ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸೋತಿಲ್ಲವೇ? ಪದ್ಮನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿದ್ದೇನೆ: ಆರ್ ಅಶೋಕ

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸೋತಿಲ್ಲವೇ? ಪದ್ಮನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿದ್ದೇನೆ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 18, 2023 | 11:25 AM

ಪದ್ಮನಾಭನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿರುವುನೆಂದ ಆಶೋಕ ಕಾಂಗ್ರೆಸ್ ನಾಯಕರ ಜೊತೆ ತಮ್ಮನ್ನು ಹೋಲಿಸುವುದು ಬೇಡ, ಅವರ ಮತ್ತ ತಮ್ಮ ಸಿದ್ಧಾಂತಗಳು ಬೇರೆ, ತಮ್ಮದು ದೇಶ ಮೊದಲೆನ್ನುವ ಸಿದ್ಧಾಂತವಾದರೆ ಅವರಿಗೆ ಸೋನಿಯ ಗಾಂಧಿ ಮೊದಲೆನ್ನುವ ಸಿದ್ಧಾಂತ, ತಾವು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದಾಗಿ ಹೇಳಿದರು.

ಬೆಂಗಳೂರು: ಹದಿನಾರನೇ ವಿಧಾನ ಸಭೆ ರಚನೆಯಾಗಿ ಆರು ತಿಂಗಳು ನಂತರ ಬಿಜೆಪಿ ಹೈಕಮಾಂಡ್, ಹಿರಿಯ ನಾಯಕ ಅರ್ ಅಶೋಕ (R Ashoka) ಅವರನ್ನು ವಿರೋಧ ಪಕ್ಷದ ನಾಯಕನಾಗಿ (Leader of Opposition) ಅಯ್ಕೆ ಮಾಡಿದೆ. ಕನಕಪುರದಲ್ಲಿ ಚುನಾವಣೆ ಸೋತಿರುವವರನ್ನು ವಿಪಕ್ಷದ ನಾಯಕ ಮಾಡಲಾಗಿದೆ ಅಂತೆ ಕಾಂಗ್ರೆಸ್ ನಾಯಕರು ಮಾಡಿರುವ ಕಾಮೆಂಟ್ ಅನ್ನು ಮಾಧ್ಯಮದವರು ಅಶೋಕ ಅವರಿಗೆ ತಿಳಿಸಿದಾಗ, ಡಿಕೆ ಶಿವಕುಮಾರ್ (DK Shivakumar) ಅವರು ಕನಕಪುರದಲ್ಲಿ ಸೋತಿಲ್ಲವೇ? 2018ರಲ್ಲಿ ಸಿದ್ದರಾಮಯ್ಯ (Siddaramaiah) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲಿಲ್ಲವೇ? ಮುಖ್ಯಮಂತ್ರಿ  ಚುನಾವಣೆಗಳಲ್ಲಿ ಮೂರ್ನಾಲ್ಕು ಬಾರಿ ಸೋತಿದ್ದಾರೆ. ಆದರೆ ತಾನು ಬಿಜೆಪಿ ಪ್ರಬಲವಾಗಿರದ ಕನಕಪುರ ಕ್ಷೇತ್ರದಲ್ಲಿ ಕೇವಲ ವರಿಷ್ಠರ ಒತ್ತಾಯದ ಮೇರೆಗೆ ಸ್ಪರ್ಧಿಸಿ ಸೋತಿರುವುದಾಗಿ ಹೇಳಿದರು. ಪದ್ಮನಾಭನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿರುವುನೆಂದ ಆಶೋಕ ಕಾಂಗ್ರೆಸ್ ನಾಯಕರ ಜೊತೆ ತಮ್ಮನ್ನು ಹೋಲಿಸುವುದು ಬೇಡ, ಅವರ ಮತ್ತ ತಮ್ಮ ಸಿದ್ಧಾಂತಗಳು ಬೇರೆ, ತಮ್ಮದು ದೇಶ ಮೊದಲೆನ್ನುವ ಸಿದ್ಧಾಂತವಾದರೆ ಅವರಿಗೆ ಸೋನಿಯ ಗಾಂಧಿ ಮೊದಲೆನ್ನುವ ಸಿದ್ಧಾಂತ, ತಾವು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ