ತುಮಕೂರು: ಚಿಲ್ಲರೆ ಹಣಕ್ಕಾಗಿ ಕೆಎಸ್ಆರ್ಟಿಸಿ ಸಾರಿಗೆ ಬಸ್ ಕಂಡಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು-ಕೊರಟಗೆರೆ ಹೆದ್ದಾರಿಯ ಚಿಕ್ಕಪಾಲನಹಳ್ಳಿ ಬಳಿ ನಡೆದಿದೆ. ನಾಗೇನಹಳ್ಳಿ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಕಂಬಯ್ಯ ಎಂಬ ವ್ಯಕ್ತಿ ಮಾಕಳಿಗೆ ಟಿಕೆಟ್ ಪಡೆಯಲು ಹಣ ನೀಡಿದ್ದಾರೆ.
ಟಿಕೆಟ್ ಹಣದಲ್ಲಿ ಒಂದು ರೂಪಾಯಿ ಚಿಲ್ಲರೆ ಕಡಿಮೆ ಇದ್ದಿದ್ದಕ್ಕೆ ಕಂಡಕ್ಟರ್ ಹಾಗೂ ಕಂಬಯ್ಯ ನಡುವೆ ಪರಸ್ಪರ ವಾಗ್ವಾದ ಶುರುವಾಗಿದೆ. ಸಿಟ್ಟಿಗೆದ್ದ ಕಂಡಕ್ಟರ್ ಟಿಕೆಟ್ ಮೆಷಿನ್ನಲ್ಲಿ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಕಂಬಯ್ಯನ ತಲೆ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಬಸ್ನಲ್ಲಿದ ಉಳಿದ ಪ್ರಯಾಣಿಕರು ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಇಷ್ಟೆಲ್ಲಾ ಮಾರಾಮಾರಿಯಾಗಿದೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 4:46 pm, Mon, 2 December 19