ಕೊಪ್ಪಳದಲ್ಲಿ ಸರಳ ವಿವಾಹ; ಮದುವೆಗೆ ಸಾಕ್ಷಿ ದೇವರು ಮತ್ತು ವರನ ಒಬ್ಬ ಬಂಧು ಮಾತ್ರ

|

Updated on: May 24, 2021 | 11:06 AM

ಕೊಪ್ಪಳದ ಮಂಜುನಾಥ ಹಂಚಿನಾಳ ಹಾಗು ಯಲಬುರ್ಗಾ ತಾಲೂಕಿನ ಮುದೋಳದ ಸಹನಾ ಎಂಬುವವರು ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ಬಗ್ಗೆ ಹಿರಿಯರಿಗೆ ಮಾಹಿತಿ ಇತ್ತು. ಒಂದು ಹಂತದಲ್ಲಿ ಮದುವೆಗೆ ಹಿರಿಯರ ಒಪ್ಪಿಗೆ ಇದ್ದರೂ ಹಿರಿಯರು ನಿಂತು ಮದುವೆ ಮಾಡಿಸಿ ಎಂದು ಹೇಳಲು ಆಗುತ್ತಿಲ್ಲ.

ಕೊಪ್ಪಳದಲ್ಲಿ ಸರಳ ವಿವಾಹ; ಮದುವೆಗೆ ಸಾಕ್ಷಿ ದೇವರು ಮತ್ತು ವರನ ಒಬ್ಬ ಬಂಧು ಮಾತ್ರ
ಸರಳ ವಿವಾಹ ಮಾಡಿಕೊಂಡ ನವ ಜೋಡಿ
Follow us on

ಕೊಪ್ಪಳ: ಒಂದು ಕಡೆ ಕೊರೊನಾ ತಡೆಗಾಗಿ ಲಾಕ್​ಡೌನ್​ ಜಾರಿಯಾಗಿದೆ. ಲಾಕ್​ಡೌನ್​ ಜಾರಿಯಾದ ಕಾರಣ ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದೆ. ಅದರಲ್ಲೂ ಪ್ರೀತಿಸಿದವರಿಗೆ ಕೊರೊನಾ ಲಾಕ್​ಡೌನ್​ ಕೊಂಚ ತೊಡಕಾಗಿದೆ. ತಮ್ಮ ಪ್ರೀತಿ, ಪ್ರೇಮದ ಬಗ್ಗೆ ಹಿರಿಯರ ಬಳಿ ಹೇಳಿಕೊಂಡಿದ್ದರು, ಮದುವೆ ಮಾಡಿಸಲು ಒತ್ತಾಯಿಸಲು ಆಗುತ್ತಿಲ್ಲ. ಕಾರಣ ಲಾಕ್​ಡೌನ್​ . ಇದರಿಂದಾಗಿ ಪ್ರೀತಿಸಿದ ಜೋಡಿಯೊಂದು ಸಿಂಪಲ್ಲಾಗಿ ಮದುವೆ ಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇಲ್ಲಿ ಮದುವೆಗೆ ಸಾಕ್ಷಿ ದೇವರು ಮತ್ತು ವರನ ಕಡೆಯಿಂದ ಒಬ್ಬ ಬಂಧು ಮಾತ್ರ.

ಕೊಪ್ಪಳದ ಮಂಜುನಾಥ ಹಂಚಿನಾಳ ಹಾಗು ಯಲಬುರ್ಗಾ ತಾಲೂಕಿನ ಮುದೋಳದ ಸಹನಾ ಎಂಬುವವರು ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ಬಗ್ಗೆ ಹಿರಿಯರಿಗೆ ಮಾಹಿತಿ ಇತ್ತು. ಒಂದು ಹಂತದಲ್ಲಿ ಮದುವೆಗೆ ಹಿರಿಯರ ಒಪ್ಪಿಗೆ ಇದ್ದರೂ ಹಿರಿಯರು ನಿಂತು ಮದುವೆ ಮಾಡಿಸಿ ಎಂದು ಹೇಳಲು ಆಗುತ್ತಿಲ್ಲ. ಇದರಿಂದಾಗಿ ಮದುವೆಯು ಮುಂದೊಡುವ ಸಾಧ್ಯತೆಯೂ ಇದೆ. ಇದೇ ಕಾರಣಕ್ಕೆ ಬೆಳಂಬೆಳಗ್ಗೆ ಜೋಡಿ ಕೊಪ್ಪಳದ ಮಳೆಮಲ್ಲೇಶ್ವರ ದೇವಸ್ಥಾನದ ಮುಂದೆ ನಿಂತು ಮದುವೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಕೇವಲ ದೇವರು ಹಾಗು ಮಂಜುನಾಥ ಸಂಬಂಧಿ ಒಬ್ಬ ಯುವಕ ಮಾತ್ರ ನಡೆದ ಮದುವೆ ಸಾಕ್ಷಿಯಾಗಿದ್ದರು.

ಮದುವೆ ಮಾಡಿಕೊಳ್ಳಲು ನಿರ್ಧರಿಸಿದವರಿಗೆ ಕೊರೊನಾ ಲಾಕ್​ಡೌನ್​ನಿಂದ ಮದುವೆಗೆ ಸಿದ್ಧತೆ ಮಾಡಿಕೊಳ್ಳಲು ಆಗುತ್ತಿಲ್ಲ. ಈ ಮಧ್ಯೆ ಒಂದಾದ ಮನಸ್ಸು ಮದುವೆ ಎಂಬ ಬಂಧನಕ್ಕೆ ದೇವರ ಸಾಕ್ಷಿಯಾಗಿ ಮದುವೆಯಾಗಿದ್ದಾರೆ. ಇದು ಸಹ ಕೊರೊನಾ ಲಾಕ್​ಡೌನ್​ಲ್ಲಿ ಹೊಸ ರೀತಿಯ ಮದುವೆಗೆ ಉದಾಹರಣೆಯಾಗಿದೆ.

ಇದನ್ನೂ ಓದಿ

Cyclone Yaas: 4 ದಿನ ಮುಂಚೆಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ; ಇದು ಪ್ರಚಂಡ ಮಾರುತ ಯಾಸ್​ ಪರಿಣಾಮ: ಏನಿದರ ಪ್ರಕೋಪ?

ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಂತು ಮಾದರಿಯಾದ ಒಡಿಶಾದ ಗ್ರಾಮ, ಇದುವರೆಗೂ ಒಂದೇ ಒಂದು ಪ್ರಕರಣವೂ ಇಲ್ಲ

(Koppala marriage news is viral now as god and one relative present at wedding)