ಏನಾಯ್ತು CM ಆದೇಶ? ಇನ್ನೂ ನಿಂತಿಲ್ಲ ದುಪ್ಪಟ್ಟು ಪ್ರಯಾಣ ದರ ವಸೂಲಿ!

ಬೆಂಗಳೂರು: ರಾಜಧಾನಿಯಿಂದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ಜವಾಬ್ದಾರಿ ಹೊತ್ತ ಕೆಎಸ್ಆರ್​ಟಿಸಿ ಈಗಲೂ ಕಾರ್ಮಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿದೆ. ಮೊದಲೇ ಕೊರೊನಾ ಕಾಟದಿಂದ ದೈನಂದಿನ ಜೀವನಕ್ಕೆ ಪರದಾಡುತ್ತಿರುವ ಕಾರ್ಮಿಕರಿಂದ ದುಪ್ಪಟ್ಟು ದರ ವಸೂಲಿ ಮಾಡತೊಡಗಿದ್ದ ಕೆಎಸ್ಆರ್​ಟಿಸಿ ನೀತಿಯ ವಿರುದ್ಧ ಟಿವಿ9 ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಈಗ್ಗೆ ಸ್ವಲ್ಪ ಹೊತ್ತಿಗೆ ಮುನ್ನ ಸ್ವತಃ ಸಿಎಂ ಯಡಿಯೂರಪ್ಪ ಒಂದೇ ಪ್ರಯಾಣ ದರ ಪಡೆಯುವಂತೆ ಕೆಎಸ್ಆರ್​ಟಿಸಿಗೆ ಆದೇಶಿಸಿದ್ದರು. ಆದರೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಯ್ತಾ ಸಿಎಂ ಆದೇಶ ಎಂಬಂತಾಗಿದೆ. […]

ಏನಾಯ್ತು CM ಆದೇಶ? ಇನ್ನೂ ನಿಂತಿಲ್ಲ ದುಪ್ಪಟ್ಟು ಪ್ರಯಾಣ ದರ ವಸೂಲಿ!
ಸಾಧು ಶ್ರೀನಾಥ್​

Updated on: May 02, 2020 | 1:53 PM

ಬೆಂಗಳೂರು: ರಾಜಧಾನಿಯಿಂದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ಜವಾಬ್ದಾರಿ ಹೊತ್ತ ಕೆಎಸ್ಆರ್​ಟಿಸಿ ಈಗಲೂ ಕಾರ್ಮಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿದೆ.

ಮೊದಲೇ ಕೊರೊನಾ ಕಾಟದಿಂದ ದೈನಂದಿನ ಜೀವನಕ್ಕೆ ಪರದಾಡುತ್ತಿರುವ ಕಾರ್ಮಿಕರಿಂದ ದುಪ್ಪಟ್ಟು ದರ ವಸೂಲಿ ಮಾಡತೊಡಗಿದ್ದ ಕೆಎಸ್ಆರ್​ಟಿಸಿ ನೀತಿಯ ವಿರುದ್ಧ ಟಿವಿ9 ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಈಗ್ಗೆ ಸ್ವಲ್ಪ ಹೊತ್ತಿಗೆ ಮುನ್ನ ಸ್ವತಃ ಸಿಎಂ ಯಡಿಯೂರಪ್ಪ ಒಂದೇ ಪ್ರಯಾಣ ದರ ಪಡೆಯುವಂತೆ ಕೆಎಸ್ಆರ್​ಟಿಸಿಗೆ ಆದೇಶಿಸಿದ್ದರು.

ಆದರೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಯ್ತಾ ಸಿಎಂ ಆದೇಶ ಎಂಬಂತಾಗಿದೆ. ಕಾರ್ಮಿಕರ ಸಿಂಗಲ್ ಫೇರ್ ಪ್ರಯಾಣ ದರ ನೀತಿ ಬದಲಾಗಿರುವುದು ಇನ್ನೂ ಜಾರಿಗೆ ಬಂದಿಲ್ಲ. ಈಗಲೂ ಕಾರ್ಮಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಟಿವಿ9 ರಿಯಾಲ್ಟಿ ಚೆಕ್​ನಲ್ಲಿ ಕೆಎಸ್ಆರ್​ಟಿಸಿ ಅಧಿಕಾರಿಗಳು ಮೆಜೆಸ್ಟಿಕ್​ನಲ್ಲಿ ದುಪ್ಪಟ್ಟು ಹಣ ಪಡೆಯುತ್ತಿರುವ ಬೆಳಕಿಗೆ ಬಂದಿದೆ.

Published On - 1:50 pm, Sat, 2 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us