ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಗೆಗಳ ನಿಗೂಢ ಸಾವು.. ಹಕ್ಕಿಜ್ವರ ಸಾಧ್ಯತೆ?
ಕಾಗೆಗಳ ನಿಗೂಢ ಸಾವಿನ ಹಿಂದೆ ಹಕ್ಕಿ ಜ್ವರದ ಆತಂಕ ಉಲ್ಬಣವಾಗುತ್ತಿದೆ. ವರದಿ ಬರುವ ತನಕ ಸಾವಿಗೆ ಕಾರಣ ಏನು ಎಂದು ಹೇಳುವುದು ಕಷ್ಟವಾದರೂ, ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ.

ಮಂಗಳೂರಿನ ಬಳಿ ಸತ್ತು ಬಿದ್ದಿದ್ದ ಕಾಗೆಗಳು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಮಂಜನಾಡಿ ಬಳಿ 6 ಕಾಗೆಗಳು ನಿಗೂಢವಾಗಿ ಸಾವನ್ನಪ್ಪಿವೆ. ಮಂಜನಾಡಿ ಗ್ರಾಮದ ಅರಂತಾಡಿಯಲ್ಲಿ ಕಾಗೆಗಳು ಸತ್ತು ಬಿದ್ದಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಹಕ್ಕಿ ಜ್ವರದ ಸುದ್ದಿಯೂ ಹರಿದಾಡುತ್ತಿರುವುದರಿಂದ ಭಯ ಮತ್ತಷ್ಟು ಹೆಚ್ಚಾಗಿದೆ.
ಸತ್ತುಬಿದ್ದಿದ್ದ ಕಾಗೆಗಳ ಕುರಿತಾಗಿ ಸಹಾಯಕ ಆಯುಕ್ತರು ಮತ್ತು ಪಶುವೈದ್ಯರಿಗೆ ವರದಿ ಸಲ್ಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪಿಡಿಓ ಮಂಜಪ್ಪ ಹಾಗೂ ಗ್ರಾಮಕರಣಿಕ ಕಾಗೆಗಳ ನಿಗೂಢ ಸಾವಿನ ಬಗ್ಗೆ ವರದಿ ಸಲ್ಲಿಸಿದ್ದಾರೆ. ಹಕ್ಕಿಜ್ವರ ಇರಬಹುದೆಂದು ಅಂದಾಜಿಸಲಾಗಿದೆಯಾದರೂ ವರದಿ ಬರುವ ತನಕ ಕಾದು ನೋಡಬೇಕಿದೆ.
ಅಂತರರಾಜ್ಯ ಹಕ್ಕಿ ಜ್ವರ: ಮೈಸೂರಿನಲ್ಲಿ ಹೈ ಅಲರ್ಟ್, ವಲಸೆ ಹಕ್ಕಿಗಳ ಬಗ್ಗೆ ತೀವ್ರ ನಿಗಾ