ನೆಲಮಂಗಲ: ಚಿರತೆ ಚರ್ಮ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿಗಳು ತುಮಕೂರು ಮೂಲದ ಫಾಲಾಕ್ಷ ಮತ್ತು ಬಸವರಾಜು ಎಂದು ತಿಳಿದು ಬದಿದೆ.
ಅಧಿಕಾರಿಗಳು ಹೊಸನಿಜಗಲ್ ಗೇಟ್ ಬಳಿ ಖದೀಮರನ್ನು ಬಂಧಿಸಿದ್ದಾರೆ. ಹಾಗೂ ಅವರ ಬಳಿಯಿದ್ದ ಚಿರತೆ ಚರ್ಮವನ್ನು ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಕೇಸ್ ದಾಖಲಿಸಲಾಗಿದೆ.
Published On - 4:50 pm, Thu, 7 January 21