ಮೋದಿ ಹೆಸರಲ್ಲಿ ಪಂಗನಾಮ? ಹಣ ದೋಚಿ ಯುವಕ ಪರಾರಿ

|

Updated on: Jan 02, 2020 | 12:13 PM

ಕೊಪ್ಪಳ: ಮೋದಿ ಹೆಸರು ಬಳಸಿ 15 ಲಕ್ಷ ರೂಪಾಯಿ ಕೊಡಿಸುವುದಾಗಿ ಐವರು ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಹಿರೇಡಂಕನಕಲ್ ಗ್ರಾಮದಲ್ಲಿ ನಡೆದಿದೆ. ಕನಕಗಿರಿ ತಾಲೂಕಿನ ಲಿಂಗದಳ್ಳಿ ನಿವಾಸಿ ಉಮೇಶ್ ಎಂಬ ಯುವಕ ಮೋದಿ ಹೆಸರು ಬಳಸಿ ನಿಮಗೆ 15 ಲಕ್ಷ ರೂಪಾಯಿ ಕೊಡಿಸ್ತೀನಿ ಎಂದು ವಂಚಿಸಿ ಗ್ರಾಮದ ಐವರು ಮಹಿಳೆಯರ ಬಳಿ ಬಂಗಾರ, ಹಣ ಪೀಕಿದ್ದಾನೆ. ಹಂತಹಂತವಾಗಿ 78 ಸಾವಿರ, ಮೂರು ತೊಲೆ ಬಂಗಾರ ದೋಚಿದ್ದಾನೆ. ಮಹಿಳೆಯರು ಹಣ ಕೇಳಿದ್ದಕ್ಕೆ 60 ಸಾವಿರದ ಚೆಕ್ ಬರೆದುಕೊಟ್ಟಂತೆ ವಂಚಿಸಿದ್ದಾನೆ. […]

ಮೋದಿ ಹೆಸರಲ್ಲಿ ಪಂಗನಾಮ? ಹಣ ದೋಚಿ ಯುವಕ ಪರಾರಿ
Follow us on

ಕೊಪ್ಪಳ: ಮೋದಿ ಹೆಸರು ಬಳಸಿ 15 ಲಕ್ಷ ರೂಪಾಯಿ ಕೊಡಿಸುವುದಾಗಿ ಐವರು ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಹಿರೇಡಂಕನಕಲ್ ಗ್ರಾಮದಲ್ಲಿ ನಡೆದಿದೆ. ಕನಕಗಿರಿ ತಾಲೂಕಿನ ಲಿಂಗದಳ್ಳಿ ನಿವಾಸಿ ಉಮೇಶ್ ಎಂಬ ಯುವಕ ಮೋದಿ ಹೆಸರು ಬಳಸಿ ನಿಮಗೆ 15 ಲಕ್ಷ ರೂಪಾಯಿ ಕೊಡಿಸ್ತೀನಿ ಎಂದು ವಂಚಿಸಿ ಗ್ರಾಮದ ಐವರು ಮಹಿಳೆಯರ ಬಳಿ ಬಂಗಾರ, ಹಣ ಪೀಕಿದ್ದಾನೆ.

ಹಂತಹಂತವಾಗಿ 78 ಸಾವಿರ, ಮೂರು ತೊಲೆ ಬಂಗಾರ ದೋಚಿದ್ದಾನೆ. ಮಹಿಳೆಯರು ಹಣ ಕೇಳಿದ್ದಕ್ಕೆ 60 ಸಾವಿರದ ಚೆಕ್ ಬರೆದುಕೊಟ್ಟಂತೆ ವಂಚಿಸಿದ್ದಾನೆ. ಹಣ ಲಪಟಾಯಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಉಮೇಶ್ ಫೋನ್ ಆಫ್ ಆಗುತ್ತಿದ್ದಂತೆ ಮಹಿಳೆಯರಿಗೆ ಆತಂಕವಾಗಿದೆ. ಪೊಲೀಸರಿಗೆ ದೂರು ನೀಡಿದ್ದಾರೆ.

ಆನ್​ಲೈನ್​ ದೋಖಾ ನಡೆದಿದ್ದರೆ ಇಲ್ಲಿ ದೂರು ದಾಖಲಿಸಬಹುದು cyberpolicebangalore

Published On - 12:13 pm, Thu, 2 January 20