ಬೆಂಗಳೂರು, ನ.20: 2021-22 ರಲ್ಲಿ ಕೆಪಿಟಿಸಿಎಲ್ (KPTCL) 1500 ಸಹಾಯಕ ಇಂಜಿನಿಯರ್ ನೇಮಕಾತಿ (Assistant Engineer Recruitment) ಪರೀಕ್ಷೆಯಲ್ಲಿ ಆಯ್ಕೆಯಾದರೂ ನೇಮಕಾರಿ ಪ್ರಕ್ರಿಯೆ ನಡೆದಿಲ್ಲ. ನೇಮಕಾತಿ ವಿಳಂಬದಿಂದಾಗಿ ಖಿನ್ನತೆಗೆ ಒಳಗಾದ ಹರ್ಷವರ್ಧನ್, ಉಮಾಪತಿ ಎಂಬ ಇಬ್ಬರು ಆಕಾಂಕ್ಷಿಗಳು ಸಾವನ್ನಪ್ಪಿದ್ದು, ಇದರಿಂದ ಕೆರಳಿದ ಪರೀಕ್ಷೆ ಬರೆದ ಯುವಕ, ಯುವತಿಯರು ಇಂದು ಕೆಪಿಟಿಸಿಎಲ್ ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಅಲ್ಲದೆ, ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದರು.
ಆನ್ಲೈನ್ ಅಪ್ಲಿಕೇಶನ್ ಸಂದರ್ಭದಲ್ಲಿ ಅಭ್ಯರ್ಥಿಗಳ ಫೋಟೋ ಸಿಗ್ನೇಚರ್ ಟೆಕ್ನಿಕಲ್ ಸಮಸ್ಯೆ ಇತ್ತು. ಹೀಗಾಗಿ ನೇಮಕಾತಿ ಪ್ರಕ್ರಿಯೆ ಕೋರ್ಟ್ನಲ್ಲಿ ಇತ್ತು. ಈಗಾಗಲೇ ಟೆಕ್ನಿಕಲ್ ಸಮಸ್ಯೆಗಳನ್ನ ಸರಿಪಡಿಸಿ ಡಿಸೆಂಬರ್ ಅಂತ್ಯದೊಳಗಡೆ ಲಿಸ್ಟ್ ಬಿಡುವಂತೆ ಕೋರ್ಟ್ ಆದೇಶ ಮಾಡಿದೆ.
ಇದನ್ನೂ ಓದಿ: ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ: ಪ್ರಕರಣ ಕೈ ಸೇರುತ್ತಿದ್ದಂತೆ ಮೂವರನ್ನು ವಶಕ್ಕೆ ಪಡೆದ ಸಿಐಡಿ
ಕೋರ್ಟ್ ಆದೇಶ ಇದ್ದರೂ ಯಾವುದೇ ಪ್ರಕ್ರಿಯೆಗೆ ಕೆಪಿಟಿಸಿಎಲ್ ಮುಂದಾಗುತ್ತಿಲ್ಲ ಅಂತ ಕೆಪಿಟಿಸಿಎಲ್ ವಿರುದ್ಧ ನೊಂದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಕೆಪಿಟಿಸಿಎಲ್ ಎಂಡಿ ಪಂಕಜಕುಮಾರ್ ಪಾಂಡೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಡಿಸಿಂಬರ್ ಅಂತ್ಯದೊಳಗೆ ಭರ್ತಿ ಪ್ರಕ್ರಿಯೆ ಮುಗಿಸುವುದಾಗಿ ಭರವಸೆ ನೀಡಿದರು.
ಸದ್ಯ, ಪ್ರತಿಭಟನಾ ನಿರತ ಅಭ್ಯರ್ಥಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ 2024ರ ಫೆಬ್ರವರಿ 15 ರಂದು ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದು, ಒಂದು ವೇಳೆ ಹೇಳಿದ ಹಾಗೆ ಕೆಪಿಟಿಸಿಎಲ್ ಮಾಡದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Mon, 20 November 23