ಬಿಆರ್ ಪಾಟೀಲ್ ಹೇಳಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು; ಮಾಧ್ಯಮದವರ ಕೈಗೆ ಸದನದ ಕಡತದ ಪ್ರತಿ ನೀಡಿದ ಸಚಿವರು
ಸಚಿವ ಕೃಷ್ಣಬೈರೇಗೌಡ ವಿರುದ್ಧ ಸಿಡಿದೆದ್ದಿರುವ ಸ್ವಪಕ್ಷ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್, ನ್ಯೂನ್ಯತೆ ಬಗ್ಗೆ ಸದನದಲ್ಲಿ ಒಪ್ಪಿಕೊಂಡಿದ್ದರ ಬಗ್ಗೆ ಮುಖ್ಯಮಂತ್ರಿ ಅವರಿಗೆ ದಾಖಲೆ ನೀಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಕೃಷ್ಣಬೈರೇಗೌಡ, ಸದನದ ಕಡತದ ಪ್ರತಿಯನ್ನು ಮಾಧ್ಯಮದವರಿಗೆ ನೀಡಿದರು.
ವಿಜಯಪುರ, ನ.29: ಸದನದಲ್ಲಿ ನ್ಯೂನ್ಯತೆ ಒಪ್ಪಿಕೊಂಡು ಬಳಿಕ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಅಂದರೆ ಹೇಗೆ? ಎಂಬ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ (BR Patil) ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೃಷ್ಣಬೈರೇಗೌಡ (Krishna Byre Gowda), ಮುಖ್ಯಮಂತ್ರಿಗೆ ದಾಖಲೆ ಬೇಕಿದ್ದರೆ ಕೊಡಲಿ, ಸದನಲ್ಲಿ ಮಾತನಾಡಿದ್ದರ ದಾಖಲೆ ಇವೆ ತೆಗೆದುಕೊಳ್ಳಿ ಎಂದು ಮಾದ್ಯಮದವರಿಗೆ ಸದನದ ಕಡತದ ಪ್ರತಿ ನೀಡಿದರು.
ಸಚಿವ ಕೃಷ್ಣಬೈರೇಗೌಡ ತಮ್ಮ ಮೇಲೆ ಆರೋಪ ಮಾಡಿದ್ದಾರೆಂದು ಪತ್ರದಲ್ಲಿ ಬಿಆರ್ ಪಾಟೀಲ್ ಅವರು ನಮೂದು ಮಾಡಿದ್ದಾರೆ. ಈ ಕುರಿತು ಸದನಲ್ಲಿ ಮಾತನಾಡಿದ್ದರ ದಾಖಲೆ ನೀಡುವುದಾಗಿ ಕೃಷ್ಣಬೈರೇಗೌಡ ಹೇಳಿದ್ದರು. ನನ್ನ ಬಳಿಯು ದಾಖಲೆ ಇದೆ, ಕೊಡುತ್ತೇನೆ ಎಂದು ಬಿಆರ್ ಪಾಟೀಲ್ ಹೇಳಿದ್ದರು.
ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ವಿರುದ್ದ ಶಾಸಕ ಬಿಆರ್ ಪಾಟೀಲ್ ಮತ್ತೆ ಕಿಡಿ; ಆರದ ಮುನಿಸು
ವಿಜಯಪುರ ಜಿಪಂ ಸಭಾಭವನದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿದ ಕೃಷ್ಣಬೈರೇಗೌಡ, ಅವರು ಮುಖ್ಯಮಂತ್ರಿಗೆ ದಾಖಲೆ ಬೇಕಿದ್ದರೆ ಕೊಡಲಿ. ಸದನಲ್ಲಿ ಮಾತನಾಡಿದ್ದರ ದಾಖಲೆ ಇವೆ ತೆಗೆದುಕೊಳ್ಳಿ ಎಂದು ಮಾದ್ಯಮದವರ ಕೈಗೆ ಸದನದ ಕಡತದ ಪ್ರತಿ ನೀಡಿ ತೆರಳಿದರು.
ಸಿದ್ದರಾಮಯ್ಯ ಎದುರು ಕೆಲ ದಾಖಲೆ ನೀಡುತ್ತೇನೆ. ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ. ನನ್ನಲ್ಲಿ ಯಾವುದೇ ಅಂತರಂಗ, ಬಹಿರಂಗವಿಲ್ಲ. ಪ್ರಿಯಾಂಕ್ ಖರ್ಗೆ ಸಚಿವರಾದ ಮೇಲೆ ನನ್ನ ಕ್ಷೇತ್ರಕ್ಕೆ ಹತ್ತು ಯಾತ್ರಿ ನಿವಾಸ ನೀಡಿದ್ದರು. ಅದರಲ್ಲಿ ಕೇವಲ ಒಂದು ಪೂರ್ಣಗೊಂಡಿದೆ. ಆ ಬಗ್ಗೆ ಪ್ರಗತಿ ಪರೀಶಿಲನಾ ಸಭೆ ಕೂಡ ನಡೆದಿಲ್ಲ. ಮತ್ತು ಕೆಲವು ಕಡೆ ಕಳೆಪೆ ಕೆಲಸ ಆಗಿದೆ. ಇದನ್ನು ಸ್ವತಃ ಭೈರೇ ಗೌಡರೆ ಒಪ್ಪಿಕೊಂಡು, ಭೂಸೇನಾ ನಿಗಮದಲ್ಲಿ ಕೆಲ ನ್ಯೂನ್ಯತೆ ಇದೆ ಎಂದಿದ್ದರು.
ಇದನ್ನೂ ಓದಿ: ಸಿಎಂಗೆ ಪತ್ರ ಬರೆದಿದ್ದೇನೆ, ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ಕೃಷ್ಣಭೈರೇಗೌಡ ವಿರುದ್ಧ ತೊಡೆ ತಟ್ಟಿದ ಬಿ.ಆರ್.ಪಾಟೀಲ್
ಒಬ್ಬ ಮಂತ್ರಿಯಾಗಿ ತಪ್ಪು ಒಪ್ಪಿದ ಮೇಲೆ ಅದನ್ನು ಸುಧಾರಣೆ ಮಾಡಬೇಕಿತ್ತು. ಇವಾಗ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಅಂದರೆ ಹೇಗೆ? ಸದನದಲ್ಲಿ ಒಂದು ಪರಂಪರೆಯಿದೆ. ಯಾವ ಸಚಿವರು ಗೈರಾಗಿರುತ್ತಾರೋ, ಇದ್ದವರು ಉತ್ತರ ನೀಡುತ್ತಾರೆ ಎಂದು ಅಳಂದ ಪಟ್ಟಣದಲ್ಲಿ ಬಿ.ಆರ್ ಪಾಟೀಲ್ ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ