ENG vs NZ: ಆಂಗ್ಲರ ಕೈ ಹಿಡಿದ ಅದೃಷ್ಟ; ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದ ಕಿವೀಸ್ ಬ್ಯಾಟರ್! ವಿಡಿಯೋ ನೋಡಿ
ENG vs NZ: ಹೆನ್ರಿ ನಿಕೋಲಸ್ ಔಟ್ ಆದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ಸ್ವತಃ ಎಂಸಿಸಿ ಟ್ವೀಟ್ ಮಾಡುವ ಮೂಲಕ ನಿಯಮಗಳನ್ನು ತಿಳಿಸಿದೆ.
ಗುರುವಾರ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ದಿನದಂದು ಚಹಾಕ್ಕೆ ಮುನ್ನ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್ (Henry Nicholas) ಕೊನೆಯ ಎಸೆತದಲ್ಲಿ ವಿಚಿತ್ರವಾಗಿ ಔಟಾದರು. ವಿರಾಮದ ತನಕ ಕಿವೀಸ್ 5 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಹೆನ್ರಿ ನಿಕೋಲ್ಸ್ ಅವರ ವಿಕೆಟ್ ಪತನ ಕಾಮೆಂಟರಿ ಬಾಕ್ಸ್‌ನಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಮೈದಾನದಲ್ಲಿ ಏನಾಯಿತು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟರಲ್ಲೇ ನಿಕೋಲ್ಸ್ ಮೈದಾನದಿಂದ ಹೊರಬರಬೇಕಾಯ್ತು. ಕ್ರಿಕೆಟ್‌ನ ಆಡಳಿತ ಮಂಡಳಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (MCC) ಈ ವಿಕೆಟ್ ಹೇಗೆ ಪತನವಾಯಿತು ಎಂಬುದನ್ನು ಟ್ವೀಟ್ ಮಾಡಿದೆ.
ವಿಚಿತ್ರವಾಗಿ ಔಟಾದ ನಿಕೋಲ್ಸ್
ನಿಕೋಲ್ಸ್ ಅವರು ಎದುರಾಳಿ ಸ್ಪಿನ್ನರ್ ಜಾಕ್ ಲೀಚ್ ಅವರ ಎಸೆತವನ್ನು ಸ್ಟ್ರೈಟ್ ಡ್ರೈವ್ ಮಾಡಿದರು. ಆದರೆ ಚೆಂಡು ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಹ ಬ್ಯಾಟ್ಸ್‌ಮನ್ ಡೇರಿಲ್ ಮಿಚೆಲ್‌ಗೆ ಬಡಿದು ಮಿಡ್-ಆಫ್ ಕಡೆ ಹೋಯಿತು. ಮಿಡ್ ಆಫ್‌ನಲ್ಲಿ ನಿಂತಿದ್ದ ಅಲೆಕ್ಸ್ ಲೀಸ್ ಸುಲಭ ಕ್ಯಾಚ್ ಪಡೆದರು. ಇದೆಲ್ಲವನ್ನು ನಿಕೋಲ್ಸ್ ಅರ್ಥಮಾಡಿಕೊಳ್ಳುವಷ್ಟರಲ್ಲಿ, ಅಂಪೈರ್ ನಿಕೋಲ್ಸ್ ಔಟ್ ಎಂದು ತೀರ್ಮಾನ ನೀಡಿದರು. ಇದರೊಂದಿಗೆ ಲೀಚ್ ಮತ್ತೊಂದು ವಿಕೆಟ್ ಪಡೆಯುವ ಮೂಲಕ ದಿನದಾಟವನ್ನು ಅಂತ್ಯಗೊಳಿಸಿದರು. ಆದರೆ ನಿಕೋಲ್ಸ್ ಮುಖದಲ್ಲಿ ಈ ರೀತಿ ಔಟಾಗಿರುವುದು ಆಘಾತಕ್ಕೆ ಕಾರಣವಾಗಿತ್ತು. ನಿಕೋಲ್ಸ್ 99 ಎಸೆತಗಳಲ್ಲಿ 19 ರನ್ ಗಳಿಸಿ ಪೆವಿಲಿಯನ್ ಸೇರಬೇಕಾಯ್ತು.
ಇದನ್ನೂ ಓದಿ: ENG vs NZ: ಜೋ ರೂಟ್ ದಾಖಲೆಯ ಶತಕ; ಮೊದಲ ಟೆಸ್ಟ್ನಲ್ಲಿ ಕಿವೀಸ್ಗೆ ಸೋಲಿನ ರುಚಿ ತೋರಿಸಿದ ಆಂಗ್ಲರು
ನಿಯಮಗಳೇನು?
ನಿಕೋಲಸ್ ಔಟಾದ ತಕ್ಷಣ, ಕಾಮೆಂಟೇಟರ್ ನಾಸಿರ್ ಹುಸೇನ್ ಎಮ್ಸಿಸಿ ನಿಯಮಗಳನ್ನು ವಿವರಿಸುತ್ತಾ, ಆಕ್ಟ್ 33.2.2.3 ಅಡಿಯಲ್ಲಿ, ಬಾಲ್ ವಿಕೆಟ್, ಅಂಪೈರ್, ಇತರ ಫೀಲ್ಡರ್, ರನ್ನರ್ ಅಥವಾ ಬ್ಯಾಟ್ಸ್‌ಮನ್‌ಗೆ ಬಡಿದ ನಂತರ ಆ ಬಾಲನ್ನು ಫೀಲ್ಡರ್ ಕ್ಯಾಚ್ ಮಾಡಿದರೆ ಅದನ್ನು ಬ್ಯಾಟರ್ ಔಟ್ ಎಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.
An unfortunate dismissal? Yes. But wholly within the Laws.
Law 33.2.2.3 states it will be out if a fielder catches the ball after it has touched the wicket, an umpire, another fielder, a runner or the other batter.
Read the Law: https://t.co/cCBoJd6xOSpic.twitter.com/eKiAWrbZiI
— Marylebone Cricket Club (@MCCOfficial) June 23, 2022
ದಿನದಾಟ ಹೇಗಿತ್ತು?
ಊಟದ ಹೊತ್ತಿಗೆ ನ್ಯೂಜಿಲೆಂಡ್ ಮೂರು ವಿಕೆಟ್ ಕಳೆದುಕೊಂಡಿತ್ತು. ಊಟದ ನಂತರ, ಡೆವೊನ್ ಕಾನ್ವೇ (26) ಜೇಮೀ ಓವರ್ಟನ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ನಿಕೋಲ್ಸ್ 10 ರನ್‌ಗಳಿಸಿದ್ದಾಗ ಅವರಿಗೆ ಒಂದು ಜೀವದಾನವೂ ಸಿಕ್ಕಿತು. ಆದರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ರಿವ್ಯೂವ್ ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದರು ಇದರಿಂದ ಅವರಿಗೆ ಜೀವದಾನ ಸಿಕ್ಕಿತು.
ಮಿಚೆಲ್ ಈ ಸರಣಿಯಲ್ಲಿ ಎರಡು ಶತಕ ಮತ್ತು ಅರ್ಧ ಶತಕ ಗಳಿಸಿದ್ದಾರೆ ಮತ್ತು ಸುದೀರ್ಘ ಇನ್ನಿಂಗ್ಸ್ ಆಡುವ ಹಾದಿಯಲ್ಲಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆಯಲ್ಲಿರುವ ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಆದರೆ ಖಾತೆ ತೆರೆಯಲೂ ಸಾಧ್ಯವಾಗದ ಟಾಮ್ ಲ್ಯಾಥಮ್ ರೂಪದಲ್ಲಿ ಮೊದಲ ಓವರ್ನಲ್ಲೇ ಮೊದಲ ವಿಕೆಟ್ ಪತನವಾಯಿತು. ವಿಲ್ ಯಂಗ್ 20 ರನ್ ಗಳಿಸಿ, ಲೀಚ್ಗೆ ಮೊದಲ ಬಲಿಯಾದರು. ನಾಯಕ ಕೆನ್ ವಿಲಿಯಮ್ಸನ್ (31) ಅವರನ್ನು ಸ್ಟುವರ್ಟ್ ಬ್ರಾಡ್ ಊಟಕ್ಕೂ ಮುನ್ನ ಔಟ್ ಮಾಡಿದರು.