ಬೆಂಗಳೂರು, (ಸೆಪ್ಟೆಂಬರ್ 28): ಕಾವೇರಿ ನದಿ ನೀರಿಗಾಗಿ ನಾಳೆ(ಸೆಪ್ಟೆಂಬರ್ 29) ಕರ್ನಾಟಕ ಬಂದ್ಗೆ (Karnataka Bandh)ಕರೆ ನೀಡಲಾಗಿದೆ. ಈ ಬಂದ್ಗೆ ಸಂಘ-ಸಂಸ್ಥೆಗಳು ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬಹುತೇಕ ಅಖಂಡ ಕರ್ನಾಟಕ ಸ್ತಬದ್ಧವಾಗಲಿದೆ. ಇದರ ನಡುವೆ ಸಾರ್ವಜನಿಕರ ಸಂಚಾರನಾಡಿ ಕೆಎಸ್ಆರ್ಟಿಸಿ ಹಾಗೂ ಬಿಎಂಪಿಟಿಸಿ ಬಸ್ (KSRTC And bmtc Buses) ಸಂಚಾರಕ್ಕೆ ನಿಗಮಗಳು ತೀರ್ಮಾನಿಸಿವೆ. ಈ ಹಿನ್ನೆಲೆಯಲ್ಲಿ ನೌಕರರಿಗೆ ನಾಳೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ.
ಹೌದು… ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ದೀರ್ಘಾವಧಿ, ವಾರದ ರಜೆ ಹೊರತುಪಡಿಸಿ ನೌಕರರು ಹೊರತುಪಡಿಸಿ ಉಳಿದ ಎಲ್ಲಾ ನೌಕರರು ಕಡ್ಡಾಯವಾಗಿ ನಾಳೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸಾರಿಗೆ ನಿಗಮಗಳು ಮೌಖಿಕ ಸೂಚನೆ ನೀಡಿವೆ.
ಇದನ್ನೂ ಓದಿ: Karnataka Bandh: ನಾಳೆ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿಲ್ಲ? ಇಲ್ಲಿದೆ ವಿವರ
ಸಾರಿಗೆ ನಿಗಮಗಳು ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರರಿಂದ ಸೇವೆ ನೀಡಬೇಕು. ಹೀಗಾಗಿ ಯಾರು ಸಹ ನಾಳಿನ ಬಂದ್ ನಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಕೆಲಕ್ಕೆ ಗೈರು ಆಗಿ ಬಂದ್ ನಲ್ಲಿ ಭಾಗಿಯಾದ್ರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುವುದಾಗಿ ಎಚ್ಚರಿಕೆ ಸಹ ನೀಡಲಾಗಿದೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗದಂತೆ ಬಿಎಂಟಿಸಿ ನಿಗಮ ಮುಂಜಾಗ್ರತಾ ಕ್ರಮಕೈಗೊಂಡಿದೆ. ಬಿಎಂಟಿಸಿ ಎಲ್ಲ ಡಿಪೋಗಳಿಗೂ ಪೊಲೀಸ್ ಭದ್ರತೆ ನೀಡುವಂತೆ ನಿಗಮ ಮನವಿ ಮಾಡಿದೆ. ಅಲ್ಲದೇ ಬಸ್ ನಿಲ್ದಾಣಗಳಲ್ಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಈ ಮೂಲಕ ಬಿಎಂಟಿಸಿ ಬಸ್ ರಸ್ತೆಗಿಳಿದಾಗ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.
ಡಿಪೋ ಮ್ಯಾನೇಜರ್ ಗಳು ಕಡ್ಡಾಯವಾಗಿ ಡಿಪೋದಲ್ಲಿದ್ದು ಬಸ್ ಕಾರ್ಯಚರಣೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ಗಳ ಕಾರ್ಯಚರಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ನಾಳಿನ ಬಂದ್ ವೇಳೆ ರಾಜ್ಯಾದ್ಯಂತ ಕೆಸ್ಆರ್ಟಿಸಿ ಬಸ್ ಸಂಚರಿಸಲಿವೆ. ಇನ್ನು ಬೆಂಗಳೂರಿನಲ್ಲೂ ಸಹ ಬಿಎಂಟಿಸಿ ಬಸ್ ಸಂಚಾರ ಇರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ