ರಮೇಶ್ ಜಾರಕಿಹೊಳಿ ಬೆಂಬಲಿಗರನ್ನು ಚಂಬಲ್ ಕಣಿವೆಯ ಡಕಾಯಿತರಿಗೆ ಹೋಲಿಸಿದ ಕಾಂಗ್ರೆಸ್

ರಾಜ್ಯದ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ವಿರೋಧ ಪಕ್ಷದ ಅಧ್ಯಕ್ಷರೊಬ್ಬರ ಎದುರು ಚಂಬಲ್ ಕಣಿವೆಯ ಡಕಾಯಿತರಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳೆ ಬೆಂಬಲಿಗರು ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ರಮೇಶ್ ಜಾರಕಿಹೊಳಿ ಬೆಂಬಲಿಗರನ್ನು ಚಂಬಲ್ ಕಣಿವೆಯ ಡಕಾಯಿತರಿಗೆ ಹೋಲಿಸಿದ ಕಾಂಗ್ರೆಸ್
ಕಾಂಗ್ರೆಸ್ ಅಭ್ಯರ್ಥಿ ಬಹಿರಂಗ ಪ್ರಚಾರದ ನಂತರ ಏನಂತ ಪೋಸ್ಟ್ ಮಾಡಿದ್ದಾರೆ ಗೊತ್ತಾ?
Edited By:

Updated on: Mar 28, 2021 | 5:31 PM

ಬೆಂಗಳೂರು: ರಾಜ್ಯ ರಾಜಕೀಯವನ್ನು ಕಳೆದ ಕೆಲ ದಿನಗಳಿಂದ ಆವರಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಕಾಂಗ್ರೆಸ್ ಸರಣಿ ಟ್ವೀಟ್ ಮಾಡುವ ಮೂಲಕ ಚಾಟಿ ಬೀಸಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದ್ದು, ಶಾಸಕ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರನ್ನು ಚಂಬಲ್ ಡಕಾಯಿತರಿಗೆ ಹೋಲಿಸಿದೆ. ರಮೇಶ್ ಜಾರಕಿಹೊಳಿ ಅವರನ್ನು ತಕ್ಷಣವೇ ಬಂಧಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯ, ಪೊಲೀಸರ ಕಳಪೆ ಕಾರ್ಯಕ್ಷಮತೆ ಈ ಸಿಡಿ ಪ್ರಕರಣದಲ್ಲಿ ಬಯಲಾಗಿದೆ. ದೂರು ದಾಖಲಾಗಿದ್ದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದೆ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಶೋಷಣೆಗೆ ಒಳಪಟ್ಟ ಸಾಮಾನ್ಯ ಹೆಣ್ಣು ಮಗಳನ್ನು ಪತ್ತೆಹಚ್ಚಿ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದೆ.

ರಾಜ್ಯದ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ವಿರೋಧ ಪಕ್ಷದ ಅಧ್ಯಕ್ಷರೊಬ್ಬರ ಎದುರು ಚಂಬಲ್ ಕಣಿವೆಯ ಡಕಾಯಿತರಂತೆ ರಮೇಶ್ ಜಾರಕಿಹೊಳೆ ಬೆಂಬಲಿಗರು ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ವಿರೋಧ ಪಕ್ಷದ ಅಧ್ಯಕ್ಷರಾದವರನ್ನೇ ಈ ಮಟ್ಟಿಗೆ ಬೆದರಿಸಲು ಯತ್ನಿಸುವ ರಮೇಶ್ ಜಾರಕಿಹೊಳಿ, ಸಂತ್ರಸ್ತ ಯುವತಿಗೆ ಆಕೆಯ ಕುಟುಂಬಕ್ಕೆ ಇನ್ನೆಷ್ಟು ಬೆದರಿಕೆಯೊಡ್ಡಿರಬಹುದು. ದೂರುದಾರ ಯುವತಿಗೆ ಜೀವ ಬೆದರಿಕೆ ಇರುವುದು ಈ ಘಟನೆಗಳಿಂದ ಸ್ಪಷ್ಟವಾಗಿದೆ. ಈಗಲಾದರೂ ಆರೋಪಿಯನ್ನು ಬಂಧಿಸದಿರುವುದು ಪೊಲೀಸ್ ವ್ಯವಸ್ಥೆಯ ನಿರ್ಲಜ್ಜತನಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ:  ನನ್ನನ್ನು ಸ್ವಾಗತಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಅಭಿನಂದನೆಗಳು: ಡಿ.ಕೆ. ಶಿವಕುಮಾರ್ ಟಾಂಗ್

ಸುದ್ದಿ ವಿಶ್ಲೇಷಣೆ: ಮಂತ್ರಿಗಿರಿ ಇಲ್ಲದ ಜಾರಕಿಹೊಳಿ ಕುಟುಂಬದಿಂದ ಬಿಜೆಪಿ ಸರಕಾರ ಕೆಡವಲು ಸಾಧ್ಯವೇ?

Published On - 5:26 pm, Sun, 28 March 21