Kishkindha: ರಾಮನಿಗೂ ಕೊಪ್ಪಳಕ್ಕೂ ಇದೆ ಅವಿನಾಭಾವ ಕಿಷ್ಕಿಂದ ಸಂಬಂಧ, ಇಲ್ಲಿದೆ ಸ್ಥಳ ಮಹಾತ್ಮೆ

| Updated By: ಸಾಧು ಶ್ರೀನಾಥ್​

Updated on: Jan 03, 2024 | 1:27 PM

ಹೌದು ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಗೂ ರಾಮಾಯಣಕ್ಕೂ ಅವಿನಾಭಾವ ಸಂಬಂದವಿದೆ‌. ವನವಾಸದಲ್ಲಿದ್ದ ಶ್ರೀ ರಾಮಚಂದ್ರ ಸೀತಾಮಾತೆಯ ಅಪಹರಣವಾದಾಗ ಸೀತೆಯನ್ನ ಹುಡುಕುತ್ತ ಹೊರಟವೇಳೆ ಶ್ರೀ ರಾಮನಿಗೆ ಶಕ್ತಿ ತುಂಬಿದ್ದು ನಮ್ಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪ್ರದೇಶ. ಹೌದು ಅದು ಅಂದಿನ ಕಿಷ್ಕಿಂದೆ ರಾಜ್ಯ

Kishkindha: ರಾಮನಿಗೂ ಕೊಪ್ಪಳಕ್ಕೂ ಇದೆ ಅವಿನಾಭಾವ ಕಿಷ್ಕಿಂದ ಸಂಬಂಧ, ಇಲ್ಲಿದೆ ಸ್ಥಳ ಮಹಾತ್ಮೆ
ರಾಮನಿಗೂ ಕೊಪ್ಪಳಕ್ಕೂ ಇದೆ ಅವಿನಾಭಾವ ಕಿಷ್ಕಿಂದ ಸಂಬಂಧ, ಇಲ್ಲಿದೆ ಸ್ಥಳ ಮಹಾತ್ಮೆ
Follow us on

ಜನವರಿ 22 ರಂದು ಶತಕೋಟಿ ಹಿಂದುಗಳ ಕನಸಿನ ರಾಮಮಂದಿರ ಉದ್ಘಾಟನೆ ನಡೆಯಲಿದೆ. ಭವ್ಯ ರಾಮಮಂದಿರದ ಉದ್ಘಾಟನೆಯ (Ram Mandir Inauguration) ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಆದ್ರೆ ರಾಮ ಮಂದಿರ ಉದ್ಘಾಟನೆ ರಾಜ್ಯದ ಜನರಿಗೆ, ಅದರಲ್ಲೂ ರಾಜ್ಯದ ಕಿಷ್ಕಿಂದೆ ಪ್ರದೇಶವಾಗಿರುವ ಕೊಪ್ಪಳ ಜನರ ಸಂತಸ ನೂರ್ಮಡಿಯಾಗುವಂತೆ ಮಾಡಿದೆ. ಇದಕ್ಕೆ ಕಾರಣ, ರಾಮ (Shri Rama) ಅನೇಕ ದಿನಗಳ ಕಾಲ ಕೊಪ್ಪಳದ (Koppal) ಕಿಂಷ್ಕಿಂದೆ ಪ್ರದೇಶದಲ್ಲಿ (Kishkindha) ಇದ್ದ ಅನ್ನೋದು ಮತ್ತು ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಇಲ್ಲೇ ಇರೋದು (Spiritual).

ಹೌದು ಮರ್ಯಾದಾ ಪುರುಷೊತ್ತಮ ಪ್ರಭು ಶ್ರೀರಾಮನ ಭವ್ಯ ಮಂಧಿರಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಇದು ದೇಶದ ಬಹುಪಾಲು ಜನರ ಸಂತಸವನ್ನು ಹೆಚ್ಚಿಸಿದೆ. ಜನವರಿ 22, ಯಾವಾಗಾ ಆದೀತು, ಭವ್ಯ ರಾಮ ಮಂದಿರದಲ್ಲಿ ಯಾವಾಗ ಶ್ರೀರಾಮನ ದರ್ಶನ ಭಾಗ್ಯವಾದೀತು ಅಂತ ನೋಡಲು ಕೋಟ್ಯಂತರ ಜನ ಕಾತುರದಿಂದ ಕಾದು ಕುಳತಿದ್ದಾರೆ. ಐತಿಹಾಸಿಕ ದಿನಕ್ಕಾಗಿ ಜನ ಕಾದು ಕೂತಿದ್ದಾರೆ. ಇನ್ನು ರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂದವಿದೆ. ಅದರಲ್ಲೂ ರಾಜ್ಯದ ಕೊಪ್ಪಳ ಜಿಲ್ಲೆಗೂ ಹೆಚ್ಚಿನ ನಂಟಿದೆ. ಹೌದು ಸೀತಾ ಮಾತೆಯನ್ನ ಹುಡುಕುತ್ತ ಹೊರಟ ಪ್ರಭು ಶ್ರೀರಾಮನ ಹೆಜ್ಜೆಗಳು ಕರುನಾಡಿನಲ್ಲೂ ಮೂಡಿವೆ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಹೌದು ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಗೂ ರಾಮಾಯಣಕ್ಕೂ ಅವಿನಾಭಾವ ಸಂಬಂದವಿದೆ‌. ವನವಾಸದಲ್ಲಿದ್ದ ಶ್ರೀ ರಾಮಚಂದ್ರ ಸೀತಾಮಾತೆಯ ಅಪಹರಣವಾದಾಗ ಸೀತೆಯನ್ನ ಹುಡುಕುತ್ತ ಹೊರಟವೇಳೆ ಶ್ರೀ ರಾಮನಿಗೆ ಶಕ್ತಿ ತುಂಬಿದ್ದು ನಮ್ಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪ್ರದೇಶ. ಹೌದು ಅಂದಿನ ಕಿಷ್ಕಿಂದೆ ರಾಜ್ಯದ ವಾನರಸೇನೆ ಹಾಗೂ ಶ್ರೀರಾಮನ ಬಂಟ ಹನುಮ, ಪ್ರಭು ರಾಮನಿಗೆ ಸಿಕ್ಕಿದ್ದು ಇದೆ ಕಿಷ್ಕಿಂದೆ ರಾಜ್ಯ ಅಂತಲೇ ಪ್ರಸಿದ್ದಿಯಾಗಿರುವ ಇಂದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ.

ಹೌದು ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿ ಮೊದಲ ಬಾರಿಗೆ ಪ್ರಭು ಶ್ರೀರಾಮನನ್ನ ಆಂಜನೇಯ ಭೇಟಿಯಾಗ್ತಾನೆ. ಇದೆ ಸ್ಥಳದಲ್ಲಿ ವಾಲಿ ಸುಗ್ರಿವರ ಕಾಳಗ ಕೂಡಾ ನಡೆಯತ್ತೆ. ವಾಲಿ ಸುಗ್ರಿವರ ಕಾಳಗದಲ್ಲಿ ಶ್ರೀರಾಮ ವಾಲಿಯನ್ನ ಸೋಲಿಸಿ ಸುಗ್ರಿವನಿಗೆ ಕಿಷ್ಕಿಂದೆಯ ಅಧಿಕಾರ ನೀಡ್ತಾನೆ. ಇದು ಒಂದು ಕಡೆಯಾದ್ರೆ, ಸೀತಾಮಾತೆಯನ್ನ ಹುಡುಕಿ ಹೊರಟ ಶ್ರೀ ರಾಮನಿಗೆ ಶಭರಿ ಕಾದು ಕುಳಿತಿದ್ದು ಕೂಡಾ ಇದೆ ಪಂಪಾಸರೋವರದಲ್ಲಿ. ಈ ಪಂಪಾಸರೋವರದಲ್ಲಿ ಶಬರಿಯ ಗುಹೆ ಇಂದಿಗೂ ಇದೆ‌. ಈ ಗುಹೇಯಲ್ಲಿ ಪ್ರಭು ಶ್ರೀರಾಮನ ಪಾದುಕೆಗಳಿವೆ. ರಾಮ ಇಲ್ಲಿಂದ ತೆರಳಿದ ಬಳಿಕ ಶಬರಿ ಈ ಪಾದುಕೆಗಳನ್ನ ಪೂಜೆ ಸಲ್ಲಿಸುತ್ತಿರೊ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ‌‌.

ಶಬರಿ ಅಂದ್ರೆ ಅಂತ್ಯವಿಲ್ಲದೇ ಕಾಯುವಿಕೆ ಅಂತಾರೆ. ಮಾತಂಗ ರುಷಿಗಳ ಆಶ್ರಮದಲ್ಲಿದ್ದ ಶಬರಿ, ರಾಮನಿಗಾಗಿ ಅನೇಕ ವರ್ಷಗಳ ಕಾಲ ಕಾಯುತ್ತಾ ಕುಳಿಯುತ್ತಾಳೆ. ಪಂಪಾ ಸರೋವರದಲ್ಲಿರುವ ಶಬರಿ ಗುಹೆ ಇಂದಿಗೂ ಇಂದು, ಈ ಗುಹೆಯನ್ನು ಶಬರಿ ಗುಹೆ ಅಂತಲೇ ಕರೆಯುತ್ತಾರೆ. ಕಿಷ್ಕಿಂದೆ ಬಾಗಕ್ಕೆ ಬಂದ, ರಾಮ, ಶಬರಿಯ ಬಗ್ಗೆ ತಿಳಿದು, ಆಕೆಯ ಗುಹೆಗೆ ಬರುತ್ತಾನೆ. ರಾಮ ಬಂದಿದ್ದ ವಿಷಯ ಕೇಳಿ ಶಬರಿಗೆ ಇಲ್ಲಿಲ್ಲಂದ ಆನಂದವಾಗುತ್ತದೆ. ಶಬರಿ, ಸ್ಥಳೀಯವಾಗಿ ಸಿಗುವ ಬಾರೆ ಹಣ್ಣುಗಳನ್ನು ತಂದು ನೀಡುತ್ತಾಳೆ. ಬಾರೆ ಹಣ್ಣು ನೀಡುವಾಗ, ಶಬರಿ ಪ್ರತಿಯೊಂದು ಬಾರೆ ಹಣ್ಣನ್ನು ತಿಂದು, ತನ್ನ ಬಾಯಿಂದ ಕಚ್ಚಿ, ಅದು ಹುಳಿಯಾಗಿದೆಯಾ, ಸಿಹಿಯಾಗಿದೆಯಾ ಅಂತ ಪರೀಕ್ಷಿಸಿ ನೀಡುತ್ತಿರುತ್ತಾಳೆ. ಇದನ್ನು ನೋಡಿದ ಲಕ್ಷ್ಮಣ್, ಎಂಜಲು ಹಣ್ಣುಗಳನ್ನು ನೀಡುತ್ತಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾನೆ. ಆಗ ರಾಮ, ಶಬರಿಯ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ.

ಅಯೋಧ್ಯೆಯಿಂದ 14 ವರ್ಷಗಳ ವನವಾಸದಲ್ಲಿದ್ದ ಶ್ರೀರಾಮ ಸೀತಾ ಮಾತೆಯನ್ನ ಹುಡುಕಿ ಹೊರಟಾಗ ಆತನ ಬಳಿ ಯಾವುದೆ ಸೈನ್ಯವಾಗಲಿ, ಯುದ್ದ ಸಲಕರಣೆಗಳಾಗಲಿ ಇರಲಿಲ್ಲ. ಅದರ ಜೊತೆಗೆ ಸಮುದ್ರವನ್ನ ದಾಟಿ ಲಂಕೆಗೆ ಹೋಗಲು ಅಸಾದ್ಯದ ಕೆಲಸವಾದಾಗ, ಸಮುದ್ರವನ್ನ ಹಾರಿ ಲಂಕೆಯಲ್ಲಿರುವ ಸೀತೆಯನ್ನ ಪತ್ತೆ ಹಚ್ಚುವ ಶಕ್ತಿ ಹೊಂದಿರೋ ಹನುಮ, ಹಾಗೂ ಕಿಷ್ಕಿಂದೆಯ ರಾಜ್ಯದ ಕಪಿ ಸೇನೆ ರಾಮನನ್ನ ಸೇರಿದ್ದು ಇದೆ ಕಿಷ್ಕಿಂದೆಯಲ್ಲಿ. ಕೊಪ್ಪಳ ಸುತ್ತ ಮುತ್ತಲಿನ, ಹೊಸಪೇಟೆ ಬಳ್ಳಾರಿ ಭಾಗದ ಕಬ್ಬಿಣ ಅಧಿರಿನಿಂದ ಅಂದು ಕೂಡಾ ಯುದ್ದಕ್ಕೆ ಬೇಕಾದ ಆಯುದ, ಹಾಗೂ ಸೈನ್ಯವನ್ನ ಶ್ರೀರಾಮ ಕಿಷ್ಕಿಂದೆಯಿಂದಲೆ ಸಜ್ಜು ಮಾಡಿಕೊಂಡಿರೊ ಬಗ್ಗೆ ಇತಿಹಾಸವಿದೆ.

ಕಿಷ್ಕಿಂದೆ ರಾಜ್ಯದ ವಾನರ ಸೇನೆಯಿಂದಲೆ ಭಾರತದಿಂದ ಲಂಕೆಗೆ ರಾಮ ಸೇತು ನಿರ್ಮಿಸಿ ಆಂಜನೆಯನ ಸಹಾಯದಿಂದ ಲಂಕಾಪ್ರವೇಶ ಮಾಡಿದ ಶ್ರೀರಾಮ ರಾವಣನ ಸಂಹಾರ ಮಾಡಿ, ಸೀತಾಮಾತೆಯನ್ನ ಮರಳಿ ಅಯೋದ್ಯೆಗೆ ಕರೆದುಕೊಂಡು ಬರ್ತಾನೆ. ಮಹರ್ಷಿ ವಾಲ್ಮಿಖಿ ಬರೆದ ಮೂಲ ರಾಮಾಯಣದ ಎರಡು ಖಂಡಗಳಲ್ಲಿ ಶ್ರೀರಾಮನಿಗೂ ಕಿಷ್ಕಿಂದೆ ಅಂಜನಾದ್ರಿಗೂ ಇರುವ ಸಂಬಂದದ ಬಗ್ಗೆ ಉಲ್ಲೆಖವಿದೆ. ರಾಮ ರಾವಣರ ಯುದ್ದದ ಸಿದ್ದತೆ, ಸೈನ್ಯ ತಯಾರಿ ಎಲ್ಲದಕ್ಕೂ ರಾಮನಿಗೆ ಸಹಾಯವಾಗಿದ್ದು ಕಿಷ್ಕಿಂದಾ ರಾಜ್ಯ, ಅದು ಇಂದಿನ ಅಂಜನಾದ್ರಿ ಆನೆಗೊಂದಿ ಭಾಗ. ಈ ಬಗ್ಗೆ ಹನುಮ ಜನ್ಮ ಭೂಮಿ ಅಂಜನಾದ್ರಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಇದಕ್ಕೆ ಹಲವು ಸಾಕ್ಷಿಗಳು ದೊರೆತಿವೆ‌. ಇದರಿಂದ ರಾಮಾಯಣಕ್ಕೂ ನಮ್ಮ ಕೊಪ್ಪಳ ಜಿಲ್ಲೆಯಗೂ ಅವಿನಾಭಾವ ಸಂಬಂದವಿದೆ ಅಂತಾರೆ ಇತಿಹಾಸ ತಜ್ಞರು.

ಇದನ್ನೂ ಓದಿ: ಶ್ರೀರಾಮನಿಗೂ ಮುದ್ರಣ ಕಾಶಿ ಗದಗ ಜಿಲ್ಲೆಗೂ ಇದೆ ಅವಿನಾಭಾವ ಸಂಬಂಧ! ಇಲ್ಲಿದೆ ಪವಿತ್ರ ಕ್ಷೇತ್ರ, ಆ ಸ್ಥಳ ಮಹಾತ್ಮೆ ಏನು?

ಸದ್ಯ ಅಯೋದ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರಕ್ಕೂ ಅಂಜನಾದ್ರಿಯಿಂದ ಕಲ್ಲು ಮತ್ತು ಮಣ್ಣನ್ನು ತೆಗದುಕೊಂಡು ಹೋಗಲಾಗಿದೆ. ಸದ್ಯ ಇಡಿ ವಿಶ್ವವೆ ಎದುರು ನೋಡುವಂತೆ ನಿರ್ಮಾಣವಾಗಿರೋ ಈ ರಾಮ ಮಂದಿರ, ಮರ್ಯಾದೆ ಪುರುಷೋತ್ತಮನೆಂದು ಹೆಸರಾದ ಪ್ರಭು ಶ್ರೀರಾಮನಿಗೆ ಸೀತಾ ಮಾತೆಯ ಬಂದನ ಮುಕ್ತಿ ಮಾಡಲು ಸಹಾಯ ಮಾಡಿದ್ದು ನಮ್ಮ ಕೊಪ್ಪಳದ ಆಂಜನೇಯ ಅದರ ಜೊತೆ ಇಷ್ಟೆಲ್ಲ ಪ್ರಹಸನಕ್ಕೆ ಸಾಕ್ಷಿಯಾಗಿದ್ದು ನಮ್ಮ ಕಿಷ್ಕಿಂದೆಯ ಅಂಜನಾದ್ರಿ ಎನ್ನುವುದೆ ನಮಗೆಲ್ಲ ಹೆಮ್ಮೆಯ ಸಂಗತಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ