AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ಶಿಕ್ಷಕರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಿ; ಟ್ವಿಟರ್​ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

145 ಕ್ಕೂ ಹೆಚ್ಚು ಶಿಕ್ಷಕರು ಹೈದರಾಬಾದ್-ಕರ್ನಾಟಕದಲ್ಲಿ ಅಂದರೆ ಕಲ್ಯಾಣ ಕರ್ನಾಟಕದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಕೊಟ್ಟ ಆದೇಶ ಪಾಲಿಸಿ ರಾಜ್ಯಾದ್ಯಂತ ಇನ್ನೂ ಹಲವು ಶಿಕ್ಷಕರ ಪ್ರಾಣ ಹೋಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ ಕುಮಾರಸ್ವಾಮಿ, ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು.

ಮೃತ ಶಿಕ್ಷಕರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಿ; ಟ್ವಿಟರ್​ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ
ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ
sandhya thejappa
|

Updated on: May 24, 2021 | 10:32 AM

Share

ಬೆಂಗಳೂರು: ಚುನಾವಣೆ ಕರ್ತವ್ಯದಲ್ಲಿ ದುಡಿದ ಮತ್ತು ವಿದ್ಯಾಗಮ ಯೋಜನೆ ಮೂಲಕ ಪಾಠ ಮಾಡಿದ ಕಲ್ಯಾಣ ಕರ್ನಾಟಕದ 145 ಶಿಕ್ಷಕರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ ಕಡೆ ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಮೃತಪಟ್ಟ ಎಲ್ಲ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವಿಟರ್​ನಲ್ಲಿ ಆಗ್ರಹಿಸಿದ್ದಾರೆ.

145 ಕ್ಕೂ ಹೆಚ್ಚು ಶಿಕ್ಷಕರು ಹೈದರಾಬಾದ್-ಕರ್ನಾಟಕದಲ್ಲಿ ಅಂದರೆ ಕಲ್ಯಾಣ ಕರ್ನಾಟಕದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಕೊಟ್ಟ ಆದೇಶ ಪಾಲಿಸಿ ರಾಜ್ಯಾದ್ಯಂತ ಇನ್ನೂ ಹಲವು ಶಿಕ್ಷಕರ ಪ್ರಾಣ ಹೋಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ ಕುಮಾರಸ್ವಾಮಿ, ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಅವರನ್ನು ಚುನಾವಣೆ ಹಾಗೂ ಮತ್ಯಾವುದೋ ಕಾರಣಕ್ಕೆ ನಿಯೋಜಿಸಿದ ಸರ್ಕಾರವೇ ಈ ಸಾವುಗಳ ಸಂಪೂರ್ಣ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.

ಕೊರೊನಾ ವಾರಿಯರ್ಸ್ ಎಂದು ಬಾಯಿ ಮಾತಿನಲ್ಲಿ ಹೇಳಿದ ಸರ್ಕಾರ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಸಕಾಲಕ್ಕೆ ಗೌರವಧನ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ದುಡಿದವರಿಗೆ ಗೌರವಧನ ಕೊಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ 1,250 ಕೋಟಿ ರೂಗಳ ಪ್ಯಾಕೇಜನ್ನು ಅನುಷ್ಠಾನಗೊಳಿಸುತ್ತದೆ ಎಂಬುದು ಭ್ರಮೆ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ ಹೆಚ್​ಡಿಕೆ, ಭವಿಷ್ಯ ಕಟ್ಟುವ ಶಿಕ್ಷಕರ ಬಗ್ಗೆ ಸರ್ಕಾರದ ಉಡಾಫೆ ಹಾಗೂ ದಿವ್ಯ ನಿರ್ಲಕ್ಷ್ಯ ಧೋರಣೆ ಬಗ್ಗೆ ನನ್ನ ಧಿಕ್ಕಾರವಿದೆ. ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ

ಸಚಿನ್, ಧೋನಿ, ಕೊಹ್ಲಿ, ರೋಹಿತ್ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ? ನೆಟ್ಟಿಗರ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ಉತ್ತರವೇನು?

ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಂತು ಮಾದರಿಯಾದ ಒಡಿಶಾದ ಗ್ರಾಮ, ಇದುವರೆಗೂ ಒಂದೇ ಒಂದು ಪ್ರಕರಣವೂ ಇಲ್ಲ

(HD Kumaraswamy on Twitter has demanded that dead teachers be treated as covid Warriors)