Gavisiddeshwara Mattu Jatre: ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ
ಇಂದು ಸಂಜೆ 5.30ಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ ಜರುಗಲಿದೆ. ಈ ಗವಿಸಿದ್ದೇಶ್ವರ ರಥೋತ್ಸವದಲ್ಲಿ ಸುಮಾರು 5-6 ಲಕ್ಷ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕೊಪ್ಪಳ: ದಕ್ಷಿಣ ಭಾರತದ ಕುಂಬಮೇಳ ವೆಂದೆ ಪ್ರಸಿದ್ದಿ ಪಡೆದಿರೋ ಗವಿಮಠದಲ್ಲಿ ಅನ್ನದಾಸೋಹ ಶುರುವಾಗಿದೆ. ಮಠಕ್ಕೆ ಬಂದ ಲಕ್ಷಾಂತರ ಭಕ್ತರಿಗೆ ಮಹಾಪ್ರಸಾದ ಸೇವೆ ಸಲ್ಲಿಸಲಾಗುತ್ತಿದೆ. 10 ಕ್ಕಿಂತ ಹೆಚ್ಚು ಏಕರೆ ಪ್ರದೇಶದಲ್ಲಿ ಪ್ರಸಾದ ಸೇವೆಗೆ ವ್ಯವಸ್ಥೆ ಮಾಡಲಾಗಿದೆ. ಬರೋ ಭಕ್ತರಿಗೆ ಶೇಂಗಾ, ಹೊಳಿಗೆ ಮಾದಲಿ ಹಾಲು, ತುಪ್ಪ ಸೇರಿದಂತೆ ವಿವಿಧ ಬಗೆಯ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯಿಂದ ನೂರಾರು ಜನರು ಅಡುಗೆ ಕಾರ್ಯದಲ್ಲಿ ತೊಡಗಿದ್ದಾರೆ.
ಇಂದು ಸಂಜೆ 5.30ಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ ಜರುಗಲಿದೆ. ಈ ಗವಿಸಿದ್ದೇಶ್ವರ ರಥೋತ್ಸವದಲ್ಲಿ ಸುಮಾರು 5-6 ಲಕ್ಷ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ. 2 ವರ್ಷಗಳ ಬಳಿಕ ಅದ್ಧೂರಿಯಾಗಿ ನಡೆಯುತ್ತಿರುವ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಸದ್ಗುರು ಜಗ್ಗಿ ವಾಸುದೇವ್. ಇದಕ್ಕಾಗಿ ಜಿಲ್ಲಾಡಳಿತ ಭಾರೀ ಬಿಗಿ ಬಂದೋಬಸ್ತ್ ಮಾಡಿದೆ.