ಚಿರತೆ ಕಾರ್ಯಾಚರಣೆ ತಂಡದ ಅರವಳಿಕೆ ತಜ್ಞ ಡಾ ಕಿರಣ್ ಮೇಲೆ ವ್ಯಾಘ್ರ ದಾಳಿ, ಕತ್ತಿನ ಮೇಲೆ ಪರಚಿದ ಗಾಯಗಳು
ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ದಂದಿ ನೀಡಿರುವ ಮಾಹಿತಿ ಪ್ರಕಾರ ಚಿರತೆಯು ಈ ಭಾಗದಲ್ಲಿನ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಪಾಳುಬಿದ್ದಿರುವ ಕಟ್ಟಡವೊಂದರಲ್ಲಿ ಅವಿತುಕೊಂಡಿದೆ. ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಸೆರೆಯಾಗಿರುವುದನ್ನು ನೋಡಬಹುದು.
ಬೆಂಗಳೂರು: ಆಪರೇಶನ್ ಚಿರತೆ (Operation Leopard) ತಂಡದ ಭಾಗವಾಗಿರುವ ಅರವಳಿಕೆ (anaesthesia expert) ತಜ್ಞ ಡಾ ಕಿರಣ್ (Dr Kiran) ಚಿರತೆ ದಾಳಿ ಮಾಡಿದ್ದು ಅವರ ಕತ್ತಿನ ಭಾಗದಲ್ಲಿ ಪರಚಿದ ಗಾಯಗಳಾಗಿವೆ. ಅವರನ್ನು ಅಂಬ್ಯುಲೆನ್ಸ್ ಒಂದರಲ್ಲಿ ಕೂಡಲೇ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಈ ಚಿರತೆ ಬಗ್ಗೆ ನಾವು ಈಗಾಗಲೇ ಸಾಕಷ್ಟು ವರದಿ ಮಾಡಿದ್ದೇವೆ. ಅಕ್ಟೋಬರ್ 28 ರ ಬೆಳಗಿನ ಜಾವ ಅದು ನಗರದ ಹೊರವಲಯ ಆನೇಕಲ್ ನಲ್ಲಿರುವ ಸಿಂಗಸಂದ್ರದ ಅಪಾರ್ಟ್ ಮೆಂಟ್ ಗಳ ನಡುವಿನ ಸುಮಾರು ನಾಲ್ಕೂವರೆ ಎಕರೆ ವಿಸ್ತಾರದ ಅರಣ್ಯ ಪ್ರದೇಶದಿಂದ ಒಂದು ಅಪಾರ್ಟ್ಮೆಂಟ್ ಪ್ರವೇಶಿಸಿತ್ತು. ಅಪಾರ್ಟ್ಮೆಂಟ್ ಮೊದಲ ಮಹಡಿ ಬಳಿಯ ಲಿಫ್ಟ್ ಬಳಿ ಆದು ಓಡಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ದಂದಿ ನೀಡಿರುವ ಮಾಹಿತಿ ಪ್ರಕಾರ ಚಿರತೆಯು ಈ ಭಾಗದಲ್ಲಿನ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಪಾಳುಬಿದ್ದಿರುವ ಕಟ್ಟಡವೊಂದರಲ್ಲಿ ಅವಿತುಕೊಂಡಿದೆ. ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಸೆರೆಯಾಗಿರುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ