Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ ಅಹ್ಮದ್ ಆಡಿದ ಮಾತನ್ನು ನಾನು ಒಪ್ಪಲ್ಲ, ಆ ಸ್ಥಾನ ಅತ್ಯಂತ ಗೌರವಯುತವಾದದ್ದು: ಲಕ್ಷ್ಮಣ ಸವದಿ

ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ ಅಹ್ಮದ್ ಆಡಿದ ಮಾತನ್ನು ನಾನು ಒಪ್ಪಲ್ಲ, ಆ ಸ್ಥಾನ ಅತ್ಯಂತ ಗೌರವಯುತವಾದದ್ದು: ಲಕ್ಷ್ಮಣ ಸವದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 20, 2023 | 1:49 PM

ಸ್ಪೀಕರ್ ಸ್ಥಾನ ಯಾವುದೇ ಸಮುದಾಯಕ್ಕೆ ಸೀಮಿತವಾದುದಲ್ಲ, ಅದರಲ್ಲಿ ಕೂತವರ ಬಗ್ಗೆ ಸದಸ್ಯರಲ್ಲಿ ಹಿರಿಯ-ಕಿರಿಯ ಎಂಬ ತಾರತಮ್ಯ ಇರೋದಿಲ್ಲ, ಎಲ್ಲರೂ ಸ್ಥಾನಕ್ಕೆ ಗೌರವ ಸಲ್ಲಿಸುತ್ತಾರೆ ಎಂದು ಕಾಂಗ್ರೆಸ್ ಶಾಸಕ ಹೇಳಿದರು. ಜಮೀರ್ ಹೇಳಿಕೆಯನ್ನು ಖುದ್ದು ಸ್ಪೀಕರ್ ಖಾದರ್ ಅವರೇ ಖಂಡಿಸಿದ್ದಾರೆ.

ಬಾಗಲಕೋಟೆ: ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan); ಸ್ಪೀಕರ್ ಯುಟಿ ಖಾದರ್ (Assembly Speaker UT Khader) ಅವರಿಗೆ ವಿರೋಧ ಪಕ್ಷದ ನಾಯಕರೆಲ್ಲ ನಮಸ್ಕರಿಸಬೇಕು ಅಂತ ಹೇಳಿದ್ದನ್ನು ಈಗ ಅವರ ಪಕ್ಷದವರೇ ಖಂಡಿಸುತ್ತಿದ್ದಾರೆ. ಇಂದು ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi), ಜಮೀರ್ ಮಾತಿನ ಭರದಲ್ಲಿ ಹಾಗೆ ಹೇಳಿರಬಹುದು, ಆದರೆ ಅವರಾಡಿದ ಮಾತನ್ನು ತಾನು ಒಪ್ಪಲ್ಲ ಎಂದು ಹೇಳಿದರು. ಸ್ಪೀಕರ್ ಹುದ್ದೆ ಬಹಳ ಘನತೆಯುಳ್ಳದ್ದು ಮತ್ತು ಗೌರವಾನ್ವಿತವಾದದ್ದು, ಪ್ರಜಾಪ್ರಭುತ್ವ ವ್ವವಸ್ಥೆಯಲ್ಲಿ ಆ ಹುದ್ದೆಯಲ್ಲಿ ಯಾರೇ ಇರಲಿ, ಮುಖ್ಯಮಂತ್ರಿಗಳೂ ಸೇರಿದಂತೆ ಸದನದ ಎಲ್ಲ ಸದಸ್ಯರು ಗೌರವಿಸಲೇಬೇಕು ಎಂದು ಸವದಿ ಹೇಳಿದರು. ಆ ಸ್ಥಾನ ಯಾವುದೇ ಸಮುದಾಯಕ್ಕೆ ಸೀಮಿತವಾದುದಲ್ಲ, ಅದರಲ್ಲಿ ಕೂತವರ ಬಗ್ಗೆ ಸದಸ್ಯರಲ್ಲಿ ಹಿರಿಯ-ಕಿರಿಯ ಎಂಬ ತಾರತಮ್ಯ ಇರೋದಿಲ್ಲ, ಎಲ್ಲರೂ ಸ್ಥಾನಕ್ಕೆ ಗೌರವ ಸಲ್ಲಿಸುತ್ತಾರೆ ಎಂದು ಕಾಂಗ್ರೆಸ್ ಶಾಸಕ ಹೇಳಿದರು. ಜಮೀರ್ ಹೇಳಿಕೆಯನ್ನು ಖುದ್ದು ಸ್ಪೀಕರ್ ಖಾದರ್ ಅವರೇ ಖಂಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ