ಮಂಗಳೂರು: ಕುಡಿದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಮಾರಾಮಾರಿ, ಓರ್ವ ಗಂಭೀರ

ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು ಬಾರ್​ನ‌ ಕೌಂಟರ್ ಬಳಿಯೇ ರಕ್ತ ಚಿಮ್ಮುವಂತೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಶೋಕ್ ಪೂಜಾರಿ ಎಂಬಾತನ ಮೇಲೆ ಬಿಯರ್ ಮತ್ತು ಸೋಡಾ ಬಾಟಲಿಯಿಂದ ಹಲ್ಲೆ ನಡೆದಿದೆ. ಅಶೋಕ್ ಪೂಜಾರಿಯ ಪರಿಚಯಸ್ಥರಾದ ರೀತು ಮತ್ತು ವಿಶ್ವ ಎಂಬುವವರೇ ಹಲ್ಲೆ ನಡೆಸಿದ್ದಾರೆ.

ಮಂಗಳೂರು: ಕುಡಿದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಮಾರಾಮಾರಿ, ಓರ್ವ ಗಂಭೀರ
| Edited By: Ayesha Banu

Updated on: Nov 18, 2023 | 12:26 PM

ಮಂಗಳೂರು, ನ.18: ಕುಡಿತದ ಮತ್ತಿನಲ್ಲಿ ಬಾರ್‌ನಲ್ಲಿ ಯುವಕರ ಮಧ್ಯೆ ಮಾರಾಮಾರಿಯಾಗಿದೆ. ಮಂಗಳೂರಿನ ಕೊಟ್ಟಾರ ಬಳಿಯ ಕೋಸ್ಟಲ್ ಬಾರ್ ನಲ್ಲಿ ಬಿಯರ್ ಬಾಟಲಿ ಹಾಗೂ ಸೋಡಾ ಬಾಟಲಿಗಳಿಂದ ಯುವಕರು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಕೆಲ ಯುವಕರಿಗೆ ಗಂಭೀರ ಗಾಯಗಳಾಗಿದ್ದು ಹಲ್ಲೆಯ ದೃಶ್ಯಗಳು ಬಾರ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು ಬಾರ್​ನ‌ ಕೌಂಟರ್ ಬಳಿಯೇ ರಕ್ತ ಚಿಮ್ಮುವಂತೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಶೋಕ್ ಪೂಜಾರಿ ಎಂಬಾತನ ಮೇಲೆ ಬಿಯರ್ ಮತ್ತು ಸೋಡಾ ಬಾಟಲಿಯಿಂದ ಹಲ್ಲೆ ನಡೆದಿದೆ. ಅಶೋಕ್ ಪೂಜಾರಿಯ ಪರಿಚಯಸ್ಥರಾದ ರೀತು ಮತ್ತು ವಿಶ್ವ ಎಂಬುವವರೇ ಹಲ್ಲೆ ನಡೆಸಿದ್ದಾರೆ. ಅನೂಪ್ ಮತ್ತು ರೀತು ಮಧ್ಯೆ ಮಾತಿನ ಚಕಮಕಿ ನಡೆದಾಗ ಅಶೋಕ್ ಮಧ್ಯ ಪ್ರವೇಶಿಸಿದ್ದ. ಈ ವೇಳೆ ರೀತು ಕೌಂಟರ್​ನಲ್ಲಿದ್ದ ಬಿಯರ್ ಬಾಟಲಿ ತೆಗೆದು ಅಶೋಕ್ ತಲೆಗೆ ಹೊಡೆದಿದ್ದಾನೆ. ಇದೇ ವೇಳೆ ಕೊಟ್ಟಾರ ಚೌಕಿಯ ವಿಶ್ವ ಎಂಬುವವನೂ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ಬಿಯರ್ ಬಾಟಲಿ ಮತ್ತು ಸೋಡಾ ಬಾಟಲಿ ಚೂರಿನಿಂದ ತಲೆ, ಮುಖದ ಭಾಗಗಳಿಗೆ ತಿವಿದು ಕೊಲೆಗೆ ಯತ್ನಿಸಲಾಗಿದೆ. ತಲೆಗೆ, ಬೆನ್ನಿಗೆ ಮತ್ತು ಮುಖಕ್ಕೆ ಬಲವಾಗಿ ಹೊಡೆದು ರಕ್ತ ಚಿಮ್ಮುವಂತೆ ಹಲ್ಲೆ ಮಾಡಿದ್ದಾರೆ. ತಲೆ, ಮುಖ, ಬೆನ್ನಿನ ಭಾಗಗಳಲ್ಲಿ ರಕ್ತ ಬರುತ್ತಿದ್ದು ಮೂಗಿನ ಮೂಳೆ ಮುರಿದಿದೆ. ತೀವ್ರ ರಕ್ತಸ್ರಾವ ಹಿನ್ನೆಲೆ ಆಶೋಕ್​ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ 

Follow us
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ