ಮುಸ್ಲಿಂ ಹೆಣ್ಣುಮಕ್ಕಳ ಬಟ್ಟೆ ಪ್ರಚೋದನೆ ಕೊಡುತ್ತೋ, ಹಿಂದೂ ಮಕ್ಕಳ ಉಡುಗೆ ಪ್ರಚೋದನೆ ನೀಡುತ್ತೋ ನೀವೇ ನೋಡಿ; ಹೆಚ್​. ಆಂಜನೇಯ ವಿವಾದಾತ್ಮಕ ಹೇಳಿಕೆ

| Updated By: ಸುಷ್ಮಾ ಚಕ್ರೆ

Updated on: Feb 09, 2022 | 5:30 PM

ಕಾಲೇಜ್ ಮುಂದೆ ಹೋಗಿ ನೋಡಿ ಮುಸ್ಲಿಂ ಹೆಣ್ಣು ಮಕ್ಕಳು ಉಡುಪು ಪ್ರಚೋದನೆ ಕೊಡುತ್ತದೋ ಅಥವಾ ನಮ್ಮ ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಎಂದು ನಿಮಗೇ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಹೆಚ್​. ಆಂಜನೇಯ ಹೇಳಿದ್ದಾರೆ.

ಮುಸ್ಲಿಂ ಹೆಣ್ಣುಮಕ್ಕಳ ಬಟ್ಟೆ ಪ್ರಚೋದನೆ ಕೊಡುತ್ತೋ, ಹಿಂದೂ ಮಕ್ಕಳ ಉಡುಗೆ ಪ್ರಚೋದನೆ ನೀಡುತ್ತೋ ನೀವೇ ನೋಡಿ; ಹೆಚ್​. ಆಂಜನೇಯ ವಿವಾದಾತ್ಮಕ ಹೇಳಿಕೆ
ಎಚ್​ ಆಂಜನೇಯ
Follow us on

ಕೊಪ್ಪಳ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂಬ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಹೆಚ್. ಆಂಜನೇಯ (H Anjaneya) ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಂ​​ ಹೆಣ್ಣು ಮಕ್ಕಳು ಉಡುಪು ಹೆಚ್ಚು ಪ್ರಚೋದನೆ ಕೊಡುತ್ತೋ ಅಥವಾ ಹಿಂದೂ ಮಕ್ಕಳ ಉಡುಪು ಹೆಚ್ಚು ಪ್ರಚೋದನೆ ಕೊಡುತ್ತೋ ನೀವೇ ನೋಡಿ. ಕಾಲೇಜಿನ ಮುಂದೆ ಹೋಗಿ ನೋಡಿದರೆ ನಿಮಗೇ ಗೊತ್ತಾಗುತ್ತದೆ ಎಂದು ಹೆಚ್. ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಿಜಾಬ್ (Hijab) ಧರಿಸುವುದು ತಪ್ಪಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಮಹಿಳೆಯರ ಉಡುಪು ಪ್ರಚೋದನೆಗೆ ಕಾರಣ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದರು. ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದಿದ್ದ ಅವರು ಬಳಿಕ, ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರು ಮೈತುಂಬ ಬಟ್ಟೆ ಹಾಕಬೇಕು. ನಾನು ಮಹಿಳೆಯರನ್ನು ಅವಮಾನಿಸಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹೆಚ್​. ಆಂಜನೇಯ, ಕಾಲೇಜ್ ಮುಂದೆ ಹೋಗಿ ನೋಡಿ ಮುಸ್ಲಿಂ ಹೆಣ್ಣು ಮಕ್ಕಳು ಉಡುಪು ಪ್ರಚೋದನೆ ಕೊಡುತ್ತದೋ ಅಥವಾ ನಮ್ಮ ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಎಂದು ನಿಮಗೇ ಗೊತ್ತಾಗುತ್ತದೆ. ರೇಣುಕಾಚಾರ್ಯ ಬಹಳ ಒಳ್ಳೆಯ ಮಾತನ್ನು ಹೇಳಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಯಾರೂ ನೋಡಲ್ಲ. ಹಾಗಾಗಿ ಅವರು ಹಿಜಾಬ್ ಹಾಕ್ತಾರೆ. ರೇಣುಕಾಚಾರ್ಯ ಮುಸ್ಲಿಂ ಹೆಣ್ಣುಮಕ್ಕಳ ಪರವಾಗಿ ಮಾತಾಡಿದ್ದಾರೆ ಎಂದು ಆಂಜನೇಯ ಲೇವಡಿ ಮಾಡಿದ್ದಾರೆ.

ಮಕ್ಕಳ ಕೈಲಿ ಕಲ್ಲು, ಚಾಕು ಕೊಟ್ಟಿದ್ದೇ ಬಿಜೆಪಿ. ಮೊದಲು ಚುನಾವಣೆಗಾಗಿ ಗಲಾಟೆ ನಡೆಯುತ್ತಿತ್ತು. ಇವತ್ತು ಅವರನ್ನು ಬೀದಿಗಿಳಿಸಿದ್ದು ಬಿಜೆಪಿ. ಪ್ರಚೋದನೆ ಕೊಡೋದೆ ಬಿಜೆಪಿಯ ತತ್ವ, ಸಿದ್ಧಾಂತ. ಆದರೆ, ನಾವು ಯಾರನ್ನೂ ಎತ್ತಿ ಕಟ್ಟೋ ಕೆಲಸ ಮಾಡಲ್ಲ. ಈಗ ನಡೆಯುತ್ತಿರುವ ಗಲಾಟೆಗೆ ಬಿಜೆಪಿಯವರು ಕಾರಣ. ಇದೇ ಬಟ್ಟೆಯನ್ನು ಹಾಕಬೇಕು ಎಂಬುದು ಯಾವ ನ್ಯಾಯ? ವಿದ್ಯಾರ್ಥಿಗಳಿಗೆ ಬಿಜೆಪಿಯವರೇ ಕೇಸರಿ ಶಾಲು ವಿತರಣೆ ಮಾಡಿದ್ದಾರೆ ಎಂದು ಹೆಚ್. ಆಂಜನೇಯ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗ್ತಾರೆ, ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ: ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

Hijab Row: ಜೈ ಶ್ರೀರಾಮ್ ಘೋಷಣೆ ಕೂಗಿದವರ ಮುಂದೆ ಅಲ್ಲಾಹು ಅಕ್ಬರ್ ಎಂದ ಯುವತಿಗೆ 5 ಲಕ್ಷ ರೂ. ಬಹುಮಾನ

Published On - 5:29 pm, Wed, 9 February 22