ಅಕ್ಕಿ ಕಳ್ಳ ಎಂದೇ ಖ್ಯಾತವಾಗಿದ್ದ ಆನೆ ಸಾವು, ಅಂಬಾರಿ ಹೊರಲು ಸೂಕ್ತ ಎನಿಸಿಕೊಂಡಿದ್ದ ಗಜರಾಜ ನೆನಪು ಮಾತ್ರ

35 ವರ್ಷದ ವಿನಾಯಕನ್ ಎಂಬ ಗಂಡಾನೆ ಕುಸಿದು ಬಿದ್ದು ಮೃತಪಟ್ಟಿದೆ. ಅಕ್ಕಿ ಕಳ್ಳ, ಟ್ರೈ ಜಂಕ್ಷನ್ ಕಿಂಗ್ ಎಂದೇ ಈ ಆನೆ ಖ್ಯಾತಿ ಪಡೆದಿತ್ತು. ಅಭಿಮನ್ಯು ಬಳಿಕ ದಸರಾ ಅಂಬಾರಿ ಹೊರಲು ಈ ಆನೆ ಸೂಕ್ತ ಎಂಬ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಈ ಆನೆಗೆ ತರಬೇತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಿದೆ.

ಅಕ್ಕಿ ಕಳ್ಳ ಎಂದೇ ಖ್ಯಾತವಾಗಿದ್ದ ಆನೆ ಸಾವು, ಅಂಬಾರಿ ಹೊರಲು ಸೂಕ್ತ ಎನಿಸಿಕೊಂಡಿದ್ದ ಗಜರಾಜ ನೆನಪು ಮಾತ್ರ
ಆನೆ ಸಾವು
Follow us
TV9 Web
| Updated By: ಆಯೇಷಾ ಬಾನು

Updated on: Nov 01, 2023 | 12:35 PM

ಚಾಮರಾಜನಗರ, ನ.01: ಟ್ರೈ ಜಂಕ್ಷನ್ ಕಿಂಗ್ ಇನ್ನು ಬರಿ ನೆನಪು ಮಾತ್ರ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (Bandipur National Park)ದ ರಾಮಾಪುರ ಆನೆ ಶಿಬಿರದಲ್ಲಿ (Ramapura Elephant Camp) ಮಂಗಳವಾರ ಅಕ್ಕಿ ಕಳ್ಳ ಎಂದೇ ಖ್ಯಾತವಾಗಿದ್ದ ಗಂಡಾನೆ ಆನೆ ಹಠಾತ್‌ ಕುಸಿದು ಬಿದ್ದು ಸಾವನ್ನಪ್ಪಿದೆ. ಆನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದೆ. ಸ್ಥಳದಲ್ಲಿದ್ದ ಪಶುವೈದ್ಯರು ಮತ್ತು ಇತರ ಅರಣ್ಯ ಸಿಬ್ಬಂದಿ ಆನೆಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲಿ ಚಿಕಿತ್ಸೆ ನೀಡಿ ಪ್ರಯತ್ನಿಸಿದರು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.

35 ವರ್ಷದ ವಿನಾಯಕನ್ ಎಂಬ ಗಂಡಾನೆ ಕುಸಿದು ಬಿದ್ದು ಮೃತಪಟ್ಟಿದೆ. ಅಕ್ಕಿ ಕಳ್ಳ, ಟ್ರೈ ಜಂಕ್ಷನ್ ಕಿಂಗ್ ಎಂದೇ ಈ ಆನೆ ಖ್ಯಾತಿ ಪಡೆದಿತ್ತು. ಅಭಿಮನ್ಯು ಬಳಿಕ ದಸರಾ ಅಂಬಾರಿ ಹೊರಲು ಈ ಆನೆ ಸೂಕ್ತ ಎಂಬ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಈ ಆನೆಗೆ ತರಬೇತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಿದೆ.

ಇದನ್ನೂ ಓದಿ: ಮೈಸೂರು: ಹುಲಿ ದಾಳಿಗೆ ಬೇಸತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಥಳಿಸಿದ ಗ್ರಾಮಸ್ಥರು

ಇನ್ನು 2021 ರಲ್ಲಿ ಕೊಯಮತ್ತೂರಿನಲ್ಲಿ ಆನೆಯನ್ನು ಸೆರೆಹಿಡಿಯಲಾಗಿತ್ತು. ಮತ್ತು ತಮಿಳುನಾಡು ಅರಣ್ಯ ಇಲಾಖೆಯು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಆನೆಯನ್ನು ಬಿಟ್ಟಿತ್ತು. ಇದು ಬಂಡೀಪುರದ ಎಲಚಟ್ಟಿ ಗ್ರಾಮದ ಕಾಡಂಚಿನ ಮನೆಗಳಿಗೆ ಲಗ್ಗೆ ಇಟ್ಟು ಅಕ್ಕಿ, ತರಕಾರಿ ಕದ್ದು ತಿನ್ನುತ್ತಿತ್ತು. ಬೆಳೆ ನಾಶ ಮಾಡುತ್ತಿತ್ತು. ಹೀಗಾಗಿ ಬಂಡೀಪುರದ ಎಲಚಟ್ಟಿಯ ಗುಡ್ಡೇಕೇರಿ ಸಮೀಪ ಐದು ತಿಂಗಳ ಹಿಂದೆ ಕರ್ನಾಟಕ ಅರಣ್ಯ ಇಲಾಖೆ ಈ ಆನೆಯನ್ನು ಸೆರೆ ಹಿಡಿದಿತ್ತು. ಮತ್ತು ರಾಮಾಪುರ ಶಿಬಿರದಲ್ಲಿ ಆನೆಯನ್ನು ಇರಿಸಲಾಗಿತ್ತು. ನಿನ್ನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದೆ. ಇಂದು ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ