ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​ನಲ್ಲಿ ಅಂಗೀಕಾರ; JDS ಬೆಂಬಲ

| Updated By: ಸಾಧು ಶ್ರೀನಾಥ್​

Updated on: Dec 09, 2020 | 10:01 AM

ವಿವಾದಿತ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಪರಿಷತ್​​ನಲ್ಲಿ ಅಂಗೀಕಾರವಾಯಿತು.

ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​ನಲ್ಲಿ ಅಂಗೀಕಾರ; JDS ಬೆಂಬಲ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ವಿವಾದಿತ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಪರಿಷತ್​​ನಲ್ಲಿ ಅಂಗೀಕಾರವಾಯಿತು. ಕಾಂಗ್ರೆಸ್​ ವಿರೋಧಿಸಿದ್ದರೂ, ಜೆಡಿಎಸ್​ ಬೆಂಬಲದ ಮೂಲಕ ಪಾಸ್ ಆಯಿತು. ವಿಧೇಯಕದ ಪರ 31 ಹಾಗೂ ವಿರುದ್ಧ 27 ಮತಗಳು ಬಿದ್ದವು.​ ಜೆಡಿಎಸ್​ ಬೆಂಬಲವನ್ನು ಬಿಜೆಪಿ ನಾಯಕರು ಮೇಜು ಕುಟ್ಟುವ ಮೂಲಕ ಸ್ವಾಗತಿಸಿದರು.

ಈ ವಿಧೇಯಕ ವಿಧಾನಸಭೆಯಲ್ಲಿ ಸೆಪ್ಟೆಂಬರ್​ನಲ್ಲಿ ಅಂಗೀಕಾರವಾಗಿತ್ತು. ಅಂದೂ ಕೂಡ ವಿಪಕ್ಷಗಳು ವಿರೋಧಿಸಿದ್ದವು. ಕಂದಾಯ ಸಚಿವ ಆರ್​.ಅಶೋಕ್ ಮಂಡನೆ ಮಾಡಿ, ಬಿಲ್​ ಸಮರ್ಥಿಸಿಕೊಂಡಿದ್ದರು.  ಕಾಂಗ್ರೆಸ್ ನಾಯಕರಂತೂ ಸಭಾತ್ಯಾಗವನ್ನೂ ಮಾಡಿದ್ದರು. ಅಷ್ಟೆಲ್ಲ ಆದರೂ ವಿಧೇಯಕದಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಅಂಗೀಕಾರವಾಗಿತ್ತು.

ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದಾಗ, ಸರ್ಕಾರಕ್ಕೆ ತರಾತುರಿ ಏಕೆ ಎಂದು ಪ್ರಶ್ನಿಸಿದ್ದ ಎಚ್. ಡಿ.ಕುಮಾರಸ್ವಾಮಿಯವರ ಪಕ್ಷ ಇಂದು ವಿಧಾನಪರಿಷತ್​ನಲ್ಲಿ ಬಿಲ್​ ಬೆಂಬಲಿಸಿದ್ದು ವಿಶೇಷ.

Published On - 5:29 pm, Tue, 8 December 20