಕೇಂದ್ರ ಸಚಿವರು, ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮವು ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರು ತಮ್ಮ ಸ್ಟಾರ್ ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಸುರಕ್ಷಿತ ವಾಹನಗಳನ್ನು ತಯಾರಿಸಲು ಭಾರತದಲ್ಲಿ ಮೂಲ ಉಪಕರಣ ತಯಾರಕರ (OEMs) ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.
Star Rating of Indian Cars based on Crash Tests is extremely crucial not only to ensure structural and passenger safety in cars, but to also increase the export-worthiness of Indian automobiles.
— Nitin Gadkari (@nitin_gadkari) June 24, 2022
“ನಾನು ಭಾರತ್ ಎನ್‌ಸಿಎಪಿ ಅನ್ನು ಪರಿಚಯಿಸಲು ಕರಡು ಜಿಎಸ್‌ಆರ್ ಅಧಿಸೂಚನೆಯನ್ನು ಅನುಮೋದಿಸಿದ್ದೇನೆ. ಇದರಲ್ಲಿ ಭಾರತದಲ್ಲಿನ ಆಟೋಮೊಬೈಲ್‌ಗಳಿಗೆ ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್‌ಗಳನ್ನು ನೀಡಲಾಗುವುದು” ಎಂದು ಹೇಳಿದರು.
I have now approved the Draft GSR Notification to introduce Bharat NCAP (New Car Assessment Program), wherein automobiles in India shall be accorded Star Ratings based upon their performance in Crash Tests. @PMOIndia
— Nitin Gadkari (@nitin_gadkari) June 24, 2022
“ಕ್ರ್ಯಾಶ್ ಟೆಸ್ಟ್‌ಗಳ ಆಧಾರದ ಮೇಲೆ ಭಾರತೀಯ ಕಾರುಗಳ ಸ್ಟಾರ್ ರೇಟಿಂಗ್‌ಗಳು ಕಾರುಗಳಲ್ಲಿ ರಚನಾತ್ಮಕ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾತ್ರವಲ್ಲದೆ ಭಾರತೀಯ ಆಟೋಮೊಬೈಲ್‌ಗಳ ರಫ್ತು ಯೋಗ್ಯತೆಯನ್ನು ಹೆಚ್ಚಿಸಲು ಅತ್ಯಂತ ನಿರ್ಣಾಯಕವಾಗಿದೆ” ಎಂದರು.
“ಭಾರತ್ ಎನ್‌ಸಿಎಪಿಯ ಪರೀಕ್ಷಾ ಪ್ರೋಟೋಕಾಲ್ ಅನ್ನು ಅಸ್ತಿತ್ವದಲ್ಲಿರುವ ಭಾರತೀಯ ನಿಯಮಾವಳಿಗಳಲ್ಲಿ ಜಾಗತಿಕ ಕ್ರ್ಯಾಶ್-ಟೆಸ್ಟ್ ಪ್ರೋಟೋಕಾಲ್‌ಗಳೊಂದಿಗೆ ಜೋಡಿಸಲಾಗುತ್ತದೆ. ಒಇಎಮ್‌ಗಳು ತಮ್ಮ ವಾಹನಗಳನ್ನು ಭಾರತದ ಸ್ವಂತ ಆಂತರಿಕ ಪರೀಕ್ಷಾ ಸೌಲಭ್ಯಗಳಲ್ಲಿ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ” ಎಂದು ಗಡ್ಕರಿ ಹೇಳಿದರು.
Published On - 1:58 pm, Fri, 24 June 22