ಕೊಪ್ಪಳ: ಚಿಲ್ಲರೆ ವಿಷಯಕ್ಕಾಗಿ ಕಂಡಕ್ಟರ್ ಮತ್ತು ವ್ಯಕ್ತಿಯ ಮದ್ಯೆ ಗಲಾಟೆ ನಡೆದಿದ್ದು ಕಳೆದ ಶುಕ್ರುವಾರ ನಡೆದ ಗಲಾಟೆಯಿಂದಾಗಿ ಇಂದು(ಜುಲೈ 24) ಗ್ರಾಮದಲ್ಲಿ ಬಸ್ ಬಂದ್ ಮಾಡಿಸಿ ಗಲಾಟೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪೂರ ಗ್ರಾಮದಲ್ಲಿ ನಡೆದಿದೆ.
ಕಳೆದ ಶುಕ್ರವಾರ ಗಂಗಾವತಿಯಲ್ಲಿ ವೆಂಕಟೇಶ್ ಹಾಗೂ ಕಂಡಕ್ಟರ್ ಶಂಕರಗೌಡ ಮದ್ಯೆ ಗಲಾಟೆಯಾಗಿತ್ತು. ಇದೇ ಕೋಪದಲ್ಲಿ ಇದಕ್ಕೆ ಪ್ರತಿಯಾಗಿ ಇಂದು ಗ್ರಾಮದಲ್ಲಿ ಬಸ್ ನಿಲ್ಲಿಸಿ ವೆಂಕಟೇಶ್ ಗಲಾಟೆ ಮಾಡಿದ್ದಾರೆ. ಶುಕ್ರವಾರ ನಡೆದ ಗಲಾಟೆಗೆ ಪ್ರತಿಕಾರ ತೀರಿಸಿಕೊಳ್ಳಲು ಇಂದು ಬಂಡಿ ಹರ್ಲಾಪೂರ ಗ್ರಾಮದಲ್ಲಿ ಬಸ್ ಸಂಚಾರ ಬಂದ್ ಮಾಡಿಸಿ ಬಸ್ ಕಂಡಕ್ಟರ್ಗಳ ಬಳಿ ತನಗೆ ಮತ್ತೊಬ್ಬ ಕಂಡಕ್ಟರ್ ಶಂಕರಗೌಡರ ನಂಬರ್ ಕೊಡುವಂತೆ ಪೀಡಿಸಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಚಿಲ್ಲರೆ ವಿಷಯಕ್ಕೆ ಶುಕ್ರವಾರ ವೆಂಕಟೇಶ ಹಾಗೂ ಕಂಡಕ್ಟರ್ ಶಿವಕುಮಾರ್ ನಡುವೆ ಗಲಾಟೆಯಾಗಿತ್ತು. ಆ ಸಮಯದಲ್ಲಿ ವೆಂಕಟೇಶ ಮೇಲೆ ಕಂಡಕ್ಟರ್ ಶಂಕರಗೌಡ ಹಲ್ಲೆ ಮಾಡಿದ್ದರಂತೆ. ಕಂಡಕ್ಟರ್ ಹಾಗೂ ಚಾಲಕ ಬಸ್ ನಿಂದ ವೆಂಕಟೇಶನನ್ನ ಎತ್ತಿ ಹಾಕಲು ಯತ್ನಿಸಿದ್ದರಂತೆ. ಹೀಗಾಗಿ ಇಂದು ಮತ್ತೆ ಬಸ್ ನಿಲ್ಲಿಸಿ ವೆಂಕಟೇಶ ಜಗಳಕ್ಕಿಳಿದಿದ್ದಾರೆ. ಬಸ್ ಬಂದ್ ಪರಿಣಾಮ ಜನರು ಆಟೋ ಮೂಲಕ ತಮ್ಮ ಊರು ಸೇರುತ್ತಿದ್ದಾರೆ.
ನಾಯಿ ಕಡಿತ: ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಸಾವು
ಚಿತ್ರದುರ್ಗ: ನಾಯಿ ಕಡಿದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ತಾಲೂಕಿನ ಬಿಳಿಕಲ್ಲು ನಾಯಕರಹಟ್ಟಿಯ ರೇಖಾ-ಕೇಶವ ದಂಪತಿಯ ಪುತ್ರ ಯಶವಂತ್(8) ಸಾವನ್ನಪ್ಪಿದ್ದಾನೆ. ಜುಲೈ 10ರಂದು ಮನೆ ಬಳಿ ಆಟವಾಡುತ್ತಿದ್ದ ಬಾಲಕನಿಗೆ ನಾಯಿ ಕಡಿದಿತ್ತು.
ಬಾಲಕನಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆ, ದಾವಣಗೆರೆ ಆಸ್ಪತ್ರೆ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಗಿತ್ತು. ಆದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯಶವಂತ್ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಾಲಕ ಸಾವನ್ನಪ್ಪಿದ್ದಾನೆಂದು ಆರೋಪಿಸಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 4:41 pm, Sun, 24 July 22