ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕುರಿತು ಜ.14ರೊಳಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರಕ್ಕೆ ಮುಜುಗರವಾಗುವಂತೆ ಪಾದಯಾತ್ರೆ ನಡೆಸುತ್ತೇವೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.
ಈ ಹಿಂದೆಯೇ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆಗೆ ಮುಂದಾಗಿದ್ದೇವು. ಆದರೆ, ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಭರವಸೆ ನೀಡಿದ ಕಾರಣ ಪಾದಯಾತ್ರೆಯನ್ನು ಮುಂದೂಡಿದ್ದೆವು. ಆದರೆ ಈಗ ಅವರು ನೀಡಿದ ಗಡುವು ಮುಗಿದಿದ್ದು, ಪಾದಯಾತ್ರೆ ನಡೆಸುತ್ತೇವೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ತಿಳಿಸಿದ್ದಾರೆ.
ಜನವರಿ 9 ರಂದು ಸಚಿವ ಸಿ.ಸಿ.ಪಾಟೀಲ್ ಸರ್ಕಾರದ ಪ್ರತಿನಿಧಿಯಾಗಿ ನಿಯೋಗದೊಂದಿಗೆ ಕೂಡಲ ಸಂಗಮಕ್ಕೆ ಬರುತ್ತಿದ್ದಾರೆ. ಆದರೂ ಪಾದಯಾತ್ರೆ ಸಂಬಂಧ ಈಗಾಗಲೇ ಜಿಲ್ಲಾವಾರು ಪ್ರವಾಸ ಕೈಗೊಳ್ಳುತ್ತಿದ್ದೇವೆ. ಜನವರಿ 14 ರಿಂದ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪನವರು ತಮ್ಮ ಪರಮಾಧಿಕಾರ ಬಳಸಿ ಪಂಚಮಸಾಲಿ ಸಮಾಜವನ್ನು 2A ಗೆ ಸೇರಿಸಬೇಕು.ಇಲ್ಲದಿದ್ದರೆ ಎಲ್ಲ ಲಿಂಗಾಯಿತ ಪಂಗಡಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡಬೇಕು. ಪಾದಯಾತ್ರೆ ಸಂದರ್ಭದಲ್ಲಿ ಸಮಾಜದ ಯುವಕರು ಹೋರಾಟ ನಡೆಸಲಿದ್ದು, ಸರ್ಕಾರಕ್ಕೆ ಮುಜುಗರವಾಗುವುದು ಖಚಿತ. ಜನವರಿ 14 ರ ಮೊದಲು ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಅವರು ತಿಳಿಸಿದ್ದಾರೆ.
Published On - 7:56 pm, Tue, 5 January 21