ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲು ರೈತರ ನಿರಾಸಕ್ತಿ.. ಅವಸಾನದತ್ತ ಸಾಗಿದ ತಳಿ

ಹಾವೇರಿ ಜಿಲ್ಲೆಯ ಬ್ಯಾಡಗಿ ಅಂದ್ರೆ ಸಾಕು ಥಟ್ಟನೆ ನೆನಪಾಗೋದು ಮೆಣಸಿನಕಾಯಿ. ಬ್ಯಾಡಗಿ ಮೆಣಸಿನಕಾಯಿಯ ಘಾಟು ವಿಶ್ವದ ಎಲ್ಲೆಲ್ಲೂ ಹರಡಿದೆ. ಆದ್ರೆ ಅದರ ಘಾಟು, ಟೇಸ್ಟು ಈಗ ಮೊದಲಿನಂತೆ ಉಳಿದಿಲ್ಲ.

ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲು ರೈತರ ನಿರಾಸಕ್ತಿ.. ಅವಸಾನದತ್ತ ಸಾಗಿದ ತಳಿ
ಬ್ಯಾಡಗಿ ಮೆಣಸಿನಕಾಯಿ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Dec 08, 2020 | 3:27 PM

ಹಾವೇರಿ: ಒಂದು ಕಾಲದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯೋದ್ರಲ್ಲಿ ಹಾವೇರಿ ಸಖತ್ ಫೇಮಸ್ ಆಗಿತ್ತು. ಇಡೀ ಜಿಲ್ಲೆಯಲ್ಲಿ ಬ್ಯಾಡಗಿ ತಳಿ ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು. ವಿಶ್ವದಲ್ಲೆಡೆ ಸಖತ್ ಹೆಸರು ವಾಸಿಯಾಗಿತ್ತು. ಆದ್ರೆ ಈಗ ಬ್ಯಾಡಗಿ ತಳಿ ಮೆಣಸಿನಕಾಯಿ ಬೆಳೆಯೋರ ಸಂಖ್ಯೆ ತೀರಾ ಕಡಿ‌ಮೆ ಆಗಿದೆ.

ವಿಶೇಷವಾಗಿ ಮಳೆಯನ್ನೇ ಆಶ್ರಯಿಸಿ ಬೆಳೆಯುತ್ತಿದ್ದ ಈ ತಳಿ ಮೆಣಸಿನಕಾಯಿ ಸಾಕಷ್ಟು ರುಚಿಭರಿತವಾಗಿ ಇರ್ತಿತ್ತು. ನಂತರ ಧಾರವಾಡ, ಅಣ್ಣಿಗೇರಿ ಕಡೆಗಳಲ್ಲಿ ರೈತರು ಬ್ಯಾಡಗಿ ಬೆಳೆಯೋಕೆ ಶುರು ಮಾಡಿದ್ರು. ಆದ್ರೆ ಕಾರಣಗಳಿಂದ ಈ ತಳಿ ಬೆಳೆಯೋರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಯಾಕಂದ್ರೆ ಬ್ಯಾಡಗಿ ಬೆಳೀತಿದ್ದ ಬಹುತೇಕ ರೈತರು ಹತ್ತಿ, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ನಂಥಾ ಬೆಳೆಗಳನ್ನ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಹೀಗಾಗಿ ಬ್ಯಾಡಗಿ ಬೆಳೆಯೋರ ಸಂಖ್ಯೆ ತೀರಾ ಕಡಿಮೆಯಾಗಿದೆ. ಸರಕಾರ ಬ್ಯಾಡಗಿ ತಳಿಯ ಮೆಣಸಿನಕಾಯಿ ಅಭಿವೃದ್ಧಿ ಮಾಡಲು ಮುಂದಾಗಬೇಕಿದೆ ಎಂದು ಸ್ಥಳೀಯ ರೈತರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅವಸಾನದತ್ತ ಬ್ಯಾಡಗಿ ಮೆಣಸಿನಕಾಯಿ: ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬ್ಯಾಡಗಿ ತಳಿ ಮೆಣಸಿನಕಾಯಿ ಬೆಳೆಯಲಾಗ್ತಿತ್ತು. ಹೀಗಾಗಿ ಮಾರ್ಕೆಟ್​ನಲ್ಲಿ ಸಾವಿರ ಸಾವಿರ ಚೀಲಗಟ್ಟಲೆ ಬ್ಯಾಡಗಿ ಬರ್ತಿತ್ತು. ಆದ್ರೆ ಈಗ ಕೇವಲ‌ ಬೆರಳೆಣಿಕೆಯಷ್ಟು ರೈತರು ಮಾತ್ರ ಬ್ಯಾಡಗಿ ಬೆಳೀತಿದ್ದಾರೆ. ಇದರಿಂದ ಮಾರ್ಕೆಟ್​ನಲ್ಲಿ ಬ್ಯಾಡಗಿ ಸಿಗೋದು ಕಡಿಮೆಯಾಗಿದೆ. ಅಲ್ಲದೆ ಕ್ಯಾಪ್ಸೈಸಿನ್ ಎಂಬ ಅಂಶವನ್ನು ಬ್ಯಾಡಗಿ ಹೊಂದಿದ್ದು ಅದು ಕ್ಯಾನ್ಸರ್ ರೋಗ ಬರಲು ಕಾರಣವಾಗಿದೆ ಎಂಬುದು ಜನರಲ್ಲಿ ಬೇರೂರಿದೆ.

ಇದೂ ಕೂಡ ಬೇಡಿಕೆ ಕಡಿಮೆ ಮಾಡಲು ಕಾರಣವಾಗಿದೆ. ಹೆಚ್ಚು ಬಣ್ಣ ಹಾಗೂ ಟೇಸ್ಟ್​ನಿಂದ ವಿಶ್ವದಲ್ಲಿ ಫೇಮಸ್ ಆಗಿದ್ದ ಬ್ಯಾಡಗಿ ಕುಸಿಯುತ್ತಿದೆ. ಇದರ ಬದಲು ಬೇರೆ ಬೇರೆ ತಳಿಯ ಮೆಣಸಿನಕಾಯಿಗಳು ಮಾರ್ಕೆಟ್​ನಲ್ಲಿ ದೊರೆಯುತ್ತಿವೆ. ಈಗ ಮಾರ್ಕೆಟ್​ಗೆ ಬರ್ತಿರೋ ಮೆಣಸಿನಕಾಯಿಯಲ್ಲಿ ಬ್ಯಾಡಗಿಯಂತಹ ಟೇಸ್ಟ್ ಇಲ್ಲದಾಗಿದೆ.

ಸರ್ಕಾರಕ್ಕೂ ವರ್ತಕರು ಹಾಗೂ ಸ್ಥಳೀಯ ರೈತರು ಬ್ಯಾಡಗಿ ತಳಿ ಮೆಣಸಿನಕಾಯಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತಲೆ ಬಂದಿದ್ದಾರೆ. ಬ್ಯಾಡಗಿ ಇತಿಹಾಸದ ಪುಟಗಳನ್ನ ಸೇರೋ ಮೊದ್ಲು ಸರ್ಕಾರ ಎಚ್ಚೆತ್ತುಕೊಂಡು ತಳಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಅಂತ ವರ್ತಕರು ಒತ್ತಾಯಿಸಿದ್ದಾರೆ.

ಬ್ಯಾಡಗಿ ಮೆಣಸಿನಕಾಯಿ ಬೆಂಗಳೂರಿನಲ್ಲಿ ಗ್ರಾಹಕರಿಗೆ ಮತ್ತಷ್ಟು ಖಾರ..