ಸಾಕಿದ ಕೋಳಿಗೆ ಅರ್ಧ ಟಿಕೆಟ್ ದರ ಕೊಟ್ಟು ಹೈದರಾಬಾದ್​ನಿಂದ ಕೊಪ್ಪಳಕ್ಕೆ ಪ್ರಯಾಣಿಸಿದ ವ್ಯಕ್ತಿ

| Updated By: sandhya thejappa

Updated on: Nov 30, 2021 | 11:01 AM

ಹೈದರಾಬಾದ್​ನಿಂದ ಗಂಗಾವತಿಗೆ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸಿದ್ದ ವ್ಯಕ್ತಿ 463 ರೂ. ಹಣ ನೀಡಿದ್ದಾರೆ. ಒಂದು ಕೋಳಿಗೂ ಅರ್ಧ ಟಿಕೆಟ್ ನೀಡಿರುವ ಬಗ್ಗೆ ಇದೀಗ ಪರ ವಿರೋಧ ಚರ್ಚೆಯಾಗುತ್ತಿವೆ.

ಸಾಕಿದ ಕೋಳಿಗೆ ಅರ್ಧ ಟಿಕೆಟ್ ದರ ಕೊಟ್ಟು ಹೈದರಾಬಾದ್​ನಿಂದ ಕೊಪ್ಪಳಕ್ಕೆ ಪ್ರಯಾಣಿಸಿದ ವ್ಯಕ್ತಿ
ಕೋಳಿಗೆ ಅರ್ಧ ಟಿಕೆಟ್ ದರ ಕೊಟ್ಟು ವ್ಯಕ್ತಿಯೊಬ್ಬರು ಪ್ರಯಾಣಿಸಿದ್ದಾರೆ
Follow us on

ಕೊಪ್ಪಳ: ಕೋಳಿಗೂ ಅರ್ಧ ಟಿಕೆಟ್ ದರ ಕೊಟ್ಟು ಪ್ರಯಾಣಿಸಿದ ಪ್ರಸಂಗವೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೆಎಸ್ಆರ್​ಟಿಸಿ ಬಸ್​ನಲ್ಲಿ ವ್ಯಕ್ತಿಯೊಬ್ಬರು ಹೈದರಾಬಾದ್​ನಿಂದ ಗಂಗಾವತಿಗೆ ಬಂದಿದ್ದು, ಸಾಕಿದ ಕೋಳಿಗೂ 463 ರೂಪಾಯಿ ಟಿಕೆಟ್ ದರ ನೀಡಿ ಪ್ರಯಾಣಿಸಿದ್ದಾರೆ. ಸರ್ಕಾರಿ ಬಸ್​ಗಳಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್ ಖರೀದಿಸುವ ನಿಯಮವಿದೆ. ಹೀಗಾಗಿ ನವೆಂಬರ್ 28 ರಂದು ಹೈದರಾಬಾದ್ನಿಂದ ಪ್ರಯಾಣ ಮಾಡಿದ ವ್ಯಕ್ತಿ ತಂದಿದ್ದ ಕೋಳಿಗೂ ಅರ್ಧ ಟಿಕೆಟ್ ದರ ನೀಡಿದ್ದಾರೆ.

ಹೈದರಾಬಾದ್​ನಿಂದ ಗಂಗಾವತಿಗೆ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸಿದ್ದ ವ್ಯಕ್ತಿ 463 ರೂ. ಹಣ ನೀಡಿದ್ದಾರೆ. ಒಂದು ಕೋಳಿಗೂ ಅರ್ಧ ಟಿಕೆಟ್ ನೀಡಿರುವ ಬಗ್ಗೆ ಇದೀಗ ಪರ ವಿರೋಧ ಚರ್ಚೆಯಾಗುತ್ತಿವೆ. ಒಂದು ಕೋಳಿಗೆ ಸುಮಾರು 400 ರಿಂದ 500 ರೂ. ಇದೆ. ಅಂತದ್ರಲ್ಲಿ 463 ರೂ. ನೀಡಿ ಟಿಕೆಟ್ ಕೊಟ್ಟಿರೋದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಬಸ್ ನಿರ್ವಾಹಕ ಅನೀಶ್ರನ್ನ ಕೇಳಿದರೆ, ನಾವು ಹೈದರಾಬಾದ್​ನಿಂದ ಬರುತ್ತಾ ಇದ್ವಿ. ಓರ್ವ ಕೋಳಿ ಜೊತೆ ಬಂದಿದ್ದರು. ಸೀಟ್ ಖಾಲಿ ಇತ್ತು. ಹೀಗಾಗಿ ಬರುತ್ತೀನಿ ಅಂತ ಹೇಳಿದ್ದರು. ಕೋಳಿಗೂ ಚಾರ್ಜ್ ಆಗತ್ತೆ ಅಂದ್ವಿ. ಅದಕ್ಕೆ ಅವರು ಸಾಕಿದ ಕೋಳಿ ನಾನು ಬಿಟ್ಟು ಬರಲ್ಲ ಅಂತ ಅರ್ಧ ಟಿಕೆಟ್ ಹಣ ಕೊಟ್ಟು ಪ್ರಯಾಣಿಸಿದ್ದಾರೆ ಅಂತ ತಿಳಿಸಿದ್ದಾರೆ.

ಇದನ್ನೂ ಓದಿ

ಧಾರವಾಡ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ; ಸಿಎಂ ಬೊಮ್ಮಾಯಿಗೆ ರಾಜಕೀಯ ನೆಲೆ ಕಲ್ಪಿಸಿದ ಕ್ಷೇತ್ರ ಈ ಬಾರಿ ಯಾರ ಕೈ ಹಿಡಿಯುತ್ತೆ?

ದೇವನಹಳ್ಳಿಯಲ್ಲಿ ಬಾರ್ ಎದುರು ಪುಂಡರ ರೌಡಿಸಂ; ಯುವಕನ ತಲೆಗೆ ಬಿಯರ್ ಬಾಟಲ್​ನಿಂದ ಹೊಡೆದ ಆರೋಪಿಗಳು