ಇಂದಿನಿಂದ ಕೊರೊನಾ ಸೋಂಕಿತರಿಗಾಗಿ ಕೆಎಸ್​ಆರ್​ಟಿಸಿ ವತಿಯಿಂದ ಸಂಚಾರಿ ಐಸಿಯು ಬಸ್

|

Updated on: May 19, 2021 | 1:15 PM

ರೋಗಿಗಳ ಬಿಪಿ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಇತ್ಯಾದಿಗಳನ್ನು ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದ್ದು, ಐ.ವಿ ವ್ಯವಸ್ಥೆಯನ್ನೊಳಗೊಂಡ ಬಸ್​ನಲ್ಲಿ ವೆಂಟಿಲೇಟರ್ ಸೌಲಭ್ಯ ಅಳವಡಿಸಲಾಗಿದೆ.

ಇಂದಿನಿಂದ ಕೊರೊನಾ ಸೋಂಕಿತರಿಗಾಗಿ ಕೆಎಸ್​ಆರ್​ಟಿಸಿ ವತಿಯಿಂದ ಸಂಚಾರಿ ಐಸಿಯು ಬಸ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸೋಂಕಿತರ ಸಹಾಯಕ್ಕಾಗಿ ಕೆಎಸ್​ಆರ್​ಟಿಸಿ ವತಿಯಿಂದ ಸಂಚಾರಿ ಐಸಿಯುಗೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದ್ದಾರೆ. ನಗರದ ಪ್ರದೇಶಗಳಲ್ಲಿ ಐಸಿಯು ಬೆಡ್​ಗಳಿಗೆ ಅಭಾವ ಸೃಷ್ಟಿಯಾಗಿರುವ ಕಾರಣದಿಂದ ಕೆಎಸ್​ಆರ್​ಟಿಸಿ ಬಸ್​ಗಳನ್ನೇ ಸಂಚಾರಿ ಐಸಿಯುಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಸುಮಾರು 5 ಐಸಿಯು ಬೆಡ್​ಗಳಿರುವ ಬಸ್​ಗಳು ಇಂದಿನಿಂದ ಕಾರ್ಯ ನಿರ್ವಹಿಸಲಿವೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ರೋಗಿಗಳ ಬಿಪಿ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಇತ್ಯಾದಿಗಳನ್ನು ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದ್ದು, ಐ.ವಿ ವ್ಯವಸ್ಥೆಯನ್ನೊಳಗೊಂಡ ಬಸ್​ನಲ್ಲಿ ವೆಂಟಿಲೇಟರ್ ಸೌಲಭ್ಯ ಅಳವಡಿಸಲಾಗುವುದು. ಪ್ರತಿಯೊಂದು ಬೆಡ್​ಗೂ ಆಕ್ಸಿಜನ್ ವ್ಯವಸ್ಥೆ ಇರುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ತುರ್ತು ಔಷಧಿ ವ್ಯವಸ್ಥೆ ಹಾಗೂ ಬಸ್​ನಲ್ಲೇ ಜನರೇಟರ್ ವ್ಯವಸ್ಥೆ ಇರುವ ಐಸಿಯು ಬಸ್​ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಚಾಲನೆ ಸಂದರ್ಭದಲ್ಲಿ ಲಕ್ಷ್ಮಣ ಸವದಿಗೆ ಸಚಿವ ಎಸ್.ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ.

ಗ್ರೀನ್ ಕೋ ಸಂಸ್ಥೆಯಿಂದ ಉಚಿತವಾಗಿ ಆಕ್ಸಿಜನ್ ಸಾಂದ್ರಕ
ಕರ್ನಾಟಕದಲ್ಲಿ ಆಕ್ಸಿಜನ್​ ಕೊರತೆ ಹಿನ್ನೆಲೆ ಆಕ್ಸಿಜನ್​ ಸಾಂದ್ರಕ ಹಸ್ತಾಂತರಿಸುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಮಾಡಿದ್ದ ಮನವಿಗೆ ಸ್ಪಂದಿಸಿದ ಗ್ರೀನ್ ಕೋ ಸಂಸ್ಥೆ ರಾಜ್ಯಕ್ಕೆ ಆಕ್ಸಿಜನ್ ಸಾಂದ್ರಕಗಳನ್ನು ಹಸ್ತಾಂತರ ಮಾಡಲು ಒಪ್ಪಿದೆ. ಆ ಪ್ರಕಾರವಾಗಿ ಇಂದು (ಮೇ 19) 200 ಸಾಂದ್ರಕಗಳು ಸರ್ಕಾರದ ಕೈ ಸೇರಲಿವೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ.ಸುಧಾಕರ್‌ ಆಮ್ಲಜನಕದ ಸಾಂದ್ರಕಗಳನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ:
Lockdown Relief Fund: ಅಸಂಘಟಿತ ಕಾರ್ಮಿಕರು, ರಿಕ್ಷಾ ಡ್ರೈವರ್ಸ್, ಹೂ ಬೆಳೆಗಾರರಿಗೆ ಆರ್ಥಿಕ ಸಹಾಯ ಘೋಷಿಸಿದ ಸಿಎಂ ಯಡಿಯೂರಪ್ಪ 

‘ಹೆಲ್ತ್ ಆ್ಯಂಡ್ ವೆಲ್‌ನೆಸ್ ಕೇಂದ್ರಗಳಲ್ಲಿ ನಾವೇ ನಂ.1; ಟ್ವಿಟರ್​ನಲ್ಲಿ ಸಮಾಧಾನ ವ್ಯಕ್ತಪಡಿಸಿದ ಡಾ. ಕೆ.ಸುಧಾಕರ್