ಕೊಪ್ಪಳ: ಹುಲಿಹೈದರ ಗಲಾಟೆ ಪ್ರಕರಣದಲ್ಲಿ (Hulihyder village in Gangawati) ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Koppal SP) ಅರುಣಾಂಗ್ಷುಗಿರಿ ಆದೇಶ ಹೊರಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಠಾಣೆಯ ಪಿಎಸ್ಐ ಪರಸಪ್ಪ ಭಜಂತ್ರಿ, ಎಎಸ್ಐ ಮಂಜುನಾಥ್, ಮುಖ್ಯಪೇದೆ ಹನುಮಂತಪ್ಪ ಮತ್ತು ಸಂಗಪ್ಪ ಸಸ್ಪೆಂಡ್ ಆದವರು.
ಕರ್ತವ್ಯಲೋಪ ಆರೋಪ (dereliction of duty) ಹಿನ್ನೆಲೆಯಲ್ಲಿ ನಾಲ್ವರನ್ನೂ ಕೊಪ್ಪಳ ಎಸ್‌ಪಿ ಅರುಣಾಂಗ್ಷುಗಿರಿ ಅಮಾನತುಗೊಳಿಸಿದ್ದಾರೆ. ಆಗಸ್ಟ್ 11ರಂದು ಹುಲಿಹೈದರ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಇಬ್ಬರು ಮೃತಪಟ್ಟಿದ್ದರು, ಒಬ್ಬರು ಗಾಯಗೊಂಡಿದ್ದರು.