ನದಿ ನೀರಲ್ಲಿ ಕೊಚ್ಚಿ ಹೋದ ಕ್ಯಾಂಟರ್ ಚಾಲಕ: ಸಿನಿಮೀಯ ಮಾದರಿ ರಕ್ಷಣೆ
ಕುಶಾವತಿ ನದಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಚೇಳೂರು ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ರಕ್ಷಿಸಲಾಗಿದೆ. ಕ್ಯಾಂಟರ್ ಕೆಟ್ಟುನಿಂತ ಪರಿಣಾಮ, ಚೇಳೂರು ತಾಲ್ಲೂಕಿನ ಪೆದ್ದೂರು ಗುಂಡ್ಲಹಳ್ಳಿ ಗ್ರಾಮದ ವಿಜಯ್ ವಾಹನದಿಂದ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಅವರು ಕೊಚ್ಚಿಹೋಗಿದ್ದು, ಕೊಂಬೆಯೊಂದನ್ನು ಹಿಡಿದು ಜೀವ ಉಳಿಸಿಕೊಂಡಿದ್ದರು. ಇದನ್ನು ಗಮನಿಸಿರುವ ಸ್ಥಳೀಯರು ಚಾಲಕನನ್ನು ರಕ್ಷಿಸಿದ್ದಾರೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 24: ಭಾರಿ ಮಳೆಯಿಂದ (Rain) ಮೈದುಂಬಿ ಹರಿಯುತ್ತಿರುವ ಕುಶಾವತಿ ನದಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಚೇಳೂರು ತಾಲೂಕನ ಹೊಸಹುಡ್ಯ ಗ್ರಾಮದ ಬಳಿ ರಕ್ಷಿಸಲಾಗಿದೆ. ಹರಿಯುತ್ತಿರುವ ನೀರಿನ ಮಧ್ಯೆ ಕ್ಯಾಂಟರ್ ಕೆಟ್ಟುನಿಂತ ಪರಿಣಾಮ, ಚೇಳೂರು ತಾಲ್ಲೂಕಿನ ಪೆದ್ದೂರು ಗುಂಡ್ಲಹಳ್ಳಿ ಗ್ರಾಮದ ವಿಜಯ್ ವಾಹನದಿಂದ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಅವರು ಕೊಚ್ಚಿಹೋಗಿದ್ದು, ಕೊಂಬೆಯೊಂದನ್ನು ಹಿಡಿದು ಜೀವ ಉಳಿಸಿಕೊಂಡಿದ್ದಾರೆ. ಇದನ್ನು ಗಮನಿಸಿರುವ ಹೊಸಹುಡ್ಯ ಗ್ರಾಮಸ್ಥರು, ಜೆಸಿಬಿ ಮೂಲಕ ಚಾಲಕನ ರಕ್ಷಣೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.