ಬೆಂಗಳೂರು, ಫೆಬ್ರವರಿ 26: ಅಧಿವೇಶನ ಮತ್ತು ರಾಜ್ಯ ಸಭೆ ಚುನಾವಣೆ ಹಿನ್ನೆಲೆ ವಿಧಾನಸೌಧ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಇಂದಿನಿಂದ 28 ನೇ ತಾರೀಖು ಬೆಳಗ್ಗೆ 6 ಗಂಟೆವರೆಗೆ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದೆ. ವಿವಿಧ ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ 144ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ರಿಂದ ಆದೇಶ ನೀಡಲಾಗಿದೆ. ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ (Rajya Sabha Election) ಚುನಾವಣೆ ಮಂಗಳವಾರ ನಡೆಯಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಮತದಾನ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೂ ಹಕ್ಕು ಚಲಾವಣೆಗೆ ಅವಕಾಶವಿರಲಿದೆ. ಸಂಜೆ 4 ಗಂಟೆಯಿಂದ 5ಗಂಟೆಯವರೆಗೆ ಮತಗಳ ಎಣಿಕೆ ನಡೆಯಲಿದೆ.
ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ರಾಜ್ಯಸಭೆಯ ಲೆಕ್ಕಾಚಾರ ಜೋರಾಗಿಯೇ ಇದೆ. ಏನಾದರೂ ಮಾಡಿ ಕಾಂಗ್ರೆಸ್ ಬಿಗ್ ಶಾಕ್ ಕೊಡಬೇಕು ಅಂತ ತಂತ್ರ ಹೂಡಿರುವ ಬಿಜೆಪಿ-ಜೆಡಿಎಸ್ ಎರಡನೇ ಅಭ್ಯರ್ಥಿ ಮೂಲಕ ಕಾಂಗ್ರೆಸ್ಗೆ ಚೆಕ್ಮೆಟ್ ಕೊಡುವುದಕ್ಕೆ ಸನ್ನದ್ಧವಾಗಿದ್ದಾರೆ. ಕೊನೆ ಕ್ಷಣದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಯನ್ನ ಅಖಾಡಕ್ಕೆ ಇಳಿಸಿದ್ದು, ಕಾಂಗ್ರೆಸ್ ಮಣಿಸುವುದಕ್ಕೆ ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿದ್ದಾರೆ.
ಇದನ್ನೂ ಓದಿ: Rajya Sabha Election: ನಾಳೆ ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಭೀತಿ, ಶಾಸಕರ ಹಿಡಿದಿಡಲು ಕಾಂಗ್ರೆಸ್ ಕಸರತ್ತು
ವಿಧಾನಭೆ ಬಲಾಬಲದ ಪ್ರಕಾರ ಕಾಂಗ್ರೆಸ್ ಮೂರು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲಲು ಸುಲಭ ಅವಕಾಶ ಇತ್ತು. ಆದರೆ ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿಯ 2ನೇ ಅಭ್ಯರ್ಥಿ ಎಂಟ್ರಿಯಿಂದ ಕಾಂಗ್ರೆಸ್ಗೆ ಈಗ ಅಡ್ಡಮತದಾನದ ಭೀತಿ ಶುರುವಾಗಿದೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತದೆ. ಕಾಂಗ್ರೆಸ್ನ ಸಂಖ್ಯಾಬಲ 135 ಇರುವುದರಿಂದ ಮೂರು ಅಭ್ಯರ್ಥಿಗಳನ್ನ ಆರಾಮಾಗಿ ಗೆಲ್ಲಿಸಬಹುದು. ಇನ್ನೊಂದೆಡೆ ಬಿಜೆಪಿ ಸಂಖ್ಯಾಬಲ 66 ಆಗಿದ್ದು, ಕೇವಲ ಒಬ್ಬ ಅಭ್ಯರ್ಥಿಯನ್ನ ಮಾತ್ರ ಗೆಲ್ಲಿಸಬಹುದಾಗಿದೆ. ಇನ್ನು ಮೈತ್ರಿಕೂಟದ ಅಭ್ಯರ್ಥಿ ಆಗಿರುವ ಕುಪೇಂದ್ರ ರೆಡ್ಡಿ ಎಂಟ್ರಿಯಿಂದಾಗಿ ರಾಜ್ಯಸಭೆ ಅಖಾಡ ಹೈವೋಲ್ಟೇಜ್ ಪಡೆದುಕೊಂಡಿದೆ.
ಇದನ್ನೂ ಓದಿ: Rajya Sabha Election: ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಮತ ಕಾಂಗ್ರೆಸ್ ಅಭ್ಯರ್ಥಿಗೆ ಬಹುತೇಕ ಖಚಿತ
ಬಿಜೆಪಿ ಬಳಿ ಇರುವ 66 ಮತಗಳಲ್ಲಿ 45 ಮತಗಳು ಕಳೆದರೆ 21 ಹೆಚ್ಚುವರಿ ಮತ ಉಳಿಯಲಿದೆ. ಬಿಜೆಪಿ 21 ಮತ, ಜೆಡಿಎಸ್ ಬಳಿ ಇರುವ 19, ಪಕ್ಷೇತರ 2 ಮತ್ತು ಕೆಆರ್‌ಪಿಪಿಯ, ಸರ್ವೋದಯ ಕರ್ನಾಟಕದ ತಲಾ 1 ಮತಗಳನ್ನ ಪಡೆಯಲು ಸಾಧ್ಯವಾದರೆ 44 ಮತ ಕುಪೇಂದ್ರ ರೆಡ್ಡಿ ಪಾಲಾಗಲಿದೆ. ಕಾಂಗ್ರೆಸ್‌ನಲ್ಲಿರುವ ಅಸಮಾಧಾನಿತರಿಗೆ ಗಾಳ ಹಾಕಿ ಇನ್ನೂ ಎರಡು ಅಥವಾ 3 ಶಾಸಕರಿಂದ ಅಡ್ಡ ಮತದಾನ ಮಾಡಿಸಿದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರ ಹಾಕಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:21 pm, Mon, 26 February 24