ಮೆಡಿಕಲ್ ಕಾಲೇಜಿನ ವಸತಿ ನಿಲಯಕ್ಕೆ ಚಿರತೆ ಎಂಟ್ರಿ.. ಸಿಸಿ ಕ್ಯಾಮರಾದಲ್ಲಿ ನೋಡಿ ಬೆಚ್ಚಿಬಿದ್ದ ಸಿಬ್ಬಂದಿ

| Updated By: ಆಯೇಷಾ ಬಾನು

Updated on: Jan 07, 2021 | 9:02 AM

ಯಡಬೆಟ್ಟದ ಬಳಿ ಇರುವ ಮೆಡಿಕಲ್ ಕಾಲೇಜಿನಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಬುಧವಾರ ರಾತ್ರಿ(ಜ.06) ವಸತಿ ನಿಯಮಕ್ಕೆ ನುಗ್ಗಿದೆ ಎಂದು ತಿಳಿದು ಬಂದಿದೆ.

ಮೆಡಿಕಲ್ ಕಾಲೇಜಿನ ವಸತಿ ನಿಲಯಕ್ಕೆ  ಚಿರತೆ ಎಂಟ್ರಿ.. ಸಿಸಿ ಕ್ಯಾಮರಾದಲ್ಲಿ ನೋಡಿ ಬೆಚ್ಚಿಬಿದ್ದ ಸಿಬ್ಬಂದಿ
ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನುಗ್ಗಿದ ಚಿರತೆ
Follow us on

ಚಾಮರಾಜನಗರ: ಯಡಬೆಟ್ಟದ ಬಳಿ ಇರುವ ಮೆಡಿಕಲ್ ಕಾಲೇಜಿನ ವಸತಿ ನಿಲಯದಲ್ಲಿ ತಡ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಬುಧವಾರ ರಾತ್ರಿ(ಜ.06) ವಸತಿ ನಿಲಯಕ್ಕೆ ಚಿರತೆಯೊಂದು ನುಗ್ಗಿದೆ.

ಚಿರತೆ ಪ್ರವೇಶ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ನೋಡಿ ವೈದ್ಯರು, ವಿದ್ಯಾರ್ಥಿಗಳು, ನರ್ಸ್ ಸೇರಿದಂತೆ ವಸತಿ ನಿಲಯ ಸಿಬ್ಬಂದಿಗಳು ಭಯಗೊಂಡಿದ್ದಾರೆ. ಮೆಡಿಕಲ್ ಕಾಲೇಜಿನ ಸುತ್ತಮುತ್ತ ಕಾಂಪೌಂಡ್ ಇಲ್ಲದೇ ಇರುವುದರಿಂದ ಚಿರತೆ ವಸತಿ ನಿಲಯಕ್ಕೆ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ. ತಡರಾತ್ರಿ ವಸತಿ ನಿಲಯಕ್ಕೆ ಎಂಟ್ರಿ ಕೊಟ್ಟ ಚಿರತೆ ಅಲ್ಲಿಂದ ಬೇಗನೇ ಕಾಲ್ಕಿತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೂ ಶುರುವಾಯ್ತು ಚಿರತೆ ದಾಳಿಯ ಭೀತಿ