Sign In

By signing in or creating an account, you agree with Associated Broadcasting Company's Terms & Conditions and Privacy Policy.

Street Dog Attack: 8 ವರ್ಷದ ಬಾಲಕಿ ಮೇಲೆ ದಾಳಿ ಮಾಡಿ ಎಳೆದೊಯ್ದ ಬೀದಿ ನಾಯಿಗಳು; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಉಪ್ಪಾರ ಓಣಿಯಲ್ಲಿ 8 ವರ್ಷದ ಖುಷಿ ಎಂಬ ಬಾಲಕಿ ಅಂಗಡಿಗೆ ಹೋಗಿ ಬರುತ್ತಿದ್ದಾಗ ಎರಡು ಬೀದಿ ನಾಯಿಗಳು ಆಕೆಯ ಮೇಲೆ ದಾಳಿ ಮಾಡಿ ಎಳೆದಾಡಿವೆ.

Street Dog Attack: 8 ವರ್ಷದ ಬಾಲಕಿ ಮೇಲೆ ದಾಳಿ ಮಾಡಿ ಎಳೆದೊಯ್ದ ಬೀದಿ ನಾಯಿಗಳು; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಯಿ ದಾಳಿಯ ಸಿಸಿಟಿವಿ ದೃಶ್ಯಗಳು
Follow us
ಆಯೇಷಾ ಬಾನು
|

Updated on: Jun 26, 2023 | 11:08 AM

ಕೊಪ್ಪಳ: ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದೆ(Street Dog Attack). ಕಳೆದ ಕೆಲ ದಿನಗಳ ಹಿಂದೆ ಮೂರು ಬೀದಿ ನಾಯಿಗಳು ಬಾಲಕಿ ಮೇಲೆ ದಾಳಿ ಮಾಡಿ ಎಳೆದಾಡಿದ್ದ ವಿಡಿಯೋ ಜನರಿಗೆ ಆತಂಕವನ್ನುಂಟು ಮಾಡಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ಕೊಪ್ಪಳದಲ್ಲಿ(Koppal) ನಡೆದಿದ್ದು ನಾಯಿ ದಾಳಿಗೆ ನಡುಕ ಹುಟ್ಟಿದೆ. 8 ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿ ಆಕೆಯನ್ನು ಎಳೆದಾಡಿ ತೀವ್ರ ಘಾಸಿಗೊಳಿಸಿವೆ.

ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಉಪ್ಪಾರ ಓಣಿಯಲ್ಲಿ 8 ವರ್ಷದ ಖುಷಿ ಎಂಬ ಬಾಲಕಿ ಅಂಗಡಿಗೆ ಹೋಗಿ ಬರುತ್ತಿದ್ದಾಗ ಎರಡು ಬೀದಿ ನಾಯಿಗಳು ಆಕೆಯ ಮೇಲೆ ದಾಳಿ ಮಾಡಿ ಎಳೆದಾಡಿವೆ. ಬಾಲಕಿಯ ಕಿರುಚಾಟ ಕೇಳಿ ಕೂಡಲೆ ಮಹಿಳೆಯೊಬ್ಬರು ಓಡಿ ಬಂದು ನಾಯಿಗಳನ್ನು ಓಡಿಸಿ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯರೆಲ್ಲ ಬಂದು ಬಾಲಕಿಯನ್ನು ಕರೆದೊಯ್ದಿದ್ರು. ಬೀದಿ ನಾಯಿಗಳ ದಾಳಿಯಿಂದ ಖುಷಿಗೆ ತೀವ್ರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಬೀದಿ ನಾಯಿಯ ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಗಾವತಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರಸಭೆ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ನಿನ್ನೆ ರಾತ್ರಿ ಒಳ್ಳಾರಿಯಲ್ಲಿ ಮಲಗಿದ್ದವರ ಮೇಲೆ ಹುಚ್ಚು ನಾಯಿ ದಾಳಿ: 20 ಮಂದಿ ಆಸ್ಪತ್ರೆಗೆ ದಾಖಲು, ನಾಯಿಗಾಗಿ ತಲಾಶ್

ನಾಯಿ ದಾಳಿಗೆ ನವಜಾತ ಶಿಶು ಸಾವು

ಕಳೆದ ಏಪ್ರಿಲ್‌ ತಿಂಗಳಲ್ಲಿ, ನವಜಾತ ಶಿಶುವನ್ನ ನಾಯಿಯೊಂದು ಬಾಯಲ್ಲಿ ಕಚ್ಚಿಕೊಂಡು ಓಡಾಡುತ್ತಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ನಡೆದಿತ್ತು. ನವಜಾತ ಶಿಶುವನ್ನ ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಆಸ್ಪತ್ರೆಯ ಹೆರಿಗೆ ವಾರ್ಡ್‌ ಬಳಿ ನಾಯಿ ಓಡುತ್ತಿರುವುದನ್ನು ಗಮನಿಸಿದ ನಂತರ ಮೆಗ್ಗನ್ ಜಿಲ್ಲಾ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನಾಯಿಯಿಮದ ಶಿಶುವನ್ನು ರಕ್ಷಿಸಿ ಅದನ್ನು ಓಡಿಸಿದ್ದರು. ಬಳಿಕ ಮಗುವನ್ನು ಪರೀಕ್ಷೆಗೆ ಬಳಪಡಿಸುವಷ್ಟರಲ್ಲಿ ಮಗು ಮೃತಪಟ್ಟಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ