AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಕೋಟಿ ಕೋಟಿ ಲಂಚ -BSY ಕುಟುಂಬದ ವಿರುದ್ಧ KPCC ಗಂಭೀರ ಆರೋಪ

ಬೆಂಗಳೂರು: ಕೆಪಿಸಿಸಿ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹಿರಿಯ ಕಾಂಗ್ರೆಸ್​ ನಾಯಕ ರಣದೀಪ್ ಸುರ್ಜೇವಾಲ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಉಸ್ತುವಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸುರ್ಜೇವಾಲ ಸಿಎಂ BSY ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಾಡಿ ಮತ್ತು ಅಳಿಯ ವಿರೂಪಾಕ್ಷರ ವಿರುದ್ಧ ಅಕ್ರಮವಾಗಿ ಹಣ ಸ್ವೀಕರಿಸಿರುವ ಆರೋಪ ಮಾಡಿದ್ದಾರೆ. ಮಹಾತ್ಮ ಗಾಂಧಿ ದುರಾಡಳಿತ ಮತ್ತು ಭ್ರಷ್ಟಾಚಾರ ಮಾರಕ ಎಂದಿದ್ರು. […]

ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಕೋಟಿ ಕೋಟಿ ಲಂಚ -BSY ಕುಟುಂಬದ ವಿರುದ್ಧ KPCC ಗಂಭೀರ ಆರೋಪ
ರಣದೀಪ್ ಸುರ್ಜೇವಾಲಾ
KUSHAL V
|

Updated on:Sep 23, 2020 | 12:47 PM

Share

ಬೆಂಗಳೂರು: ಕೆಪಿಸಿಸಿ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹಿರಿಯ ಕಾಂಗ್ರೆಸ್​ ನಾಯಕ ರಣದೀಪ್ ಸುರ್ಜೇವಾಲ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಉಸ್ತುವಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸುರ್ಜೇವಾಲ ಸಿಎಂ BSY ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಾಡಿ ಮತ್ತು ಅಳಿಯ ವಿರೂಪಾಕ್ಷರ ವಿರುದ್ಧ ಅಕ್ರಮವಾಗಿ ಹಣ ಸ್ವೀಕರಿಸಿರುವ ಆರೋಪ ಮಾಡಿದ್ದಾರೆ.

ಮಹಾತ್ಮ ಗಾಂಧಿ ದುರಾಡಳಿತ ಮತ್ತು ಭ್ರಷ್ಟಾಚಾರ ಮಾರಕ ಎಂದಿದ್ರು. ಆದರೆ, ಯಡಿಯೂರಪ್ಪ ಸರ್ಕಾರದಲ್ಲಿ ಇದೆರಡು ಸೇರಿಕೊಂಡಿದೆ. ಅಪಾರ್ಟ್‌ಮೆಂಟ್ ಒಂದರ ನಿರ್ಮಾಣಕ್ಕೆಂದು ಕೋಟಿ ಕೋಟಿ ರೂಪಾಯಿಯನ್ನು ಸಿಎಂ ಕುಟುಂಬದವರಿಗೆ ನೀಡಲಾಗಿದೆ. ಸಿಎಂ ಕುಟುಂಬಕ್ಕೆ ಹಣ ನೀಡಿರುವ ಬಗ್ಗೆ ಆಡಿಯೋ ಸಹ ಲಭ್ಯವಾಗಿದೆ. ಸಿಎಂ ಪುತ್ರ ವಿಜಯೇಂದ್ರ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ಇದೆ.

ಜೊತೆಗೆ, ಆ ಹಣವನ್ನು ಸಿಎಂ ಮೊಮ್ಮಗ ಶಶಿಧರ್ ಮರಾಡಿಗೆ RTGS ಮಾಡಲಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಹಣ ವರ್ಗಾವಣೆ ಮಾಡಲಾಗಿದೆ. ಇದೆಲ್ಲಾ ಯಡಿಯೂರಪ್ಪ ಅನುಮತಿ ಇಲ್ಲದೆ ಮಾಡಲು ಆಗಲ್ಲ. ಹೀಗಾಗಿ ಈ ಬಗ್ಗೆ ಸಿಎಂ ಯಡಿಯೂರಪ್ಪಗೆ ಮಾಹಿತಿ ಇದೆ. ಈ ಬಗ್ಗೆ ಸೂಕ್ತ ತನಿಖೆಯಿಂದಷ್ಟೇ ಸತ್ಯ ಹೊರಬರಲಿದೆ. ಸಿಎಂ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ ಎಂದು ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.

ಈ ನಡುವೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ ಒಂದರಲ್ಲಿ ಸಿಎಂ BSY ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಡಿ ಹಾಗೂ ಅಳಿಯ ವಿರೂಪಾಕ್ಷ ಲಂಚ ಸ್ವೀಕರಿಸಿದ ವಿಷಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಿದರು.

ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಆರೋಪ 2017ರಲ್ಲಿ BDA ಹೌಸಿಂಗ್ ಟೆಂಡರ್ ಕರೆಯಲಾಗುತ್ತದೆ. 537 ಕೋಟಿ ರೂಪಾಯಿಯ ಟೆಂಡರ್ ಇದಾಗಿರುತ್ತದೆ. ಅದರಲ್ಲಿ L1 ಮತ್ತು L2 ಇರ್ತಾರೆ. ಟೆಂಡರ್‌ನಲ್ಲಿ L1 ಆಗಿ ರಾಮಲಿಂಗಂ ಎಂಬುವವರು ಕೂಡ ಇರುತ್ತಾರೆ. ಆ ಬಳಿಕ ಮತ್ತೆ ಮಾತುಕತೆಯಾಗಿ ಟೆಂಡರ್​ ಮೊತ್ತ 666 ಕೋಟಿಗೆ ಆಗುತ್ತೆ ಎಂಬ ಮಾಹಿತಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ.

ಈ ಹಿಂದೆ BDA ಆಯುಕ್ತರು ಹಣ ಇಲ್ಲವೆಂದು 2020ರ ಮಾರ್ಚ್ 20ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಟೆಂಡರ್ ಒಪ್ಪಿಗೆ ಪಡೆದಿರೋದು 2020ರ ಜೂ.22ರಂದು. ಆದರೆ, ಎಕ್ಸಿಕ್ಯೂಟಿವ್ ಇಂಜಿನಿಯರ್ ಹಿಂದಿನ ದಿನಾಂಕದಲ್ಲಿ ಬರೆದು ವರ್ಕ್ ಆರ್ಡರ್ ನೀಡಿರು ಸಾಧ್ಯತೆಯಿದೆ. ಇವರು ಅಧಿಕಾರಕ್ಕೆ ಬಂದ ಮೇಲೆ ವರ್ಕ್ ಆರ್ಡರ್ ನೀಡಿದ್ದಾರೆ ಅನ್ನೋ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವೇಳೆ ವಿಜಯೇಂದ್ರ ಪ್ರಾಜೆಕ್ಟ್ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಅಲ್ಲದೇ 10 ಕೋಟಿ ರೂಪಾಯಿ ಹಣವನ್ನ ರಾಮಲಿಂಗಂ ಅವರಿಂದ ಕೇಳ್ತಾರೆ. WhatsApp ಮೆಸೆಜ್​ನಲ್ಲಿ ಎಲ್ಲವೂ ದಾಖಲಾಗಿದೆ. BDA ಕಮಿಷನರ್ ಪ್ರಕಾಶ ಎಂಬಾತ ವಿಜಯೇಂದ್ರಗೆ ಕೊಡ್ತಿನಿ ಅಂತಾ 12 ಕೋಟಿ ರೂಪಾಯಿ ಸ್ವೀಕರಿಸ್ತಾನೆ. ಆದರೆ ವಿಜಯೇಂದ್ರಗೆ ಅದನ್ನ ಕೊಟ್ಟೇ ಇಲ್ಲ. ವಿಜಯೇಂದ್ರ ಆ ಬಡ್ಡಿ ಮಗ ನನಗೆ ಹಣ ಕೊಟ್ಟೇ ಇಲ್ಲ ಅಂತಾ ಹೇಳ್ತಾರೆ. ಅದೆಲ್ಲ ನನಗೆ ಗೊತ್ತಿಲ್ಲ.. ಕಮಿಷನರ್​ಗೆ ಕೊಟ್ಟಿದ್ರೆ ನೀನೇ ತಗೋ. ನನಗೆ 12 ಕೋಟಿ ಜೊತೆ 5 ಕೋಟಿ ಕೊಡು ಎಂದು ಕೇಳ್ತಾರೆ. ಬಳಿಕ ಯಡಿಯೂರಪ್ಪ ಮೊಮ್ಮಗ ಶಶಿಧರ್ ಹೆಸರಿಗೆ 7.40 ಕೋಟಿ ರೂಪಾಯಿಯನ್ನ HDFC ಬ್ಯಾಂಕ್ ಅಕಂಟ್​ಗೆ RTGS ಮಾಡ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Published On - 12:38 pm, Wed, 23 September 20