ಬೆಂಗಳೂರು: (ಜುಲೈ 14): ಚಂದ್ರಯಾ-3 (Chandrayaan-3 )ಉಡಾವಣೆಗೆ ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಇಸ್ರೋದ ಚಂದ್ರಯಾನ-3 ನೌಕೆ ಇಂದು(ಜುಲೈ 14 ಮಧ್ಯಾಹ್ನ ನಭಕ್ಕೆ ಚಿಮ್ಮಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಕಾಯುತ್ತಿದ್ದಾರೆ ಅಲ್ಲದೇ ಚಂದ್ರಯಾನದಲ್ಲಿ ಯಾವುದೇ ವಿಘ್ನಗಳು ಬರದಂತೆ ದೇಶದ ಮೂಲೆ-ಮೂಲೆ ಪ್ರಾರ್ಥನೆ, ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಇನ್ನು ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಮಾದರಿ ಜೊತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿವೆ. ಆದ್ರೆ, ಇದನ್ನು ಬುದ್ದಿ ಜೀವಿಗಳು ಖಂಡಿಸಿದ್ದಾರೆ. ಹೌದು.. ತಿರುಪತಿಯಲ್ಲಿ ಪೂಜೆ ನೆರವೇರಿಸಿದ ನಿಲುವನ್ನು ಬುದ್ಧಿಜೀವಿಗಳು ಆಕ್ಷೇಪಿಸಿದ್ದು, ಖಂಡನಾ ಹೇಳಿಕೆಯಲ್ಲಿ ಎಡವಟ್ಟು ಮಾಡಿಕೊಂಡುಕೊಂಡು ಟ್ರೋಲ್ಗಳಿಗೆ ಆಹಾರವಾಗಿದ್ದಾರೆ.
ಇದನ್ನೂ ಓದಿ: Chandrayaan 3 Launch Live: ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ
ಚಂದ್ರಯಾನ-3ರ ಯಶಸ್ಸು ಕೋರಿ ತಿರುಪತಿಯಲ್ಲಿ ಇಸ್ರೋ ವಿಜ್ಙಾನಿಗಳ ಪೂಜೆ ಸಲ್ಲಿಕೆಗೆ ಬುದ್ದಿಜೀವಿ ಗುಂಪು ವಿರೋಧ ವ್ಯಕ್ತಪಡಿಸಿದೆ. ಡಾ ಮೂಡ್ನಾಕೂಡು ಚಿನ್ನಸ್ವಾಮಿ ನೇತೃತ್ವದ 16 ಕ್ಕೂ ಹೆಚ್ಚು ಮಂದಿಯಿಂದ ವಿರೋಧಿಸಿದ್ದು, ಇಸ್ರೋ ವಿಜ್ಙಾನಿಗಳ ನಡೆ ಖಂಡನೀಯ ಎಂದಿದ್ದಾರೆ.
ಇಸ್ರೋ ವಿಜ್ಞಾನಿಗಳ ಕೆಲಸ ಸಾಮಾನ್ಯ ಜನರ ದಿಕ್ಕು ತಪ್ಪಿಸುವಂತಿದೆ. ಸಂವಿಧಾನದ ಪರಿಚ್ಚೇದ 51a(h) ರ ಅನ್ವಯ ವೈಜ್ಙಾನಿಕ ಮನೋಭಾವ ಬೆಳೆಸುವುದು ಕರ್ತವ್ಯವಾಗಿದೆ. ಇಸ್ರೋ ವಿಜ್ಞಾನಿಗಳ ಕೆಲಸ ತಮ್ಮ ಬಗ್ಗೆ ತಮಗೇ ನಂಬಿಕೆ ಇಲ್ಲವೆಂದು ಸಾಬೀತುಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಚಂದ್ರಯಾನ ಎಂದು ಹೇಳುವ ಬದಲು ಮಂಗಳಯಾನ ಎಂದು ಖಂಡನಾ ಹೇಳಿಕೆಯಲ್ಲಿ ಬುದ್ದಿಜೀವಿಗಳು ಹೇಳಿದ್ದು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ಬುದ್ಧಿಜೀವಿಗಳನ್ನು ಟ್ರೋಲ್ ಮಾಡುವ ಮೂಲಕ ವ್ಯಂಗ್ಯ ಮಾಡಿತ್ತಿದ್ದಾರೆ.
ಆಂದ್ರ ಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ ಉಪಗ್ರಹ ಉಡಾವಣೆ ಯಶಸ್ಸಿಗೆ ವಿವಿಧ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಇನ್ನು ಧಾರವಾಡದ ಕಲಾವಿದ ವಿಶೇಷವಾಗಿ ಶುಭಕೋರಿದ್ದಾರೆ. ಧಾರವಾಡದ ಕೆಲಗೇರಿ ಬಡಾವಣೆಯ ಕಲಾವಿದ ಮಂಜುನಾಥ ಎನ್ನುವಾತ 10 ಇಂಚಿನ LMV ವಾಹಕದ ಪ್ರತಿಕೃತಿ ತಯಾರಿಸುವ ಮುಲಕ ಯಶಸ್ಸಿಗೆ ಶುಭ ಹಾರೈಸಿದ್ದಾರೆ.