ಕೊಪ್ಪಳ: ಪುರಸಭೆ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ

ನಾಳೆ (ಡಿಸೆಂಬರ್​ 27) ಕಾರಟಗಿ ಪುರಸಭೆ ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಫೊಟೋ ಇಟ್ಟು, ಕುಂಬಳಕಾಯಿ, ತೆಂಗಿನಕಾಯಿ, ಕುಂಕುಮ, ಅಡಿಕೆ ಎಲೆ ಹಾಕಿ ವಾಮಾಚಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊಪ್ಪಳ: ಪುರಸಭೆ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ
ವಾಮಾಚಾರ
Edited By:

Updated on: Dec 26, 2021 | 3:18 PM

ಕೊಪ್ಪಳ: ಪುರಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ. ಕಾರಟಗಿ ಪುರಸಭೆ ಚುನಾವಣೆ ಹಿನ್ನಲೆ ವಾರ್ಡ್ ನಂಬರ್ 10ರ ಕಾಂಗ್ರೆಸ್ ಅಭ್ಯರ್ಥಿ (Congress candidate) ಮಂಜುನಾಥ್ ಮೇಗೂರು ಫೋಟೋ (Photo) ಇಟ್ಟು ವಾಮಾಚಾರ‌ ಮಾಡಲಾಗಿದೆ. ಕಾರಟಗಿ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಸೋಲಲಿ ಎಂದು ಕಿಡಗಡೇಗಳು ವಾಮಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಾಳೆ (ಡಿಸೆಂಬರ್​ 27) ಕಾರಟಗಿ ಪುರಸಭೆ ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಫೊಟೋ ಇಟ್ಟು, ಕುಂಬಳಕಾಯಿ, ತೆಂಗಿನಕಾಯಿ, ಕುಂಕುಮ, ಅಡಿಕೆ ಎಲೆ ಹಾಕಿ ವಾಮಾಚಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 

ಪುರಸಭೆ ಚುನಾವಣೆ

ಈ ಹಿಂದೆ ರಾಮನಗದ ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ ಮಾಡಿ ವಾಮಾಚಾರಕ್ಕೆ ಯತ್ನಿದ್ದರು
ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ ಮಾಡುತ್ತಿದ್ದು ವಾಮಾಚಾರ ನಡೆಸಲಾಗುತ್ತಿದೆ ಎಂಬ ಶಂಕೆ ಮೇಲೆ 13 ಮಂದಿಯನ್ನು ಸಾತನೂರು ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪದ ಭೂಹಳ್ಳಿಯಲ್ಲಿ ನಡೆದಿತ್ತು. ಪೂಜಾರಿ, ಮನೆ ಮಾಲೀಕ ಸೇರಿದಂತೆ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 6 ವರ್ಷದ ಮಗು ಕೂಡ ಇದೆ.

ಭೂಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನ ಮನೆಯೊಂದರಲ್ಲಿ ಕಳೆದ ಕೆಲವು ವರ್ಷಗಳಿಂದ ಪೂಜೆ ನಡೆಯುತ್ತಿತ್ತಂತೆ. ಅದೇ ರೀತಿ ಪೂಜೆ ನಡೆದಿದೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಆ ಮನೆಯಲ್ಲಿ ನಿಧಿ ಆಸೆಗಾಗಿ ವಾಮಾಚಾರ ಮಾಡಲಾಗುತ್ತಿದೆ ಎಂಬ ಶಂಕೆಯೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ರಾತ್ರೋರಾತ್ರಿ ದಾಳಿ ನಡೆಸಿದ ಪೊಲೀಸರು 13 ಮಂದಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಇನ್ನು ವಶಕ್ಕೆ ಪಡೆದವರಲ್ಲಿ 8 ಮಂದಿ ಹೊರ ಜಿಲ್ಲೆಯವರು ಎನ್ನಲಾಗುತ್ತಿದೆ. ವಿಚಾರಣೆ ವೇಳೆ ನಾವು ತಮಿಳುನಾಡಿನಿಂದ ಬಂದಿದ್ದು, ನಮಗೆ ಜಮೀನು ವಿಚಾರದಲ್ಲಿ ಸಮಸ್ಯೆ ಇತ್ತು ಹಾಗಾಗಿ ಪೂಜೆ ಮಾಡಿಸುತ್ತಿದ್ದೇವೆ ಎಂದು ಪೊಲೀಸರ ಬಳಿ ತಿಳಿಸಿದ್ದಾರೆ. ಆದರೆ ವಶಕ್ಕೆ ಪಡೆದವರಲ್ಲಿ ಮಗುವೂ ಇರುವ ಕಾರಣ ಮಗುವನ್ನು ಬಲಿ ನೀಡಲು ಕರೆತರಲಾಗಿದೆ ಎಂಬ ಅನುಮಾನ ಹುಟ್ಟುಕೊಂಡಿದೆ. ಅಲ್ಲದೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಗುಂಡಿಗಳು ಪತ್ತೆಯಾಗಿವೆ. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ಪುರಸಭೆ ಚುನಾವಣೆ ವೇಳೆ ಗಲಾಟೆ: ಭುಜ ತಟ್ಟಿ ಬಿಜೆಪಿಗೆ ಸವಾಲ್ ಹಾಕಿದ ಭೀಮಾನಾಯ್ಕ್

ವಿಧಾನಸಭೆ ಚುನಾವಣೆಗೂ ಮುನ್ನ ಟಿಎಂಸಿಗೆ ಶಾಕ್​; ಗೋವಾ ವಿಭಜನೆಗೆ ಯತ್ನಿಸುತ್ತಿರುವವರು ನಮಗೆ ಬೇಡವೆಂದು ಪಕ್ಷ ತೊರೆದ ಐವರು ಮುಖಂಡರು

Published On - 12:09 pm, Sun, 26 December 21