ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ: ಪ್ರಕರಣ ಕೈ ಸೇರುತ್ತಿದ್ದಂತೆ ಮೂವರನ್ನು ವಶಕ್ಕೆ ಪಡೆದ ಸಿಐಡಿ

ಸಿಐಡಿ ಡಿವೈಎಸ್ಪಿ ತನ್ವೀರ್ ಹಾಗೂ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಮತ್ತೋರ್ವ ಅಭ್ಯರ್ಥಿ ಸೇರಿ ಮೂವರನ್ನು ಸಿಐಡಿ ಟೀಂ ವಶಕ್ಕೆ ಪಡೆದಿದೆ. ಪ್ರಮುಖ ಆರೋಪಿ R​.D.ಪಾಟೀಲ್​ ಸೂಚನೆಯಂತೆ ಅಭ್ಯರ್ಥಿಗಳಿಗೆ ಬ್ಲೂಟೂತ್ ಸಪ್ಲೈ ಮಾಡಿರುವ ಆರೋಪದಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ: ಪ್ರಕರಣ ಕೈ ಸೇರುತ್ತಿದ್ದಂತೆ ಮೂವರನ್ನು ವಶಕ್ಕೆ ಪಡೆದ ಸಿಐಡಿ
ಪ್ರಾತಿನಿಧಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Nov 15, 2023 | 11:16 AM

ಕಲಬುರಗಿ, ನ.15: ಕೆಇಎ (KEA) ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಕರಣ ಪೊಲೀಸರಿಂದ ಹಸ್ತಾಂತರವಾಗುತ್ತಿದ್ದಂತೆಯೇ ಸಿಐಡಿ (CID) ಬೇಟೆ ಶುರು ಮಾಡಿದೆ. ಸಿಐಡಿ ಡಿವೈಎಸ್ಪಿ ತನ್ವೀರ್ ಹಾಗೂ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಮತ್ತೋರ್ವ ಅಭ್ಯರ್ಥಿ ಸೇರಿ ಮೂವರನ್ನು ಸಿಐಡಿ ಟೀಂ ವಶಕ್ಕೆ ಪಡೆದಿದೆ. ಪ್ರಮುಖ ಆರೋಪಿ R​.D.ಪಾಟೀಲ್​ ಸೂಚನೆಯಂತೆ ಅಭ್ಯರ್ಥಿಗಳಿಗೆ ಬ್ಲೂಟೂತ್ ಸಪ್ಲೈ ಮಾಡಿರುವ ಆರೋಪದಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇನ್ನು ಕೆಇಎ ಅಕ್ರಮ ಕೆಸ್ ಸಿಐಡಿಗೆ ಹಸ್ತಾಂತರ ಆಗಿದ್ದರಿಂದ ಅಧಿಕಾರಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕಲಬುರಗಿ JMFC ಕೋರ್ಟ್‌ಗೆ ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದು ಆರ್‌ಡಿ ಪಾಟೀಲ್ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯ ಹಿನ್ನಲೆ ಆರ್‌ಡಿ ಪಾಟೀಲ್‌ ಸೇರಿದಂತೆ ಹಲವರನ್ನ ಇಂದು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ. ಕಿಂಗ್‌ಪಿನ್ ಆರ್‌ಡಿ ಪಾಟೀಲ್‌‌ನನ್ನ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ರಾಜ್ಯವಲ್ಲದೇ ಇಡೀ ದೇಶದಲ್ಲಿ ಭಾರಿ ಸಂಚಲ ಸೃಷ್ಟಿಸಿದ್ದ 545 ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಕರಣ ಕೈಗೆತ್ತಿಕೊಂಡು ಯಶಸ್ಸಿಯಾಗಿ ತನಿಖೆ ನಡೆಸಿರುವ ಸಿಐಡಿಗೆ ರಾಜ್ಯ ಸರ್ಕಾರ, FDA ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಪರೀಕ್ಷೆ ಅಕ್ರಮದ ಕೇಸ್ ನ್ನ ವಹಿಸಿದೆ. KEA ನಡೆಸಿರುವ FDA ಪರೀಕ್ಷೆ ಅಕ್ರಮದ ಕೇಸ್ ಕೈಗೆತ್ತಿಕೊಂಡಿತುವ ಸಿಐಡಿ ತನಿಖಾ ಟೀಂ ಕಲಬುರಗಿಗೆ ಆಗಮಿಸಿ ತನಿಖೆ ಆರಂಭಮಾಡಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ದಾಖಾಲಾಗಿರುವ ಪರೀಕ್ಷೆ ಅಕ್ರಮದ ಕೇಸ್​ಗಳನ್ನು ಪೊಲೀಸ್ ತನಿಕಾಧಿಕಾರಿಗಳು ಪ್ರಕರಣ ಫೈಲ್‌ ಗಳನ್ನು ಸಿಐಡಿ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ‌. ಕಲಬುರಗಿ ಜಿಲ್ಲೆಯಲ್ಲಿ ಮೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ದಾಖಲಾದ ಐದು ಪ್ರಕರಣ ಸೇರಿ ಒಟ್ಟು ಎಂಟು ಪ್ರಕರಣಗಳ ದಾಖಲೆಗಳು ಸಿಐಡಿ ಕೈಗೆ ತಲುಪಿದ್ದು, ಸಿಐಡಿ ತನಿಕಾಧಿಕಾರಿಗಳು ಕೇಸ್ ಸ್ಟಡಿ ಶುರು ಮಾಡಿದ್ದಾರೆ. ಖುದ್ದು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ತನಿಕಾಧಿಕಾರಿ ಡಿವೈಎಸ್ ಪಿ ತನ್ವೀರ್ ಒಳಗೊಂಡ ಸಿಐಡಿ ತನಿಖಾ ತಂಡ FDA ಪರೀಕ್ಷೆ ಅಕ್ರಮದ ಜಾಡು ಹಿಡಿದು ಭೇದಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ ಆರ್​ಡಿ ಪಾಟೀಲ್ ಅಕ್ರಮ; ಕೆಇಎ ಪರೀಕ್ಷೆಯ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ?

FDA ಪರೀಕ್ಷೆ ಅಕ್ರಮವನ್ನ ಯಶಸ್ವಿಯಾಗಿ ಮಾಡಲು ಕಿಂಗ್ ಪಿನ್ ಆರ್.ಡಿ. ಪಾಟೀಲ್ ಪರ್ಫೆಕ್ಟ್ ಪ್ಲ್ಯಾನ್ ರೂಪಿಸಿದ್ದ. ಪ್ರತಿಯೊಬ್ಬ ಅಭ್ಯರ್ಥಿಯಿಂದ 20-25 ಲಕ್ಷಕ್ಕೆ ಡೀಲ್ ಕುದುರಿಸಿ ಆರ್.ಡಿ. ಪಾಟೀಲ್ ಪರೀಕ್ಷೆ ಅಕ್ರಮ ಎಸಗಿದ್ದಾನೆ. ಕಿಲಾಡಿ ಆರ್ ಡಿ ಪಾಟೀಲ್ ತಮ್ಮ ಆಪ್ತರ ಮೂಲಕ ಪರೀಕ್ಷೆ ಅಕ್ರಮದ ಡೀಲ್ ಮಾಡುತ್ತಿದ್ದ. ಆರ್ ಡಿ ಪಾಟೀಲ್ ಆಪ್ತರಾದ ಶಶಿಕುಮಾರ್ ಮತ್ತಿತರರು ಅಭ್ಯರ್ಥಿಗಳನ್ನ ಹುಡುಕಿ ಡೀಲ್ ಫಿಕ್ಸ್ ಮಾಡಿ ಲಿಸ್ಟ್ ಆರ್ ಡಿ ಪಾಟೀಲ್ ಗೆ ನೀಡುತ್ತಿದ್ದ. ಅಭ್ಯರ್ಥಿಗಳ ಲಿಸ್ಟ್ ಆಧರಿಸಿ ಆರ್‌ಡಿ ಪಾಟೀಲ್ ಮತ್ತೋರ್ವ ಆಪ್ತ ಸಾಗರ ಎಂಬಾತ ಅಭ್ಯರ್ಥಿಗಳಿಗೆ ಮೈಕ್ರೋ ಬ್ಲೂಟೂತ್, ಡಿವೈಸ್ ಮತ್ತು ಹೊಸ ಮೊಬೈಲ್ ನೀಡುತ್ತಿದ್ದ. ಓರ್ವ ಪರೀಕ್ಷಾ ಅಭ್ಯರ್ಥಿಗೆ ಓರ್ವನನ್ನ ಉತ್ತರ ಹೇಳಲು ಹತ್ತಿಪ್ಪತ್ತು ಸಾವಿರ ರೂಪಾಯಿ ಕೊಟ್ಟು ಡೀಲ್ ಮಾಡ್ತಿದ್ದ. ಇನ್ನು ಅಕ್ತಮದ ಡೀಲ್ ಹಣವನ್ನ ಆರ್ ಡಿ ಪಾಟೀಲ್ ಅಳಿಯ ಸಿದ್ದರಾಮ ಕಲೆಕ್ಟ್ ಮಾಡುತ್ತಿದ್ದ ಎನ್ನಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:52 am, Wed, 15 November 23