ನನಗೆ ಇಲ್ಲಿಂದ ಹೋಗು ಅಂದ್ರೆ ನಾನು ಪ್ರಾಣ ಕಳೆದುಕೊಳ್ಳುತ್ತೀನಿ ಅಂಜನಾದ್ರಿ ಬೆಟ್ಟದಲ್ಲಿ ಮುಸ್ಲಿಂ ಮಹಿಳಾ ವ್ಯಾಪಾರಿ ಅಳಲು

| Updated By: ಆಯೇಷಾ ಬಾನು

Updated on: Apr 13, 2022 | 3:18 PM

ನಮಗೆ ತೊಂದರೆ ಮಾಡಿದ್ರೆ, ಬೇರೆ ವ್ಯವಸ್ಥೆ ಮಾಡಿ. ನನಗೆ ಇಲ್ಲಿಂದ ಹೋಗು ಅಂದ್ರೆ ಪ್ರಾಣ ಕಳೆದುಕೊಳ್ಳುತ್ತೀನಿ. ನಾನು ಇಲ್ಲಿಂದ ಹೋಗೋದಿಲ್ಲ. ಇದು ನಮ್ಮೂರು. ಕೊಪ್ಪಳದಲ್ಲಿ ಮುಸ್ಲಿಂ ಮಹಿಳಾ ವ್ಯಾಪಾರಿ ರಜೀಹಾ ಬೇಗಂ ಮುಸ್ಲಿಮರು ಮಳಿಗೆಗಳನ್ನು ತೆರೆವುಗೊಳಿಸಬೇಕು ಎಂಬ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

ನನಗೆ ಇಲ್ಲಿಂದ ಹೋಗು ಅಂದ್ರೆ ನಾನು ಪ್ರಾಣ ಕಳೆದುಕೊಳ್ಳುತ್ತೀನಿ ಅಂಜನಾದ್ರಿ ಬೆಟ್ಟದಲ್ಲಿ ಮುಸ್ಲಿಂ ಮಹಿಳಾ ವ್ಯಾಪಾರಿ ಅಳಲು
ರಜೀಹಾ ಬೇಗಂ
Follow us on

ಕೊಪ್ಪಳ: ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅವಕಾಶ ನೀಡಬಾರದು ಎಂಬ ಕೂಗು ಜೋರಾಗಿದೆ. ಇದರ ನಡುವೆ ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯು ಕಠಿಣ ಕಾನೂನು ಪಾಲನೆ ಮಾಡಲು ಮುಂದಾಗಿದೆ. ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಇನ್ನು ಮುಂದೆ ಮುಸ್ಲಿಮರಿಗೆ ಅವಕಾಶ ಇರುವುದಿಲ್ಲ. ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಅನ್ಯಧರ್ಮೀಯರು ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ರೆ ಅದೆಷ್ಟೋ ವರ್ಷಗಳಿಂದ ದೇವಸ್ಥಾನಗಳ ಮುಂದೆ ಕೂತು ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗಳು ಇದರಿಂದ ಕಂಗಾಲಾಗಿದ್ದಾರೆ. ಕೊಪ್ಪಳದಲ್ಲಿ ಮುಸ್ಲಿಂ ಮಹಿಳಾ ವ್ಯಾಪಾರಿ ರಜೀಹಾ ಬೇಗಂ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾವು ಇಲ್ಲೆ ವ್ಯಾಪಾರ ಮಾಡ್ತೀವಿ. ಅಂಜನಾದ್ರಿ ಬೆಟ್ಡದ ಕೆಳಗಡೆ ನನ್ನ ಅಂಗಡಿ ಇದೆ. ನನಗೆ ಎಲ್ಲ ದೇವರು ಒಂದೇ. ನಾನು ಆಂಜನೇಯನ ಭಕ್ತೆ, ಎಲ್ಲರೂ ಒಂದೇ ನನಗೆ. ನಾನು ಇಲ್ಲೆ ವ್ಯಾಪಾರ ಮಾಡ್ತೀನಿ. ಮೂರು ವರ್ಷದಿಂದ ನಾವು ಇಲ್ಲೆ ಇರೋದು. ಇಷ್ಟು ದಿನ ನಮಗೆ ಯಾರೂ ತೊಂದರೆ ಮಾಡಿಲ್ಲ. ಈಗ್ಯಾಕೆ ತೊಂದರೆ ಮಾಡ್ತಿದ್ದಾರೆ ಎಂದ ಮುಸ್ಲಿಂ ಮಹಿಳೆ ರಜೀಹಾ ಬೇಗಂ ಪ್ರಶ್ನಿಸಿದ್ದಾರೆ. ನಮಗೆ ತೊಂದರೆ ಮಾಡಿದ್ರೆ, ಬೇರೆ ವ್ಯವಸ್ಥೆ ಮಾಡಿ. ನನಗೆ ಇಲ್ಲಿಂದ ಹೋಗು ಅಂದ್ರೆ ಪ್ರಾಣ ಕಳೆದುಕೊಳ್ಳುತ್ತೀನಿ. ನಾನು ಇಲ್ಲಿಂದ ಹೋಗೋದಿಲ್ಲ. ಇದು ನಮ್ಮೂರು. ಒಂದ ರೊಟ್ಟಿ ತಿಂತೀವಿ ಇಲ್ಲಿ ದುಡ್ಕೊಂಡು ಎಂದ ಮುಸ್ಲಿಂ ಮಹಿಳೆ ತನ್ನ ಅಳಲು ತೋಡಿಕೊಂಡಿದ್ದಾರೆ. ಅಂಜನಾದ್ರಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಶ್ರೀರಾಮಸೇನೆ ಒತ್ತಾಯಿಸಿತ್ತು.

ದೇಗುಲ ಮಳಿಗೆಗಳಲ್ಲಿ ಮುಸ್ಲಿಮರಿಗಿಲ್ಲ ಅವಕಾಶ
ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯು ಕಠಿಣ ಕಾನೂನು ಪಾಲನೆ ಮಾಡಲು ಮುಂದಾಗಿದೆ. ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಇನ್ನು ಮುಂದೆ ಮುಸ್ಲಿಮರಿಗೆ ಅವಕಾಶ ಇರುವುದಿಲ್ಲ. ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಅನ್ಯಧರ್ಮೀಯರು ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೊದಲೇ ನಮೂದಾಗಿರುವ ಕಾನೂನಿನಲ್ಲಿರುವ ಅಂಶಗಳನ್ನಿಟ್ಟುಕೊಂಡು ಈ ಬಾರಿ ಹರಾಜು ನಿರ್ವಹಿಸಲು ಮುಂದಾಗಿರುವ ಇಲಾಖೆಯು, ಹರಾಜಿನಲ್ಲಿ ಅಂಗಡಿ ತೆಗೆದುಕೊಂಡವರೇ ವ್ಯಾಪಾರ ಮಾಡಬೇಕು. ಇತರ ಅನ್ಯಧರ್ಮೀಯರಿಗೆ ಉಪ-ಗುತ್ತಿಗೆ ಕೊಡುವಂತಿಲ್ಲ. ಒಂದು ವೇಳೆ ಹರಾಜಿನಲ್ಲಿ ಪಡೆದ ಅಂಗಡಿಯನ್ನು ಉಪ-ಗುತ್ತಿಗೆ ನೀಡಿದರೆ ಮಂಜೂರು ಆದೇಶವನ್ನೇ ಅಮಾನತು ಮಾಡಲಾಗುವುದು. ಮಳಿಗೆಯನ್ನು ಅನ್ಯಧರ್ಮೀಯರಿಗೆ ನೀಡುವ ದೇಗುಲಗಳ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಬೆಂಗಳೂರಲ್ಲಿ ಹರಾಜಿಗೆ ಸಿದ್ಧವಿರುವ 48 ಅಂಗಡಿಗಳಿಗೆ ಈಗಾಗಲೇ ನೊಟೀಸ್ ನೀಡಲಾಗಿದೆ ಎಂದು ಮುಜರಾಯಿ ಇಲಾಖೆಯು ತಿಳಿಸಿದೆ. ಬಳೆಪೇಟೆಯ ಬಂಡಿ‌ ಶೇಷಮ್ಮ, ಶ್ರೀನಿವಾಸ ದೇವಸ್ಥಾನ, ಸುಗ್ರೀವ ವೆಂಕಟರಮಣ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ದೇವಾಲಯದ ಅಂಗಡಿಗಳಿಗೆ ನೊಟೀಸ್ ನೀಡಲಾಗಿದೆ.

ಇದನ್ನೂ ಓದಿ: ಇದು ಕಾಂಗ್ರೆಸ್ ರೂಪಿಸಿದ ಸಂಚು: ಮೃತ ಸಂತೋಷ್ ಹಿನ್ನೆಲೆ ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್