ಮುಷ್ಕರ ಮುಂದುವರಿಯಲಿದೆ, ಯಾರೂ ಬಸ್​ ತೆಗೆಯಬೇಡಿ -ಸರ್ಕಾರಕ್ಕೆ ಮತ್ತೆ ಶಾಕ್​ ಕೊಟ್ಟ ಸಾರಿಗೆ ನೌಕರರು

|

Updated on: Dec 13, 2020 | 7:59 PM

ಫ್ರೀಂಡಂ ಪಾರ್ಕ್​ನಲ್ಲಿ ಮಾತನಾಡಿದ KSRTC ಸಂಘದ ರಾಜ್ಯಾಧ್ಯಕ್ಷ ಚಂದ್ರು, ಸಾರಿಗೆ ಸಚಿವರ ಜತೆ ನಡೆಸಿದ ಸಂಧಾನ ವಿಫಲವಾಗಿದೆ. ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಘೋಷಣೆ ಮಾಡುವವರೆಗೂ ಯಾರೂ ಬಸ್​ ತೆಗೆಯಬೇಡಿ ಎಂದಿದ್ದಾರೆ.

ಮುಷ್ಕರ ಮುಂದುವರಿಯಲಿದೆ, ಯಾರೂ ಬಸ್​ ತೆಗೆಯಬೇಡಿ -ಸರ್ಕಾರಕ್ಕೆ ಮತ್ತೆ ಶಾಕ್​ ಕೊಟ್ಟ ಸಾರಿಗೆ ನೌಕರರು
ಚಂದ್ರು
Follow us on

ಬೆಂಗಳೂರು: ಸಂಧಾನ ಮಾತುಕತೆ ಯಶಸ್ವಿಯಾಯಿತು ಎನ್ನುವಾಗಲೇ ಸರ್ಕಾರಕ್ಕೆ ಸಾರಿಗೆ ನೌಕರರು ಶಾಕ್​ ನೀಡಿದ್ದಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೆ  ಮುಷ್ಕರ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.

ಫ್ರೀಂಡಂ ಪಾರ್ಕ್​ನಲ್ಲಿ ಮಾತನಾಡಿದ KSRTC ಸಂಘದ ರಾಜ್ಯಾಧ್ಯಕ್ಷ ಚಂದ್ರು, ಸಾರಿಗೆ ಸಚಿವರ ಜತೆ ನಡೆಸಿದ ಸಂಧಾನ ವಿಫಲವಾಗಿದೆ. ನಮ್ಮ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಘೋಷಣೆ ಮಾಡುವವರೆಗೂ ಯಾರೂ ಬಸ್​ ತೆಗೆಯಬೇಡಿ ಎಂದು ಕೋರಿದ್ದಾರೆ.

ಉಲ್ಟಾ ಹೊಡೆದ ಚಂದ್ರು
ವಿಕಾಸಸೌಧದಲ್ಲಿ ಇಂದು KSRTC ಸಂಘದ ರಾಜ್ಯಾಧ್ಯಕ್ಷ ಚಂದ್ರು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿ ಅನೇಕರು ಸಂಧಾನ ಮಾತುಕತೆ ನಡೆಸಿದ್ದರು. ಮಾತುಕತೆ ಮುಗಿಸಿ ಹೊರ ಬಂದ ನಂತರ ಮಾತನಾಡಿದ್ದ ಚಂದ್ರು, ಸಂಧಾನ ಯಶಸ್ವಿ ಆಗಿದೆ ಎಂದು ಹೇಳಿದ್ದರು.

ಆದರೆ, ಫ್ರೀಂಡಂ ಪಾರ್ಕ್​ ಬಂದ ನಂತರದಲ್ಲಿ ಚಂದ್ರು ಉಲ್ಟಾ ಹೊಡೆದಿದ್ದಾರೆ. ಸರ್ಕಾರದ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕಿದೆ. ಈಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ, ಯಾರೂ ಬಸ್​ ತೆಗೆಯಬಾರದು ಎಂದು ಕೋರಿದ್ದಾರೆ.

 

ಸಾರಿಗೆ ನೌಕರರ ಜೊತೆಗಿನ ಸರ್ಕಾರದ ಸಂಧಾನ ಸಕ್ಸಸ್​: ನಾಳೆಯಿಂದ ಬಸ್​ ರೈಟ್​.. ರೈಟ್​!

 

Published On - 7:45 pm, Sun, 13 December 20