ಹುಲಿಹೈದರ್‌ ಮಾರಾಮಾರಿ: ಕೆಡಿಪಿ ಮಾಜಿ ಸದಸ್ಯ ಗುರನಗೌಡ ಬಂಧನ

| Updated By: ಆಯೇಷಾ ಬಾನು

Updated on: Aug 14, 2022 | 4:24 PM

ಪ್ರಕರಣ ಸಂಬಂಧ ಅಮಾಯಕರನ್ನು ಬಂಧಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಕೊಪ್ಪಳ ಎಸ್‌ಪಿ, ನಾವು ವಿಚಾರಣೆ ಮಾಡಿ ತಪ್ಪಿಲ್ಲ ಅಂದ್ರೆ ವಾಪಸ್ ಬಿಡ್ತೀದ್ದೀವಿ. ಅವರಿಗೆ ವಾರ್ನಿಂಗ್ ಕೊಟ್ಟು ಮನೆಗೆ ಕಳಸಿದ್ದೇವೆ ಎಂದರು.

ಹುಲಿಹೈದರ್‌ ಮಾರಾಮಾರಿ: ಕೆಡಿಪಿ ಮಾಜಿ ಸದಸ್ಯ ಗುರನಗೌಡ ಬಂಧನ
ಹುಲಿಹೈದರ್​ನಲ್ಲಿ ನಡೆದ ಗುಂಪು ಸಂಘರ್ಷದ ನಂತರದ ಕ್ಷಣಗಳು
Follow us on

ಕೊಪ್ಪಳ: ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್‌ ಗ್ರಾಮದಲ್ಲಿ ಆಗಸ್ಟ್ 11ರಂದು ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಯಂಕಪ್ಪ ಹಾಗೂ ಭಾಷಾವಲಿ ಎಂಬ ಇಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಡಿಪಿ ಮಾಜಿ ಸದಸ್ಯ ಗುರನಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಪರಾರಿಯಾಗಲು ನೆರವು ನೀಡಿದ್ದ ಹಿನ್ನೆಲೆ ಗುರನಗೌಡನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇನ್ನು ಈ ಗಲಾಟೆಯಲ್ಲಿ 58 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ದೂರಿನಲ್ಲಿ ಹೆಸರಿರದಿದ್ರೂ ಗುರುನಗೌಡನನ್ನು ಬಂಧಿಸಲಾಗಿದೆ. ಹುಲಿಹೈದರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಎಸ್‌ಪಿ ಅರುಣಾಂಗ್ಷು ಗಿರಿ ಆರು ತಂಡ ರಚನೆ ಮಾಡಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿ ತಪ್ಪು ಕಂಡು ಬಂದಿಲ್ಲ ಅಂದ್ರೆ ನೋಟಿಸ್ ಕೊಟ್ಟು ಕೈ ಬಿಡ್ತಿದ್ದಾರೆ.

ಇನ್ನು ಘಟನೆ ಸಂಬಂಧ ಮಾತನಾಡಿರುವ ಕೊಪ್ಪಳ ಎಸ್‌ಪಿ ಅರುಣಾಂಗ್ಷು ಗಿರಿ, ನಾವು 30 ಜನರನ್ನ ವಶಕ್ಕೆ ಪಡೆದಿದ್ವಿ. ಅದರಲ್ಲಿ 22 ಜನರ ಬಂಧನವಾಗಿದೆ. ವಿಚಾರಣೆ ಮಾಡಿದ 30 ಜನರಲ್ಲಿ 22 ಜನ ಅರೆಸ್ಟ್ ಆಗಿದ್ದಾರೆ. ಬಾಷಾವಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನ ಅರೆಸ್ಟ್ ಮಾಡಲಾಗಿದೆ. ಯಂಕಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ಬಂಧನವಾಗಿದೆ. ಮಾರಾಮಾರಿ ಹಿನ್ನಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ 58 ಜನರ ವಿರುದ್ಧ ದೂರು ದಾಖಲಾಗಿತ್ತು. 58 ಜನರಲ್ಲಿ 22 ಜನರನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಅಮಾಯಕರನ್ನು ಬಂಧಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಕೊಪ್ಪಳ ಎಸ್‌ಪಿ, ನಾವು ವಿಚಾರಣೆ ಮಾಡಿ ತಪ್ಪಿಲ್ಲ ಅಂದ್ರೆ ವಾಪಸ್ ಬಿಡ್ತೀದ್ದೀವಿ. ಅವರಿಗೆ ವಾರ್ನಿಂಗ್ ಕೊಟ್ಟು ಮನೆಗೆ ಕಳಸಿದ್ದೇವೆ ಎಂದರು. ತನಿಖೆ ವೇಳೆ ಯಾರ್ಯಾರು ಕಂಡ ಬರ್ತಾರೆ ಅವರನ್ನೆಲ್ಲ ಅರೆಸ್ಟ್ ಮಾಡ್ತಿದೀವಿ. ಗಲಾಟೆಗೆ ಪ್ರತ್ಯಕ್ಷ, ಪರೋಕ್ಷವಾಗಿ ಕಾರಣವಾದವರನ್ನು ಖಚಿತ ಪಡಿಸಿದ ನಂತರವೇ ಬಂಧನ ಮಾಡೀದಿವಿ. ಕೆಲವರು ಗಲಾಟೆಯಲ್ಲಿ ಭಾಗಿಯಾಗಿರಲಿಲ್ಲ. ಅವರನ್ನೆಲ್ಲ ಮನೆಗೆ ಕಳಿಸಿದ್ದೇವೆ ಎಂದರು.

ಊಟಕ್ಕೆಂದು ಕರೆದು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ

ಟಿವಿ9ಗೆ ಗಾಯಾಳು ಧರ್ಮಣ್ಣ ತಂದೆ ನಾಗಲಿಂಗಪ್ಪ ಮಾತನಾಡಿದ್ದು ಊಟಕ್ಕೆಂದು ಕರೆದು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಧರ್ಮಣ್ಣ ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮಗೆಲ್ಲ ದುಡಿದು ಹಾಕೋನು, ಬೇಗ ಗುಣಮುಖನಾಗಬೇಕು. ಪುತ್ರನ ಚಿಕಿತ್ಸೆಗೆ ಜಿಲ್ಲಾಧಿಕಾರಿ ವ್ಯವಸ್ಥೆ ಮಾಡ್ತೀನಿ ಎಂದಿದ್ದಾರೆ ಎಂದು ಘಟನೆಯಲ್ಲಿ ಗಾಯಗೊಂಡ ಧರ್ಮಣ್ಣ ತಂದೆ ನಾಗಲಿಂಗಪ್ಪ ಕಣ್ಣೀರು ಹಾಕಿದ್ದಾರೆ.