ಕೊಪ್ಪಳ: ಹುಲಿಗೆಮ್ಮ ದೇಗುಲದ ಹುಂಡಿ ಹಣ ಎಣಿಕೆ; ಕೇವಲ ಒಂದೂವರೆ ತಿಂಗಳಲ್ಲಿ 97. 25 ಲಕ್ಷ ರೂ. ಸಂಗ್ರಹ

| Updated By: preethi shettigar

Updated on: Oct 29, 2021 | 11:46 AM

ಕೇವಲ ಒಂದೂವರೆ ತಿಂಗಳಲ್ಲಿ 97,25,980 ರೂಪಾಯಿ ಹಣ ಸಂಗ್ರಹವಾಗಿದೆ. ಜತೆಗೆ 225 ಗ್ರಾಂ ಬಂಗಾರ, 3 ಕೆಜಿ ಬೆಳ್ಳಿ ಕೂಡ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ಈ ಹಿಂದೆ ಹುಲಿಗೆಮ್ಮ ದೇಗುಲದ ಹುಂಡಿಯಲ್ಲಿ 40 ರಿಂದ 50 ಲಕ್ಷ ರೂ. ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಅತಿ ಹೆಚ್ಚು ಹಣ ಸಂಗ್ರಹವಾಗಿದೆ.

ಕೊಪ್ಪಳ: ಹುಲಿಗೆಮ್ಮ ದೇಗುಲದ ಹುಂಡಿ ಹಣ ಎಣಿಕೆ; ಕೇವಲ ಒಂದೂವರೆ ತಿಂಗಳಲ್ಲಿ 97. 25 ಲಕ್ಷ ರೂ. ಸಂಗ್ರಹ
ಹುಂಡಿ ಹಣ ಎಣಿಕೆ
Follow us on

ಕೊಪ್ಪಳ: ಹುಲಗೆಮ್ಮ ದೇವಸ್ಥಾನ ಹುಂಡಿಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಕೊಪ್ಪಳ ಜಿಲ್ಲೆಯ ಹುಲಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಕೇವಲ ಒಂದೂವರೆ ತಿಂಗಳಲ್ಲಿ 97,25,980 ರೂಪಾಯಿ ಹಣ ಸಂಗ್ರಹವಾಗಿದೆ. ಜತೆಗೆ 225 ಗ್ರಾಂ ಬಂಗಾರ, 3 ಕೆಜಿ ಬೆಳ್ಳಿ ಕೂಡ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ಈ ಹಿಂದೆ ಹುಲಿಗೆಮ್ಮ ದೇಗುಲದ ಹುಂಡಿಯಲ್ಲಿ 40 ರಿಂದ 50 ಲಕ್ಷ ರೂ. ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಅತಿ ಹೆಚ್ಚು ಹಣ ಸಂಗ್ರಹವಾಗಿದೆ.

ಹುಲಿಗೆಮ್ಮ ದೇಗುಲದಲ್ಲಿ ಇದೇ ಮೊದಲ ಬಾರಿ ಎರಡು ದಿನ ಹುಂಡಿ ಎಣಿಸುವ ಕಾರ್ಯ ನಡೆದಿದೆ. ಹುಲಗೆಮ್ಮ ದೇವಸ್ಥಾನಕ್ಕೆ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಅತಿ ಹೆಚ್ಚು ಹಣ ಸಂಗ್ರಹವಾಗುತ್ತದೆ. ಕೊರೊನಾ ನಂತರದಲ್ಲಿ ದೇವಾಲಯದ ಇತಿಹಾಸದಲ್ಲಿ ಮೊದಲ ಬಾರಿ ಇಷ್ಟೊಂದು ಹಣ ಸಂಗ್ರಹವಾಗಿದೆ.

ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಹುಂಡಿಗಳನ್ನು ಅ.27 ಮತ್ತು 28ರಂದು ಎರಡು ದಿನಗಳ ಕಾಲ ಎಣಿಕೆ ಮಾಡಲಾಗಿದ್ದು, ದೇವಸ್ಥಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ದೇಣಿಗೆ ಸಂಗ್ರಹವಾಗಿದೆ. ಕೊರೊನಾ ಲಾಕ್​ಡೌನ್​ನಿಂದಾಗಿ ದೇವಸ್ಥಾನವನ್ನು ಮುಚ್ಚಲಾಗಿತ್ತು. ಆದ್ದರಿಂದಾಗಿ ಆ ಸಮಯದಲ್ಲಿ ದೇವಾಲಯದ ಹುಂಡಿ ಹಣ ಕಡಿಮೆ ಸಂಗ್ರಹವಾಗಿತ್ತು. ಸದ್ಯ ಕಳೆದೆರಡು ತಿಂಗಳಿಂದ ದೇವಸ್ಥಾನ ತೆರೆಯುವಂತೆ ಆದೇಶ ಹೊರಡಿಸಿದ್ದರಿಂದ ರಾಜ್ಯ ಸೇರಿದಂತೆ ನಾನಾ ರಾಜ್ಯಗಳ ಭಕ್ತರು ರೈಲು, ಬಸ್, ಖಾಸಗಿ ವಾಹನಗಳ ಮೂಲಕ ಹುಲಿಗಿಗೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಹೀಗಾಗಿ ದೇಣಿಗೆ ಸಂಗ್ರಹದಲ್ಲಿ ದಾಖಲೆ ಮೊತ್ತ ಹರಿದು ಬಂದಿದೆ.

97. 25 ಲಕ್ಷ ರೂ. ಸಂಗ್ರಹ 
ಈವರೆಗೆ ಪ್ರತಿ ತಿಂಗಳು ಇಲ್ಲವೇ ಎರಡ್ಮೂರು ತಿಂಗಳಿಗೊಮ್ಮೆ ಹುಂಡಿ‌ ಎಣಿಕೆ ಮಾಡಲಾಗುತ್ತಿತ್ತು. ಈ ವೇಳೆ 40 ರಿಂದ 50 ಲಕ್ಷ ಹಾಗೂ ಕಚ್ಚಾ ಆಭರಣ ಮತ್ತು ಬೆಳ್ಳಿ ಆಭರಣಗಳನ್ನು ಭಕ್ತರು ಕಾಣಿಕೆಯಾಗಿ ಸಲ್ಲಿಸುತ್ತಿದ್ದರು. ಸೆಪ್ಟೆಂಬರ್ ವಾರದ ದಿನ ಮತ್ತು ಹುಣ್ಣಿಮೆ ದಿನ ಹೊರತುಪಡಿಸಿ ಅ.27ರವರೆಗೆ ಹುಂಡಿಗೆ ಜಮಾ ಆದ ದೇಣಿಗೆ ಎಣಿಕೆ ಮಾಡಲಾಗಿದೆ. ಸದ್ಯ ಅ.27 ರಂದು ಎಣಿಕೆ ಮಾಡಿದ ವೇಳೆ 85,59,110 ರೂಪಾಯಿ ನಗದು ಮೊತ್ತ ಸಂಗ್ರಹವಾಗಿದೆ. ಇನ್ನೂ 145 ಗ್ರಾಂ ಕಚ್ಚಾ ಬಂಗಾರ, 15 ಕೆಜಿ ಕಚ್ಚಾ ಬೆಳ್ಳಿ ಹುಂಡಿಯಲ್ಲಿ ಬಂದಿದೆ. ರಾತ್ರಿ 8 ಗಂಟೆಯವರೆಗೆ ನಡೆಸಿದ ಎಣಿಕೆಯಲ್ಲಿ ಇನ್ನೂ ಮೂರಾಲ್ಕು ಹುಂಡಿಗಳು ಹುಳಿದ ಹಿನ್ನೆಲೆ ಅಕ್ಟೋಬರ್ 28 ರಂದು ಹುಂಡಿ ಎಣಿಕೆ ಮುಂದುವರಿಸಲಾಗಿದೆ. ಈ ವೇಳೆ ಹುಂಡಿಯಲ್ಲಿ 11,66,870 ರೂ . ಮೊತ್ತ ಸಂಗ್ರಹವಾಗಿದ್ದು, 80 ಗ್ರಾಂ ಕಚ್ಚಾ ಬಂಗಾರ , 3 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಒಟ್ಟು 97,25,980 ರೂ. ನಗದು, 225 ಗ್ರಾಂ ಬಂಗಾರ, 18 ಕೆಜಿ ಕಚ್ಚಾ ಬೆಳ್ಳಿ ಹುಂಡಿಯಲ್ಲಿ ಭಕ್ತರು ದೇವಿಗೆ ಸಮರ್ಪಿಸಿದ್ದಾರೆ.

ಹರಿದು ಬಂದ ಭಕ್ತಸಾಗರ
ಕೊವಿಡ್ 19 ಸೋಂಕಿನ ಭೀತಿಯಿಂದ ರಾಜ್ಯದ ಎಲ್ಲ ದೇವಸ್ಥಾನಗಳು ಬಂದ್ ಮಾಡಿದ್ದರೂ ಭಕ್ತರು ಮಾತ್ರ ದೇವಿಗೆ ಹರಕೆ ತೀರಿಸುವುದು ಮಾತ್ರ ಬಿಟ್ಟಿರಲಿಲ್ಲ. ಅಲ್ಲದೇ ದೇವಿಯ ದರ್ಶನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹೊರಗಡೆಯಿಂದ ದೇವಿಗೆ ಹರಕೆ ತೀರಿಸಿ ಹೋಗುತ್ತಿದ್ದರು. ಸೆಪ್ಟೆಂಬರ್‌ನಲ್ಲಿ 2021 ರಲ್ಲಿ ಶ್ರೀ ಹುಲಿಗೆಮ್ಮ ದೇವಿಗೆ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾರದ ದಿನವೇ ಜಿಲ್ಲಾಡಳಿತ ಭಕ್ತರಿಗೆ ನಿರ್ಬಂಧವನ್ನು ವಿಧಿಸಿತ್ತು. ಸದ್ಯ ಅಕ್ಟೋಬರ್‌ನಲ್ಲಿ ದೇವಿ ದರ್ಶನಕ್ಕೆ ಹುಣ್ಣಿಮೆ ಹಾಗೂ ವಾರದ ದಿನವೂ ಅವಕಾಶ ಕಲ್ಪಿಸಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ.

ಇದನ್ನೂ ಓದಿ:
ಮೈಸೂರು: ಲಾಕ್​ಡೌನ್​ ನಂತರ ಕೋಟ್ಯಾಧೀಶನಾದ ನಂಜುಂಡೇಶ್ವರ; ಒಂದೇ ತಿಂಗಳಲ್ಲಿ ಕಾಣಿಕೆ ಹುಂಡಿ ಭರ್ತಿ

Tirupati Temple : ತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ; 24 ಗಂಟೆಗಳಲ್ಲಿ 1.53 ಕೋಟಿ ರೂ. ಸಂಗ್ರಹ

Published On - 10:58 am, Fri, 29 October 21