ಮಡಿಕೇರಿ: ಕುಶಾಲನಗರ ತಾಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟದ ಜಟಾಪಟಿ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರದ ಎಪಿಎಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ತಾಲೂಕು ರಚನಾ ಹೋರಾಟಗಾರರನ್ನು ಕಡೆಗಣಿಸಿರುವ ಆರೋಪದ ಮೇಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಕೈ’ ಕಾರ್ಯಕರ್ತರ ಪ್ರತಿಭಟನೆ ನಡೆದಿದ್ದು, ಕಂದಾಯ ಸಚಿವ ಆರ್.ಅಶೋಕ್ ಸಮ್ಮುಖದಲ್ಲೇ ಜಟಾಪಟಿಯಾಗಿದೆ.
ಕುಶಾಲನಗರ ತಾಲೂಕು ಉದ್ಘಾಟಿಸಿದ ಸಚಿವ ಆರ್.ಅಶೋಕ್ಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ದಾರೆ. ಜಟಾಪಟಿ ವೇಳೆ ಮೂಕ ಪ್ರೇಕ್ಷಕರಾದ ಸಚಿವ ಆರ್.ಅಶೋಕ್, ಕಾರ್ಯಕ್ರಮದ ವೇದಿಕೆಯಲ್ಲಿ ಸುಮ್ಮನೆ ನಿಲ್ಲುವಂತಾಗಿದೆ.
ಕೊಡಗಿನಲ್ಲಿ ನೂತನ ಕುಶಾಲನಗರ ತಾಲ್ಲೂಕು ಉದ್ಘಾಟನೆ ಆಗಿದೆ. ಕಂದಾಯ ಸಚಿವ ಆರ್. ಅಶೋಕ್ ಹೊಸ ತಾಲ್ಲೂಕು ಉದ್ಘಾಟಿಸಿದ್ದಾರೆ. ಕುಶಾಲನಗರ ಎಪಿಎಂಸಿ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಈ ಮೊದಲು ಸೋಮವಾರಪೇಟೆ ತಾಲ್ಲೂಕಿನ ಭಾಗವಾಗಿದ್ದ ಕುಶಾಲನಗರ, ಕೊಡಗು ಜಿಲ್ಲೆಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.
ಕೆಆರ್ಎಸ್ ಡ್ಯಾಂ ಬಿರುಕು ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಆರ್. ಅಶೋಕ್ ಮಾತನಾಡಿದ್ದಾರೆ. ವೈಜ್ಞಾನಿಕ ಆಧಾರವಿಲ್ಲದೇ ಯಾರೂ ಮಾತನಾಡಬಾರದು. ಕೆಆರ್ಎಸ್ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ. ಈ ಕುರಿತು ಇಂಜಿನಿಯರ್ಗಳೇ ವರದಿಯನ್ನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ, ಸುಮಲತಾ ಜಟಾಪಟಿ ವಿಚಾರವಾಗಿ ಮಾತನಾಡಿದ್ದಾರೆ. ಅವರಿಬ್ಬರದ್ದೂ ಮುಗಿಯದ ಯುದ್ಧ ಎಂದ ಅಶೋಕ್, ಇಸ್ತೇಲ್-ಪ್ಯಾಲೆಸ್ತೀನ್ ಯುದ್ಧದಂತೆ ಅವರದ್ದು ಮುಗಿಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್
ಮೇಕೆದಾಟು ಯೋಜನೆ ಮಾಡಲು ನಿರ್ಧರಿಸಿ ಆಗಿದೆ; ಯಾರನ್ನೋ ಕೇಳಿ ಮಸಾಲೆ ಅರೆಯೋಕಾಗಲ್ಲ: ಆರ್. ಅಶೋಕ್