ಶ್ರೀರಾಮನಿಗೂ ಮುದ್ರಣ ಕಾಶಿ ಗದಗ ಜಿಲ್ಲೆಗೂ ಇದೆ ಅವಿನಾಭಾವ ಸಂಬಂಧ! ಇಲ್ಲಿದೆ ಪವಿತ್ರ ಕ್ಷೇತ್ರ, ಆ ಸ್ಥಳ ಮಹಾತ್ಮೆ ಏನು?
ಗದಗ ಜಿಲ್ಲೆಗೂ ಅಯೋಧ್ಯೆ ಪ್ರಭು ಶ್ರೀ ರಾಮನ ನಂಟು, ಶ್ರೀ ರಾಮ ಹಾಗೂ ಲಕ್ಷಣ ವಾಸ್ತವ್ಯ ಮಾಡಿದ ಜಾಗದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಗೊಂಡಿದೆ, ಸೀತಾ ಮಾತೆಯ ಅನ್ವೇಷಣೆ ಮಾಡುತ್ತಾ ಶ್ರೀ ರಾಮ ಗದಗ ಜಿಲ್ಲೆಗೆ ಬಂದಿದ್ದ ಎಂಬ ಮಾಹಿತಿಯಿದೆ.
ಕೋಟ್ಯಾಂತರ ಹಿಂದೂಗಳ ಆರಾಧ್ಯ ದೇವರು ಶ್ರೀ ರಾಮ. ಸುದೀರ್ಘ ಹೋರಾಟದ ಫಲವಾಗಿ ಈವಾಗ ಭವ್ಯವಾದ ಶ್ರೀ ರಾಮ ಮಂದಿರ ಉದ್ಘಾಟನೆಗೆ (Ram Mandir Inauguration) ದಿನಗಣನೆ ಆರಂಭವಾಗಿದೆ. ಶ್ರೀ ರಾಮನಿಗೂ ಮುದ್ರಣ ಕಾಶಿ ಗದಗ (Gadag) ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಹೌದು ಸೀತಾ ದೇವಿಯನ್ನು ಹುಡುಕಲು ಹೋಗುವಾಗ, ಶ್ರೀ ರಾಮ ಹಾಗೂ ಲಕ್ಷಣ ಇಬ್ಬರೂ ಒಂದು ದಿನ ಇಲ್ಲಿ ವಾಸ್ತವ್ಯ ಮಾಡಿ, ಮುಂದೆ ಹೋಗಿದ್ದಾರೆ. ಹೀಗಾಗಿ ಆ ಸ್ಥಳದಲ್ಲಿ ಭವ್ಯವಾದ ಶ್ರೀ ರಾಮ ಮಂದಿರವನ್ನು (Ram Mandir) ನಿರ್ಮಾಣ ಮಾಡಿದ್ದು, ನಿತ್ಯ ಆರಾಧನೆ ನಡೆಯುತ್ತದೆ.
ಅಯೋಧ್ಯೆ ಪ್ರಭು ಶ್ರೀ ರಾಮನಿಗೂ ಮುದ್ರಣ ಕಾಶಿ ಗದಗ ಜಿಲ್ಲೆಗೆ ನಂಟು..! ಗದಗ ತಾಲೂಕಿನ ಬೆಳದಡಿ ಗ್ರಾಮದಲ್ಲಿ ಶ್ರೀ ರಾಮ ಹಾಗೂ ಲಕ್ಷಣ ವಾಸ್ತವ್ಯ..! ಬೆಳದಡಿ ಗ್ರಾಮದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ದೇವಿ ಹಾಗೂ ಹನುಮಾನ್ ಮೂರ್ತಿಗಳ ಪ್ರತಿಷ್ಠಾಪನೆ..! ಗದಗ ಮಾರ್ಗವಾಗಿ ಬೈರಾಪುರ, ಕಿಷ್ಕಿಂದೆಗೆ ಹೋದ್ರು ಎನ್ನುವ ಐತಿಹ್ಯ..! ಶ್ರೀ ರಾಮ ಮಂದಿರಕ್ಕೆ ದೇಶ ವಿದೇಶಗಳಿಂದ ಬರುವ ಭಕ್ತರು..! ಇದು ಇಲ್ಲಿಯ ಸ್ಥೂಲ ಆದರೆ ಭವ್ಯ ಚಿತ್ರಣ.
ಶ್ರೀ ರಾಮ ಹಾಗೂ ಕರ್ನಾಟಕಕ್ಕೆ ಸಾಕಷ್ಟು ನಂಟು ಇರೋದು ಇತಿಹಾಸದಿಂದ ಗೊತ್ತಾಗುತ್ತದೆ. ಶ್ರೀ ರಾಮ ಹಾಗೂ ಲಕ್ಷಣ ಸೀತಾ ಅನ್ವೇಷಣೆ ಮಾಡುವಾಗ ಗದಗ ಜಿಲ್ಲೆಯ ಮಾರ್ಗವಾಗಿ ಹೋಗಿದ್ದಾರಂತೆ. ಗದಗ ತಾಲೂಕಿನ ಬೆಳದಡಿ ಗ್ರಾಮ ಆ ಕಾಲಕ್ಕೆ ದಟ್ಟವಾದ ಅರಣ್ಯ ಪ್ರದೇಶವಾಗಿದ್ದು, ಶ್ರೀ ರಾಮ ಹಾಗೂ ಲಕ್ಷಣ ದಟ್ಟವಾದ ಕಾಡಿನಲ್ಲಿ ಒಂದು ದಿನ ವಾಸ್ತವ್ಯ ಮಾಡಿ ಹೋಗಿದ್ದಾರೆ.
ಬ್ರಹ್ಮ ಚೈತನ್ಯ ಮಹಾರಾಜರು ತ್ರಿಕಾಲ ಜ್ಞಾನವನ್ನು ಹೊಂದಿದ್ರು, ಈ ಜಾಗದಲ್ಲಿ ಶ್ರೀ ರಾಮ ಹಾಗೂ ಲಕ್ಷ್ಮಣ ವಾಸ್ತವ್ಯ ಮಾಡಿದ್ದು, ಹಾಗಾಗಿ ಇಲ್ಲೊಂದು ಭವ್ಯವಾದ ಶ್ರೀ ರಾಮನ ಮಂದಿರ ನಿರ್ಮಾಣ ಮಾಡಬೇಕು ಎಂದು ಸಂಕಲ್ಪ ಮಾಡಿದ್ರು. ಮುಂದೆ ಜೈಪುರ ದಿಂದ, ಅಮೃತ ಶಿಲೆಯಿಂದ ಕೆತ್ತನೆ ಮಾಡಿರೋ ಶ್ರೀ ರಾಮ, ಲಕ್ಷ್ಮಣ, ಸೀತಾ ದೇವಿ ಹಾಗೂ ಹನುಮಾನ್ ಮೂರ್ತಿಗಳ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಸುಂದರವಾಗಿ ಕೆತ್ತನೆ ಮಾಡಿರೋದರಿಂದ ಸಜೀವ ಶ್ರೀ ರಾಮನ ಮಂದಿರ ಎಂದು ಕರೆಯಲಾಗುತ್ತದೆ. ಶ್ರೀ ರಾಮ, ಲಕ್ಷ್ಮಣ ಹಾಗೂ ಸೀತಾ ಮಾತೆಯು ಗರ್ಭಗುಡಿಯಲ್ಲಿ ನೆಲೆ ನಿಂತಿದ್ದಾರೆ. ಮುಂದೆ ಹನುಮಾನ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಶ್ರೀ ರಾಮನ ಪಾದ ಸ್ಪರ್ಶದಿಂದಾಗಿ ರಾಮ ಮಂದಿರ ನಿರ್ಮಾಣವಾಗಿದೆ ಅಂತಾರೆ.
ಬೆಳದಡಿ ಶ್ರೀ ರಾಮ ಮಂದಿರದ ಜಾಗದಲ್ಲಿ ಹಿಂದೆ ಶ್ರೀ ರಾಮ ಹಾಗೂ ಲಕ್ಷಣ ವಾಸ್ತವ್ಯ ಮಾಡಿ ಹೋಗಿರೋದರಿಂದ ಇದೊಂದು ಪವಿತ್ರವಾದ ಕ್ಷೇತ್ರವಾಗಿದೆ. ಈಗೀನ ಬೆಳದಡಿ ಗ್ರಾಮದಿಂದ ಶ್ರೀ ರಾಮ ಬೈರಾಪುರ ಗ್ರಾಮಕ್ಕೆ ಹೋಗುವಾಗ, ಶ್ರೀ ರಾಮನ ತಂದೆ ದಶರಥ ಮಹಾರಾಜರು ಸಾವನ್ನಪ್ಪಿರುವ ಸುದ್ದಿ ತಿಳಿದು, ಬೈರಾಪುರದಲ್ಲಿ, ಬಿಲ್ಲು ಹೊಡೆದು, ನೀರು ತರಿಸಿದ್ರು ಎನ್ನುವದು ಗೊತ್ತಾಗುತ್ತದೆ, ಮುಂದೆ ಅಲ್ಲಿಂದ ಕಿಷ್ಕಿಂದೆ ಹೋಗಿದ್ದಾರೆ ಎನ್ನುವ ನಂಬಿಕೆಯಿದೆ. ಕಿಷ್ಕಿಂದೆಯಿಂದ ರಾಮೇಶ್ವರಕ್ಕೆ ಹೋಗಿ ಅಲ್ಲಿಂದ ಲಕ್ಕಾಗೆ ಹೋಗಿ, ಸೀತಾ ದೇವಿಯನ್ನು ಕರೆದುಕೊಂಡು ಬಂದ್ರು ಎನ್ನುವದು ಇತಿಹಾಸವಾಗಿದೆ. ಹೀಗಾಗಿ ಬೆಳದಡಿ ಗ್ರಾಮದ ಶ್ರೀ ರಾಮ ಮಂದಿರಕ್ಕೆ ಶ್ರೀ ರಾಮ ಹಾಗೂ ಲಕ್ಷಣ ಒಂದು ದಿನ ವಾಸ್ತವ್ಯ ಮಾಡಿ, ಹೋಗಿದ್ದಾರೆ ಹೀಗಾಗಿ ಇದೊಂದು ಪುಣ್ಯ ಭೂವಿಯಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ಶ್ರೀ ರಾಮ ಮಂದಿರಕ್ಕೆ ಬರ್ತಾರೆ ಅಂತಾರೆ ಅರ್ಚಕರಾದ ರಘುರಾಜ್.
ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯವಾದ ಮಂದಿರ ಲೋಕಾರ್ಪಣೆ ದಿನಗಣನೆ ಆರಂಭಾಗಿದೆ. ಶ್ರೀ ರಾಮನ ಪಾದ ಸ್ಪರ್ಶವಾದ ಜಾಗದಲ್ಲಿ ಭವ್ಯವಾದ ಶ್ರೀ ರಾಮನ ಭವ್ಯವಾದ ಮಂದಿರವನ್ನು ನಿರ್ಮಾಣ ಮಾಡಿಕೊಂಡು ಇಲ್ಲಿ ಆರಾಧನೆ ಮಾಡಲಾಗುತ್ತಿದೆ. ಒಟ್ನಲ್ಲಿ ಶ್ರೀ ರಾಮ ಹಾಗೂ ಲಕ್ಷಣ ಬಂದಿರೋದರಿಂದ ಶ್ರೀ ರಾಮ ಮಂದಿರ ನಿರ್ಮಣವಾಗಿದೆ ಎನ್ನುವದು ಇಲ್ಲಿನ ಭಾಗದ ಜನರ ಭಾವನೆಯಾಗಿದೆ. ಕೋಟ್ಯಾಂತರ ಹಿಂದೂಗಳ ಆರಾಧ್ಯ ದೇವರಾದ ಶ್ರೀ ರಾಮ ಮಂದಿರಕ್ಕೆ ಉದ್ಘಾಟನೆ ಅಗ್ತಾಯಿರೋದು ಸಂತಸದ ವಿಷಯವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:07 pm, Wed, 3 January 24