ಪ್ರೆಸ್‌ಮೀಟ್‌ಗೂ ಮುನ್ನ ಸಿದ್ದರಾಮಯ್ಯನವರ ಬಗ್ಗೆ ಪಿಸು ಮಾತು: ಕೊನೆಗೂ ಕ್ಷಮೆಯಾಚಿಸಿದ ಮುಕುಡಪ್ಪ

| Updated By: ರಮೇಶ್ ಬಿ. ಜವಳಗೇರಾ

Updated on: Nov 10, 2022 | 6:02 PM

ಪ್ರೆಸ್‌ಮೀಟ್‌ಗೂ ಮುನ್ನ ಸಿದ್ದರಾಮಯ್ಯನವರ ಬಗ್ಗೆ ಪಿಸು ಮಾತುಗಳನ್ನಾಡಿದ್ದ ಕುರುಬ ಸಮುದಾಯ ಮುಖಂಡ ಮುಕುಡಪ್ಪ ಕ್ಷಮೆ ಕೇಳಿದ್ದಾರೆ.

ಪ್ರೆಸ್‌ಮೀಟ್‌ಗೂ ಮುನ್ನ ಸಿದ್ದರಾಮಯ್ಯನವರ ಬಗ್ಗೆ ಪಿಸು ಮಾತು: ಕೊನೆಗೂ ಕ್ಷಮೆಯಾಚಿಸಿದ ಮುಕುಡಪ್ಪ
ಸಿದ್ದರಾಮಯ್ಯಗೆ ಕ್ಷಮೆ ಕೇಳಿದ ಮುಕುಡಪ್ಪ
Follow us on

ಬೆಂಗಳೂರು: ಕುರುಬ ಸಮುದಾಯದ ಮುಕುಡಪ್ಪ (Mukudappa) ಮತ್ತು ಪುಟ್ಟಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಗ್ಗೆ ಅವಹೇಳಕಾರಿ, ಕೀಳುಮಟ್ಟದ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದು, ಇದು ಭಾರೀ ಸಂಚಲನ ಮೂಡಿಸಿತ್ತು. ಅಲ್ಲದೇ ಸಿದ್ದರಾಮಯ್ಯನವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.ಇದರ ಬೆನ್ನಲ್ಲೇ ಮುಕುಡಪ್ಪ ಕ್ಷಮೆ ಕೇಳಿದ್ದಾರೆ.

Video: ರಾಜ್ಯದಲ್ಲಿ ಮತ್ತೊಂದು ಗುಸುಗುಸು, ಸಿದ್ದರಾಮಯ್ಯ ಬಗ್ಗೆ ಕುರುಬ ಸಮುದಾಯದ ಮುಖಂಡರ ಪಿಸುಮಾತು ವೈರಲ್

ಬೆಂಗಳೂರಿನಲ್ಲಿ ಇಂದು(ನ.10) ಸುದ್ದಿಗಾರರೊಂದಿಗೆ ಮಾತನಾಡಿದ ಮುಕುಡಪ್ಪ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳಿದರು.

ನಾನು ಮತ್ತು ಪುಟ್ಟಸ್ವಾಮಿ ಕುರಿ ಹಾಗೂ ಟಗರು ಬಗ್ಗೆ ಮಾತನಾಡುತ್ತಿದ್ದೆವು. ಬೊಮ್ಮಾಯಿ 20 ಕುರಿ ಹಾಗೂ ಒಂದು ಟಗರು ನೀಡುವ ಯೋಜನೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆ ವೇಳೆ ಒಂದೇ ಟಗರು 20 ಕುರಿಗಳನ್ನು ನೋಡಿಕೊಳ್ಳುತ್ತದೆ ಎಂದಿದ್ದು ನಿಜ. ಆದರೆ ಸಿದ್ದರಾಮಯ್ಯ ಬಗ್ಗೆ ಆ ಪದ ಹೇಳಿದ್ದೇನೆ ಎಂದು ಬಿಂಬಿತವಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕುರುಬರ ಸಂಘ ಹಾಗೂ ಮಠ ಕಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ನಾನೂ ಆ ಸಂದರ್ಭದಲ್ಲಿ ಅವರ ಜೊತೆ ಇದ್ದೆ ಎಂದು ಹೇಳಿದರು.

ಮುತ್ತಿಗೆ ಹಾಕಿದ್ದ ಅಭಿಮಾನಿಗಳು

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾಗಿ ಅವಹೇಳನಕಾರಿ ಮಾತನ್ನಾಡಿದ್ದ ಕುರುಬ ನಾಯಕ ಕೆ.‌ ಮುಕುಡಪ್ಪ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಬೆಂಗಳೂರಿನ ವಿಜಯನಗರದಲ್ಲಿರುವ ಕೆ. ಮುಕುಡಪ್ಪ ಮನೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಮುಕುಡಪ್ಪ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.

ಪ್ರೆಸ್‌ಮೀಟ್‌ಗೂ ಮುನ್ನ ಪಿಸು ಮಾತು

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ.‌ಮುಕುಡಪ್ಪ ಅವಹೇಳನಕಾರಿ ಪದ ಬಳಕೆ ಮಾಡಿದ್ದರು. ನ.9ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಗೂ ಮುನ್ನ ಇತರ ಮುಖಂಡರ ಜೊತೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದ ಅವರು ಈ ವೇಳೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿದ್ದರು.

ಪ್ರೆಸ್‌ಮೀಟ್‌ಗೂ ಮುನ್ನ ಪಿಸು ಮಾತುಗಳನ್ನು ಇತರರ ಜೊತೆ ಮಾತನಾಡುತ್ತಿದ್ದ ಮುಕುಡಪ್ಪ, ಮುರುಘಾ ಶರಣರಿಗೆ ಹೋಲಿಕೆ ಮಾಡಿ ಸಿದ್ದರಾಮಯ್ಯನವರ ವೈಯಕ್ತಿಕ ಹಾಗೂ ಖಾಸಗಿ ವಿಚಾರಗಳ ಬಗ್ಗೆಯೂ ಉಲ್ಲೇಖಿಸಿದ್ದರು. ಮುಕುಡಪ್ಪ ಸಿದ್ದರಾಮಯ್ಯ ಕುರಿತಾಗಿ ಬಳಕೆ ಮಾಡಿರುವ ಪದಗಳು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

 

Published On - 5:48 pm, Thu, 10 November 22