ನಾಡಿನ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪರನ್ನು ಭೇಟಿಯಾಗಿ ಗೌರವ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಕಳೆದ ವಾರ ಹೆಚ್ ಡಿ ದೇವೇಗೌಡ, ಎಸ್ ಎಂ ಕೃಷ್ಣ, ಬಸವರಾಜ ಬೊಮ್ಮಾಯಿ ಮೊದಲಾದವರನ್ನು ಭೇಟಿಯಾಗಿದ್ದ ವಿಜಯೇಂದ್ರ ಇಂದು ನಾಡಿನ ಖ್ಯಾತ, ಪದ್ಮಭೂಷಣ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ 92-ವರ್ಷ ವಯಸ್ಸಿನ ಸಾಹಿತಿ ಎಸ್ ಎಲ್ ಬೈರಪ್ಪ (SL Bhyrappa) ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿದ ಬಳಿಕ ಅವರ ಪಕ್ಕ ಕೂತು ಯೋಗಕ್ಷೇಮ ವಿಚಾರಿಸಿದರು.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹಿರಿಯ ನಾಯಕರನ್ನು, ಗಣ್ಯರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆಯುವ ಕೆಲಸ ಮುಂದುವರಿಸಿದ್ದಾರೆ. ಕಳೆದ ವಾರ ಹೆಚ್ ಡಿ ದೇವೇಗೌಡ, ಎಸ್ ಎಂ ಕೃಷ್ಣ (SM Krishna), ಬಸವರಾಜ ಬೊಮ್ಮಾಯಿ ಮೊದಲಾದವರನ್ನು ಭೇಟಿಯಾಗಿದ್ದ ವಿಜಯೇಂದ್ರ ಇಂದು ನಾಡಿನ ಖ್ಯಾತ, ಪದ್ಮಭೂಷಣ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ 92-ವರ್ಷ ವಯಸ್ಸಿನ ಸಾಹಿತಿ ಎಸ್ ಎಲ್ ಬೈರಪ್ಪ (SL Bhyrappa) ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿದ ಬಳಿಕ ಅವರ ಪಕ್ಕ ಕೂತು ಯೋಗಕ್ಷೇಮ ವಿಚಾರಿಸಿದರು. ಪಂಪ ಮತ್ತು ನಾಡೋಜ ಪ್ರಶಸ್ತಿಗಳಿಗೂ ಪಾತ್ರರಾಗಿರುವ ಭೈರಪ್ಪರ ಎಡಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಪ್ರಾಯಶಃ ವಿಜಯೇಂದ್ರ ಹಾಗೂ ಸಾಹಿತಿ ಇಬ್ಬರಿಗೂ ಪರಿಚಿತರು ಅನಿಸುತ್ತೆ. ಇಂದು ಬೆಳಗ್ಗೆಯೇ ಅಧ್ಯಕ್ಷರು ತಮ್ಮನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿ, ತಾವು ಊರಲ್ಲಿರುವ ಬಗ್ಗೆ ವಿಚಾರಿಸಿ ಎಂದಿದ್ದರು, ತಾವು ಲಭ್ಯರಿರೋದು ಖಚಿತವಾದ ಬಳಿಕ ಭೇಟಿಯಾಲು ಬಂದಿದ್ದಾರೆ ಅಂತ ಹೇಳಿದಾಗ ಭೈರಪ್ಪ ಬಹಳ ಸಂತೋಷ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ