ಮುನಿಸಿಕೊಂಡಿರುವ ಎಲ್ಲ ನಾಯಕರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿದೆ: ಆರ್ ಅಶೋಕ, ನಿಯೋಜಿತ ವಿರೋಧ ಪಕ್ಷ ನಾಯಕ

ತಾವು ಕೆಲವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದು, ಅವರನ್ನು ಯಾರ ಮುಖಾಂತರ ಸಂಪರ್ಕಿಸಿದರೆ ಉತ್ತಮ ಅನ್ನೋದರ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ ಅಶೋಕ ಪಕ್ಷದ ನಾಯಕರಲ್ಲಿ ಏನೇ ಅಸಮಾಧಾನಗಳಿದ್ದರೂ ಎಲ್ಲರ ಗುರಿ ಒಂದೇ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಆ ಸ್ಥಾನದಲ್ಲಿ ಕೂರಿಸುವುದು ಎಂದರು.

ಮುನಿಸಿಕೊಂಡಿರುವ ಎಲ್ಲ ನಾಯಕರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿದೆ: ಆರ್ ಅಶೋಕ, ನಿಯೋಜಿತ ವಿರೋಧ ಪಕ್ಷ ನಾಯಕ
|

Updated on: Nov 20, 2023 | 4:07 PM

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಕೆಲ ಬಿಜೆಪಿ ನಾಯಕರಲ್ಲಿ ಹುಟ್ಟಿಕೊಂಡಿರುವ ಅಸಮಾಧಾನವನ್ನು ಅದಷ್ಟು ಬೇಗ ದೂರ ಮಾಡುವುದಾಗಿ ನಿಯೋಜಿತ ವಿರೋಧ ಪಕ್ಷದ ನಾಯಕ ಅರ್ ಅಶೋಕ ಹೇಳಿದರು (R Ashoka). ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಹಿರಿಯ ನಾಯಕರಾದ ವಿ ಸೋಮಣ್ಣ (V Somanna), ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಡಿವಿ ಸದಾನಂದ ಗೌಡ (DV Sadananda Gowda), ರಮೇಶ್ ಜಾರಕಿಹೊಳಿ (Ramesh Jarkiholi) ಮೊದಲಾದರವರ ಹೆಸರು ಉಲ್ಲೇಖಿಸದೆ ಅವರನ್ನು ಸಮಾಧಾನ ಪಡಿಸುವ ಕಾರ್ಯ ಜಾರಿಯಲ್ಲಿದೆ ಅಂತ ಹೇಳಿದರು. ಅಸಮಾಧಾನಗೊಂಡಿರುವರಲ್ಲಿ ಯಾರೊಬ್ಬರೂ ಪಕ್ಷದ ವಿರುದ್ಧ ಮಾತಾಡಿಲ್ಲ, ಅವರಿಗೆ ಅಸಮಾಧಾನಗಳಿರೋದು ಬೇರೆ ವಿಚಾರಗಳಲ್ಲಿ, ಕೆಲ ನಾಯಕರೊಂದಿಗೆ ಅಧ್ಯಕ್ಷರು ಮಾತಾಡುತ್ತಿದ್ದಾರೆ ಮತ್ತು ತಾವು ಕೆಲವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದು, ಅವರನ್ನು ಯಾರ ಮುಖಾಂತರ ಸಂಪರ್ಕಿಸಿದರೆ ಉತ್ತಮ ಅನ್ನೋದರ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದರು. ಪಕ್ಷದ ನಾಯಕರಲ್ಲಿ ಏನೇ ಅಸಮಾಧಾನಗಳಿದ್ದರೂ ಎಲ್ಲರ ಗುರಿ ಒಂದೇ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಆ ಸ್ಥಾನದಲ್ಲಿ ಕೂರಿಸುವುದು ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
ವಿನಯ್ ಮೇಲೆ ಸಂಗೀತಾ-ಕಾರ್ತಿಕ್ ‘ದಾಳಿ’: ಮುಂದೆ ಕಾದಿದೆ ಎಂದ ‘ಆನೆ’
ವಿನಯ್ ಮೇಲೆ ಸಂಗೀತಾ-ಕಾರ್ತಿಕ್ ‘ದಾಳಿ’: ಮುಂದೆ ಕಾದಿದೆ ಎಂದ ‘ಆನೆ’
ಸಿದ್ದರಾಮಯ್ಯ ಜೊತೆ ನಾವಿದ್ದೇವೆ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?
ಸಿದ್ದರಾಮಯ್ಯ ಜೊತೆ ನಾವಿದ್ದೇವೆ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?
ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿ ಜತೆ ಕುಣಿದ ಬಿ ಶ್ರೀರಾಮುಲು
ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿ ಜತೆ ಕುಣಿದ ಬಿ ಶ್ರೀರಾಮುಲು
ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ಯಕ್ರಿಯೆ
ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ಯಕ್ರಿಯೆ