ಕೊಪ್ಪಳ, ನ.10: ಜಿಲ್ಲೆಯಲ್ಲಿ (Koppal) ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ, ರೈತನ ಕೈ ಸೇರಬೇಕಿದ್ದ ಈರುಳ್ಳಿ (Onion) ಬೆಳೆ ನೀರು ಪಾಲಾಗಿದೆ. ಉತ್ತಮ ಬೆಲೆ ಇರುವ ಸಮಯದಲ್ಲಿಯೇ ಬೆಳೆ ನಾಶಗೊಂಡಿರುವುದು ರೈತನ ಕಣ್ಣೀರಿಗೆ ಕಾರಣವಾಗಿದೆ.
ಕುಷ್ಟಗಿ ತಾಲೂಕಿನ ಬನ್ನಟ್ಟಿ ಗ್ರಾಮದಲ್ಲಿ ರೈತ ಚಂದ್ರಪ್ಪ ಅವರು ತನ್ನ ಐದು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಮಾರ್ಕೇಟ್ಗೆ ಸಾಗಾಟ ಮಾಡಲು ಈರುಳ್ಳಿ ಕಟಾವು ಕೂಡ ಮಾಡಿದ್ದರು. ಆದರೆ, ದಿಢೀರ್ ಸುರಿದ ಮಳೆಗೆ ಲಕ್ಷಾಂತರ ಮೌಲ್ಯದ ಈರುಳ್ಳಿ ನೀರು ಪಾಲಾಗಿದೆ.
ಇದನ್ನೂ ಓದಿ: Hubballi News: ಹುಬ್ಬಳ್ಳಿಯಲ್ಲಿ ಈರುಳ್ಳಿ ಕೆಜಿಗೆ 25 ರೂಪಾಯಿಯಂತೆ ಮಾರಾಟ ಮಾಡಿದ ಕೇಂದ್ರ ಸರ್ಕಾರ, ಜನ ಸಂತಸ
ಈರುಳ್ಳಿ ಬೆಳೆ ನಾಶ ಕಂಡು ರೈತ ಚಂದ್ರಪ್ಪ ಅವರು ಕಣ್ಣೀರು ಹಾಕುತ್ತಿದ್ದಾರೆ. ಸ್ಥಳಕ್ಕೆ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸುವಂತೆ ಒತ್ತಾಯಿಸಿದ್ದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ