Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ.ಕೆ.ಹರಿಪ್ರಸಾದ್​-ಆಯನೂರು ಮಂಜುನಾಥ್​ ನಡುವೆ ಪರಿಷತ್​ನಲ್ಲಿ ‘ಡಸ್ಟ್​ಬಿನ್’ ಕಿತ್ತಾಟ

ಕರ್ನಾಟಕದ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಪರಿಷತ್​ನಲ್ಲಿ ಬಿ.ಕೆ.ಹರಿಪ್ರಸಾದ್ ಮಾತನಾಡುತ್ತಿದ್ದರು. ಆದರೆ ಮಧ್ಯಪ್ರವೇಶ ಮಾಡಿದ ಆಯನೂರು ಮಂಜುನಾಥ್ ಕಿಚಾಯಿಸಿದರು.

ಬಿ.ಕೆ.ಹರಿಪ್ರಸಾದ್​-ಆಯನೂರು ಮಂಜುನಾಥ್​ ನಡುವೆ ಪರಿಷತ್​ನಲ್ಲಿ ‘ಡಸ್ಟ್​ಬಿನ್’ ಕಿತ್ತಾಟ
ಆಯನೂರು ಮಂಜುನಾಥ್​(ಎಡ)-ಬಿ.ಕೆ.ಹರಿಪ್ರಸಾದ್​ (ಬಲ)
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Dec 08, 2020 | 4:09 PM

ಬೆಂಗಳೂರು: ಇಂದು ವಿಧಾನ ಪರಿಷತ್​ನಲ್ಲಿ ಬಿ.ಕೆ. ಹರಿಪ್ರಸಾದ್​ ಮತ್ತು ಆಯನೂರು ಮಂಜುನಾಥ್​ ನಡುವೆ ‘ಡಸ್ಟ್​ಬಿನ್’ ಗಲಾಟೆ ನಡೆಯಿತು. ಆಯನೂರು ಮಂಜುನಾಥ್​ ಟೀಕೆಗೆ, ಹರಿಪ್ರಸಾದ್ ಕಟು ತಿರುಗೇಟು ನೀಡಿದರು.

ಕರ್ನಾಟಕದ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಪರಿಷತ್​ನಲ್ಲಿ ಬಿ.ಕೆ.ಹರಿಪ್ರಸಾದ್ ಮಾತನಾಡುತ್ತಿದ್ದರು. ಆದರೆ ಮಧ್ಯಪ್ರವೇಶ ಮಾಡಿದ ಆಯನೂರು ಮಂಜುನಾಥ್​, ನಾನು ಮತ್ತು ಬಿ.ಕೆ.ಹರಿಪ್ರಸಾದ್​ ರಾಜ್ಯಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ದೇಶ, ಪ್ರಪಂಚದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡವರು. ಅಗಾಧವಾದ ಜ್ಞಾನ ಉಳ್ಳವರು. ಆದರೆ ಅವರ ಜ್ಞಾನವನ್ನೆಲ್ಲ ಇದು ಇಲ್ಲಿ ಡಸ್ಟ್​ಬಿನ್​ಗೆ ಸುರಿಯುತ್ತಿದ್ದಾರೆ ಎಂದು ಕಿಚಾಯಿಸಿದರು.

ತೀವ್ರ ವಿರೋಧ, ತಿರುಗೇಟು ಆದರೆ ಆಯನೂರು ಮಂಜುನಾಥ್ ಹೇಳಿಕೆಗೆ ಹರಿಪ್ರಸಾದ್ ಸೇರಿ, ಇತರ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಾನು ಕರ್ನಾಟಕ ಭಾರತದ ಒಂದು ಭಾಗ ಎಂದೇ ಭಾವಿಸಿ ಮಾತನಾಡುತ್ತಿದ್ದೇನೆ. ಹೀಗೆ ಡಸ್ಟ್​ಬಿನ್​ ಎಂಬ ಶಬ್ದ ಬಳಕೆ ಮಾಡುವುದು ಸರಿಯೇ? ರಾಜ್ಯ ಸರ್ಕಾರ ತಂದಿರುವ ಭೂ ಸುಧಾರಣಾ ಕಾಯ್ದೆ ಡಸ್ಟ್​ಬಿನ್​ಗೆ ಅಲ್ಲ, ಚರಂಡಿಗೆ ಎಸೆಯಲೂ ಲಾಯಕ್ಕಿಲ್ಲ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು. ಅದಾದ ಬಳಿಕ ಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ, ಡಸ್ಟ್​ಬಿನ್​ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು.

ಗಟ್ಟಿಯಾಗಿ ಹೋಗಿ ಕೇಳ್ರೀ.. ನೀವು ಕೊಟ್ಟ 525 ಕೋಟಿ ಪರಿಹಾರ ಸಾಕಾಗಲ್ಲ ಅಂತಾ -ಸಿದ್ದು ಗುಟುರು

ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ